ದಾವಣಗೆರೆ: ಜಮೀನಿನಲ್ಲಿ ಪಂಪ್ಸೆಟ್ ಸ್ವಿಚ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಯುವಕ ಮೃತಪಟ್ಟ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟರ ಗ್ರಾಮದ ಬಳಿ ಜಮೀನಿನಲ್ಲಿ ನಡೆದಿದೆ. ನಾಗರಾಜ (30) ಎಂಬುವರು ಸಾವನಪ್ಪಿದ ಯುವಕ.
ಮೃತ ನಾಗರಾಜ್ ಎಂದಿನಂತೆ ತಮ್ಮ ಜಮೀನಿನಲ್ಲಿ ಹಾಕಿರುವ ಶೇಂಗಾ, ಅಡಿಕೆ ಬೆಳೆಗಳಿಗೆ ನೀರು ಬಿಡಲು ಹೋಗಿದ್ದಾಗ ಅವಘಡ ಜರುಗಿದೆ. ಘಟನಾ ಸ್ಥಳಕ್ಕೆ ಜಗಳೂರು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಕರಡಿ ದಾಳಿಯಿಂದ ವ್ಯಕ್ತಿ ಗಂಭೀರ: ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಕಾಯಲು ತೆರಳಿದ್ದ ವಯೋವೃದ್ಧನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಬಸವರಾಜ್(55) ಎಂಬುವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಜಗಳೂರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಕೋತಿಗಳ ದಾಳಿ ತಪ್ಪಿಸಲು ಹೋಗಿ ಕಟ್ಟಡದಿಂದ ಬಿದ್ದು ಬಾಲಕ ಸಾವು
ಒಂದು ವರ್ಷದ ಹಿಂದೆಯೂ ಬಸವರಾಜ್ ಮೇಲೆ ಕರಡಿ ದಾಳಿ ನಡೆಸಿತ್ತು. ಇದೀಗ ಮತ್ತೆ ದಾಳಿಯಾಗಿದ್ದು, ಗಂಭೀರ ಗಾಯಗಳಾಗಿವೆ. ಕರಡಿ ದಾಳಿ ತಡೆಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಗಾಯಾಳುವಿಗೆ ಸೂಕ್ತ ಪರಿಹಾರ ಸಿಗಬೇಕೆಂಬ ಆಗ್ರಹ ಕೇಳಿಬಂದಿದೆ. ಆಸ್ಪತ್ರೆಗೆ ಅರಣ್ಯ ರಕ್ಷಕ ಆಂಜಿನಪ್ಪ ಹಾಗೂ ಅರಣ್ಯ ವೀಕ್ಷಕ ಮಂಜಪ್ಪ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ದಾವಣಗೆರೆ ಬಳಿ ಚಿರತೆ ಹಾವಳಿ..ಭಯದಲ್ಲಿ ದೊಣ್ಣೆ ಕುಡಗೋಲು ಹಿಡಿದು ಓಡಾಡುತ್ತಿರುವ ಗ್ರಾಮಸ್ಥರು