ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಏಳು ಮಂದಿಗೆ ಜಾಮೀನು ದೊರೆತಿದೆ. ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಿದ್ಯಾರ್ಥಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ತಿಂಗಳ ಹಿಂದೆಯಷ್ಟೇ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ನಡೆದ ಗಲಭೆ ಪ್ರಕರಣದಲ್ಲಿ 156 ಮಂದಿ ಬಂಧಿತರಾಗಿದ್ದರು. ಇವರಲ್ಲಿ ಏಳು ಮಂದಿಗೆ ಜಾಮೀನು ಲಭಿಸಿದೆ. ಜಾಮೀನಿಗೆ 148 ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪಿಯುಸಿ, ಪದವಿ ಶೈಕ್ಷಣಿಕ ಹಿನ್ನೆಲೆಯಲ್ಲಿ ಆರು ಮಂದಿಗೆ ಹಾಗೂ ವೈದ್ಯಕೀಯ ಶಿಕ್ಷಣದ ಹಿನ್ನೆಲೆಯಲ್ಲಿ ಒಬ್ಬನಿಗೆ ಜಾಮೀನು ನೀಡಿದೆ ಎಂದು ಆರೋಪಿ ಪರ ವಾದ ಮಂಡಿಸಿದ್ದ ವಕೀಲ ಬಿ.ಆರ್. ಮಹ್ಮದನವರ್ ತಿಳಿಸಿದರು. ಜಾಮೀನಿನ ಮೇಲೆ ಬಿಡುಗಡೆಯಾದವರು ಬಳ್ಳಾರಿ, ಮೈಸೂರು, ಕಲಬುರಗಿ ಮತ್ತು ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಇದ್ದರು.
ಇದನ್ನೂ ಓದಿ: ಮೊಬೈಲ್ ಬಳಸಿದ್ದಕ್ಕೆ ಗದರಿಸಿದ ತಂದೆ: ಆತ್ಮಹತ್ಯೆ ಮಾಡಿಕೊಂಡ ಮುಂಗೋಪಿ ಮಗಳು