ETV Bharat / state

ಬೇಂದ್ರೆ ನಡೆದ ದಾರಿಯಲ್ಲಿ ಬರೀ ಗುಂಡಿಗಳು...ಗಿಡನೆಟ್ಟು ಪ್ರತಿಭಟಿಸಿದ ಜನ

ಹದಗೆಟ್ಟ ರಸ್ತೆಗಳಲ್ಲಿನ ದೊಡ್ಡ ದೊಡ್ಡ ಗುಂಡಿಗಳಲ್ಲಿ ಗಿಡನೆಟ್ಟು ವಿಭಿನ್ನ ಪ್ರತಿಭಟನೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಗುಂಡಿಗಳಲ್ಲಿ ಗಿಡನೆಟ್ಟು ವಿಭಿನ್ನ ಪ್ರತಿಭಟನೆ
author img

By

Published : Aug 3, 2019, 11:15 AM IST

ಧಾರವಾಡ: ಹದಗೆಟ್ಟ ರಸ್ತೆಗಳಲ್ಲಿನ ದೊಡ್ಡ ದೊಡ್ಡ ಗುಂಡಿಗಳಲ್ಲಿ ಗಿಡನೆಟ್ಟು ವಿಭಿನ್ನ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಾಧನಕೆರೆಯ ಕಾಟನ್ ಮೆಂಟ್ ರಸ್ತೆ ಸಂಪೂರ್ಣವಾಗಿ ಗುಂಡಿಗಳಿಂದ ಆವೃತವಾಗಿದ್ದು, ವಾಹನ ಸವಾರರು ದಿನ ನಿತ್ಯ ಪರದಾಡುವಂತಾಗಿದೆ. ಅದರಲ್ಲೂ ನಿರಂತರವಾಗಿ ಮಳೆ ಬರುತ್ತಿರುವುದರಿಂದ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಬಿದ್ದು ಗಾಯಮಾಡಿಕೊಂಡ ಉದಾಹರಣೆಗಳಿವೆ ಎಂದು‌ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಗುಂಡಿಗಳಲ್ಲಿ ಗಿಡನೆಟ್ಟು ವಿಭಿನ್ನ ಪ್ರತಿಭಟನೆ

ಹೀಗಾಗಿ ದಿನನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಆದರೆ ರಸ್ತೆಗಳನ್ನು ದುರಸ್ತಿ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಇಲ್ಲಿನ ಸ್ಥಳೀಯರು ಒತ್ತಾಯಿಸಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬೇಸತ್ತ ಸ್ಥಳೀಯರು ಮತ್ತು ಜನಜಾಗೃತಿ ಸಂಘಟನೆಯ ಸದಸ್ಯರು ಸೇರಿ ರಸ್ತೆಯ ಮಧ್ಯದಲ್ಲಿಯೇ ಗಿಡಗಳನ್ನು ನೆಟ್ಟು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇನ್ಮುಂದಾದರೂ ಸ್ಥಳೀಯ ಜಿಲ್ಲಾಡಳಿತ ಮತ್ತು ‌ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಲಿ, ವಿಶೇಷ ಅಂದರೆ ವರ ಕವಿ ದರಾ ಬೇಂದ್ರೆಯವರು ನಡೆದಾಡಿದ ಒಡನಾಟದ ರಸ್ತೆ ಇದಾಗಿದೆ. ಜೊತೆಗೆ ಸಾಧನಕೆರೆ ವೀಕ್ಷಿಸಲು ಇಲ್ಲಿ ದಿನನಿತ್ಯ ಪ್ರವಾಸಿಗರು ಬರುತ್ತಾರೆ ಆದರೆ ರಸ್ತೆಗಳನ್ನು ನೋಡಿದರೆ ಧಾರವಾಡ ಸಂಸ್ಕೃತಿಗೆ ಹಿನ್ನಡೆಯಾದಂತೆ ಅಂತ ಸಂಘಟನೆಯ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

Intro:ಧಾರವಾಡ: ಹದಗೆಟ್ಟ ರಸ್ತೆಗಳಲ್ಲಿನ ದೊಡ್ಡ ದೊಡ್ಡ ಗುಂಡಿಗಳಲ್ಲಿ ಗಿಡನೆಟ್ಟು ವಿಭಿನ್ನ ಪ್ರತಿಭಟನೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಸಾಧನಕೆರೆಯ ಕಾಟನ್ ಮೆಂಟ್ ರಸ್ತೆ ಸಂಪೂರ್ಣವಾಗಿ ಗುಂಡಿಗಳಿಂದ ಆವೃತವಾಗಿದೆ.

ವಾಹನ ಸವಾರರು ದಿನ ನಿತ್ಯ ಪರದಾಡುವಂತಾಗಿದೆ. ಅದರಲ್ಲೂ ನಿರಂತರವಾಗಿ ಮಳೆ ಬರುತ್ತಿರುವುದರಿಂದ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಬಿದ್ದು ಗಾಯಮಾಡಿಕೊಂಡ ಉದಾಹರಣೆಗಳಿವೆ ಎಂದು‌ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ದಿನನಿತ್ಯ ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ಆದರೆ ರಸ್ತೆ ಗಳನ್ನ ದುರಸ್ತಿ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಇಲ್ಲಿನ ಸ್ಥಳೀಯರು ಒತ್ತಾಯಿಸಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಬೇಸತ್ತ ಸ್ಥಳೀಯರು ಮತ್ತು ಜನಜಾಗೃತಿ ಸಂಘಟನೆಯ ಸದಸ್ಯರು ಸೇರಿ ರಸ್ತೆಯ ಮಧ್ಯದಲ್ಲಿಯೇ ಗಿಡಗಳನ್ನ ನೆಟ್ಟು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.Body:ಇನ್ಮುಂದಾದರೂ ಸ್ಥಳೀಯ ಜಿಲ್ಲಾಡಳಿತ ಮತ್ತು ‌ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಲಿ. ವಿಶೇಷ ಅಂದರೆ ವರಕವಿ ದರಾ ಬೇಂದ್ರೆಯವರು ನಡೆದಾಡಿದ ಒಡನಾಟದ ರಸ್ತೆ ಇದಾಗಿದೆ. ಜೊತೆಗೆ ಸಾಧನಕೆರೆ ವೀಕ್ಷಿಸಲು ಇಲ್ಲಿ ದಿನನಿತ್ಯ ಪ್ರವಾಸಿಗರು ಬರುತ್ತಾರೆ ಆದರೆ ರಸ್ತೆಗಳನ್ನ ನೋಡಿದರೆ ಧಾರವಾಡ ಸಂಸ್ಕೃತಿಗೆ ಹಿನ್ನಡೆಯಾದಂತೆ ಅಂತ ಸಂಘಟನೆಯ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.