ETV Bharat / bharat

ಆನೆಗಳ ಮೆರವಣಿಗೆಗೆ ಕಟ್ಟಳೆ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ ದೇವಾಲಯ ಟ್ರಸ್ಟ್ - KERALA TEMPLE TRUSTS MOVES SC

ತ್ರಿಶೂರ್ ಪೂರಂ ಉತ್ಸವದಲ್ಲಿ ಆನೆಗಳ ಬಳಕೆಗೆ ವಿಧಿಸಲಾದ ನಿರ್ಬಂಧಗಳನ್ನು ಪ್ರಶ್ನಿಸಿ ದೇವಾಲಯ ಟ್ರಸ್ಟ್​ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ತ್ರಿಶೂರ್ ಪೂರಂ ಉತ್ಸವ
ತ್ರಿಶೂರ್ ಪೂರಂ ಉತ್ಸವ (IANS)
author img

By ETV Bharat Karnataka Team

Published : Dec 17, 2024, 5:10 PM IST

ನವದೆಹಲಿ: ತ್ರಿಶೂರ್ ಪೂರಂ ಉತ್ಸವದಲ್ಲಿ ಆನೆಗಳನ್ನು ಬಳಸುವುದಕ್ಕೆ ಕೇರಳ ಉಚ್ಚ ನ್ಯಾಯಾಲಯ ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸಿ ತಿರುವಂಬಾಡಿ ಮತ್ತು ಪರಮೆಕ್ಕಾವು ದೇವಸ್ವಂ ದೇವಸ್ಥಾನಗಳ ಟ್ರಸ್ಟ್​ಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಕೇರಳದ 'ಎಲ್ಲಾ ಹಬ್ಬಗಳ ತಾಯಿ' ಎಂದು ಕರೆಯಲ್ಪಡುವ ತ್ರಿಶೂರ್ ಪೂರಂ ಹಬ್ಬದ ಆಚರಣೆಯನ್ನು ಹಿಂದಿನ ಕೊಚ್ಚಿ ರಾಜ್ಯದ ಮಹಾರಾಜ ಸಕ್ತನ್ ತಂಪುರನ್ 18ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭಿಸಿದ್ದರು.

ಉತ್ಸವದಲ್ಲಿ ಮಧ್ಯಾಹ್ನ ಪ್ರಾರಂಭವಾಗುವ ಸಿಡಿಮದ್ದುಗಳ ಪ್ರದರ್ಶನ ಮತ್ತು 50ಕ್ಕೂ ಹೆಚ್ಚು ಆನೆಗಳ ಮೆರವಣಿಗೆಯು ಮರುದಿನ ಮುಂಜಾನೆಯವರೆಗೆ ಮುಂದುವರಿಯುವುದು ವಿಶೇಷ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಅಥವಾ 2012ರ ನಿಯಮಗಳಂತಹ ಕೇಂದ್ರ ಶಾಸನವನ್ನು ಉಲ್ಲಂಘಿಸದೆ ಆಚರಿಸಲಾಗುತ್ತಿರುವ ಹಬ್ಬದ ವಿಷಯದಲ್ಲಿ ಕೇರಳ ಹೈಕೋರ್ಟ್ ತಪ್ಪು ನಿಬಂಧನೆಗಳನ್ನು ವಿಧಿಸಿದೆ ಎಂದು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ವಿಶೇಷ ಅರ್ಜಿಯಲ್ಲಿ ತಿಳಿಸಲಾಗಿದೆ.

ಶಾಸನಬದ್ಧ ಚೌಕಟ್ಟಿನ ಅನುಪಸ್ಥಿತಿಯಲ್ಲಿ ಮಾತ್ರ ನ್ಯಾಯಾಂಗದ ಹಸ್ತಕ್ಷೇಪ ಅಗತ್ಯವಾಗಿದೆ ಮತ್ತು 2012ರ ನಿಯಮಗಳ ಪ್ರಕಾರ ವಿಧಿಸಲಾದ ಶಾಸನಬದ್ಧ ನಿಯಮಾವಳಿಗಳನ್ನು ನಿರ್ಲಕ್ಷಿಸುವ ಮೂಲಕ, ಕೇರಳ ಹೈಕೋರ್ಟ್ ಈ ಉತ್ಸವಗಳನ್ನು ನಿಯಂತ್ರಿಸುವಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಪಾತ್ರವನ್ನು ನಿರಂಕುಶವಾಗಿ ಬದಲಿಸಿದೆ ಎಂದು ಅದು ಹೇಳಿದೆ.

ಆನೆಗಳ ನಡುವೆ ಕನಿಷ್ಠ 3 ಮೀಟರ್ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮದಿಂದಾಗಿ ಇಡೀ ಉತ್ಸವವನ್ನೇ ನಿಲ್ಲಿಸುವ ಸ್ಥಿತಿ ಬಂದಿದೆ. ಆದರೆ ಸಾವಿರ ವರ್ಷಗಳಷ್ಟು ಹಳೆಯ ತ್ರಿಶೂರ್ ಪೂರಂನ ಅವಿಭಾಜ್ಯ ಅಂಗವಾದ ವಡಕ್ಕುಂನಾಥನ್ ದೇವಾಲಯದ ಸಂಪ್ರದಾಯವನ್ನು ಇಂಥ ನಿಯಮಗಳಿಂದ ನಿರ್ಬಂಧಿಸಬಾರದು ಎಂದು ವಕೀಲ ಅಭಿಲಾಷ್ ಎಂ.ಆರ್ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಹೇಳಲಾಗಿದೆ.

"ಸಾಂಪ್ರದಾಯಿಕ ವಿನ್ಯಾಸದ ಈ ಸ್ಥಳವು ಶತಮಾನಗಳಿಂದ ಪೂರಂನ ಕೇಂದ್ರಬಿಂದುವಾಗಿದೆ ಮತ್ತು ಕೇರಳ ಹೈಕೋರ್ಟ್​ ನಿರ್ದೇಶನವು ಐತಿಹಾಸಿಕ ಮತ್ತು ಯುನೆಸ್ಕೋ-ಮಾನ್ಯತೆ ಪಡೆದ ಸಂಪ್ರದಾಯದ ಮಹತ್ವವನ್ನು ಕಡೆಗಣಿಸಿದೆ" ಎಂದು ಅದು ಹೇಳಿದೆ.

ಕೇರಳದಲ್ಲಿ ಸೆರೆಹಿಡಿದ ಆನೆಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ದೇವಾಲಯಗಳು ಮತ್ತು ಉತ್ಸವಗಳಲ್ಲಿ ಅವುಗಳ ಮೆರವಣಿಗೆ ನಡೆಸದಂತೆ ಕೋರಿ ಸಲ್ಲಿಸಲಾದ ರಿಟ್ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಕೇರಳ ಹೈಕೋರ್ಟ್, ಸಂಪ್ರದಾಯದ ನೆಪದಲ್ಲಿ ರಾಜ್ಯದ ದೇವಾಲಯಗಳಲ್ಲಿ ಆನೆಗಳನ್ನು ಬಳಸುವಂತಿಲ್ಲ ಎಂದು ಹೇಳಿತ್ತು.

ಕೇರಳ ಹೈಕೋರ್ಟ್ ತನ್ನ ತೀರ್ಪಿನಲ್ಲಿ, "ಹಬ್ಬಗಳಲ್ಲಿ ಕಡ್ಡಾಯವಾಗಿ ಆನೆಗಳನ್ನು ಬಳಸಬೇಕೆಂದು ಯಾವುದೇ ಧರ್ಮದಲ್ಲಿ ಯಾವುದೇ ಧಾರ್ಮಿಕ ಆಚರಣೆ ಇದೆ ಎಂದು ನಾವು ನಂಬುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಾಣಿಯನ್ನು ವ್ಯಾಪಾರ ಮಾಡಬಹುದಾದ ಸರಕು ಎಂದು ಪರಿಗಣಿಸಲಾಗುತ್ತದೆ, ಅದರ ಮಾಲೀಕರು ಅಥವಾ ರಕ್ಷಕರು ವಾಣಿಜ್ಯ ಆದಾಯದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ವರದಿಗಳ ಪ್ರಕಾರ, ಕೇರಳದ ಉತ್ಸವಗಳು ಈಗ ಎಷ್ಟು ವಾಣಿಜ್ಯೀಕರಣಗೊಂಡಿವೆಯೆಂದರೆ, ಹಬ್ಬಕ್ಕೆ ಮುಂಚಿತವಾಗಿಯೇ, ಮೆರವಣಿಗೆ ಮಾಡುವ ಆನೆಗಳ ಸಂಖ್ಯೆ ಮತ್ತು ಮೆರವಣಿಗೆ ಮಾಡುವ ನಿರ್ದಿಷ್ಟ ಆನೆಗಳು / ಆನೆಗಳ ಖ್ಯಾತಿಯ ಬಗ್ಗೆ ಉತ್ಸವಗಳನ್ನು ನಡೆಸುವ ದೇವಾಲಯ ಸಮಿತಿಗಳ ನಡುವೆ ಯುದ್ಧ ಅಥವಾ ಒಂದು ರೀತಿಯ ಸ್ಪರ್ಧೆ ಇದೆ." ಎಂದು ಹೇಳಿತ್ತು.

ಇದನ್ನೂ ಓದಿ: ಟ್ರಾವೆಲ್ ಏಜೆಂಟ್​ ವಂಚನೆಯಿಂದ ಪಾಕಿಸ್ತಾನಕ್ಕೆ ಹೋಗಿದ್ದ ಮಹಿಳೆ 22 ವರ್ಷಗಳ ನಂತರ ಭಾರತಕ್ಕೆ ವಾಪಸ್ - WOMAN RETURNS INDIA AFTER 22 YEARS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.