ದಾವಣಗೆರೆ: ಮನಾಲಿಯ ಮಾನಸಿಕ ಸಾಂತ್ವನ ಕೇಂದ್ರದಲ್ಲಿದ್ದಾರೆ ಎನ್ನಲಾದ ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿ ಮೂಲದ ಮಹಿಳೆ ಸುಶೀಲಮ್ಮ ಅವರನ್ನು ವಾಪಸ್ ತವರಿಗೆ ಕರೆತರಲು ಈಟಿವಿ ಭಾರತ್ ಹಾಕಿದ ಪರಿಶ್ರಮ ಕೊನೆಗೂ ಫಲಿಸಿದೆ.
ಈಗಾಗಲೇ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಉಕ್ಕಡಗಾತ್ರಿಗೆ ಹೋಗಿ ಅಲ್ಲಿ ಮನೆ ಮನೆಗಳಲ್ಲಿಯೂ ವಿಚಾರಿಸಿದ್ದಾರೆ. ಆದರೆ ಉಕ್ಕಡಗಾತ್ರಿ ಅವರು ಎನ್ನುವುದಕ್ಕೆ ಯಾವ ಪುರಾವೆ ಸಿಕ್ಕಿಲ್ಲ. ಆದರೂ ಉಕ್ಕಡಗಾತ್ರಿ ಹೆಸರು ಹೇಳಿರುವುದರಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿ ಅವರು ಸುಶೀಲಮ್ಮರನ್ನ ಕರೆತರಲು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಆದಷ್ಟು ಬೇಗ ದಾವಣಗೆರೆಗೆ ಕರೆದುಕೊಂಡು ಬಂದು ಆಕೆಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.