ETV Bharat / state

ರಸ್ತೆ ಪಕ್ಕ ನಿಂತವರ ಮೇಲೆ ಹರಿದ ವಿನಯ್ ಕುಲಕರ್ಣಿ ಸಹೋದರ ಪ್ರಯಾಣಿಸುತ್ತಿದ್ದ ಕಾರು: ಇಬ್ಬರ ಸಾವು

6-injured-after-truck-runs-over-people-in-dharwad
ರಸ್ತೆ ಪಕ್ಕ ನಿಂತವರ ಮೇಲೆ ಹರಿದ ಕಾರು
author img

By

Published : Apr 12, 2021, 5:12 PM IST

Updated : Apr 13, 2021, 8:04 AM IST

17:00 April 12

ರಸ್ತೆ ಪಕ್ಕ ನಿಂತವರ ಮೇಲೆ ಕಾರು ಹರಿದು ಇಬ್ಬರು ಸಾವನ್ನಪ್ಪಿ, ಇತರ ನಾಲ್ವರು ಗಾಯಗೊಂಡ ಘಟನೆ ಧಾರವಾಡದ ಬೆಳಗಾವಿ ರಸ್ತೆಯಲ್ಲಿರುವ ಕೆವಿಜಿ ಬ್ಯಾಂಕ್ ಬಳಿ ಸಂಭವಿಸಿದೆ.

ರಸ್ತೆ ಪಕ್ಕ ನಿಂತವರ ಮೇಲೆ ಹರಿದ ವಿನಯ್ ಕುಲಕರ್ಣಿ ಸಹೋದರ ಪ್ರಯಾಣಿಸುತ್ತಿದ್ದ ಕಾರು: ಇಬ್ಬರು ಸಾವು

ಧಾರವಾಡ: ರಸ್ತೆ ಪಕ್ಕ ನಿಂತವರ ಮೇಲೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್​ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದು, ಬೆಳಗಾವಿ ರಸ್ತೆಯಲ್ಲಿರುವ ಕೆವಿಜಿಬಿ ಬ್ಯಾಂಕ್ ಬಳಿ ಘಟನೆ ಸಂಭವಿಸಿದೆ.

ಶೇಖರ್​ ಹಾಗೂ ಚರಣ್​ ಎಂಬುವರು ಮೃತಪಟ್ಟಿದ್ದಾರೆ. ಅಲ್ಲದೇ, ರಸ್ತೆ ಪಕ್ಕ ನಿಲ್ಲಿಸಿದ್ದ ಐದು ಬೈಕ್‌ಗಳು ಜಖಂಗೊಂಡಿವೆ. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ‌ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್​ ಕುಲಕರ್ಣಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆ ಹಿನ್ನೆಲೆ ಕಾರಿಗೆ ಸ್ಥಳೀಯರು ಘೇರಾವ್ ಹಾಕಿದ್ದರು. 

ಈ ವೇಳೆ, ಬೇರೆ ಕಾರಿನಲ್ಲಿ ವಿಜಯ್ ಕುಲಕರ್ಣಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ರಸ್ತೆ ಪಕ್ಕದಲ್ಲಿ ನಿಂತಿದ್ದ ಐದಾರು ಬೈಕ್​ಗಳಿಗೆ ಕಾರು ಗುದ್ದಿಕೊಂಡು ಬಂದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ಕೇವಲ ಬಿಜೆಪಿ ಹೇಳಿದ್ದು ಕೇಳಬೇಡಿ: ಚುನಾವಣಾ ಆಯೋಗಕ್ಕೆ 'ಕೈ' ಮುಗಿಯುತ್ತೇನೆಂದ ಮಮತಾ!

Last Updated : Apr 13, 2021, 8:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.