ETV Bharat / state

ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಉರುಸ್ ಆಚರಣೆ - ಚಮನ್ ಷಾ ವಲಿ ದರ್ಗಾ

ದಾವಣಗೆರೆ ತಾಲೂಕಿನ ಬಾತಿ ಗ್ರಾಮದಲ್ಲಿ ಹಜರತ್ ಸೈಯ್ಯದ್ ಚಮನ್ ಷಾ ವಲಿ ದರ್ಗಾದ ಉರುಸ್ ಅನ್ನು ಹಿಂದೂ ಹಾಗೂ ಮುಸ್ಲಿಂ ಬಾಂಧವರು ಒಟ್ಟಿಗೆ ಸೇರಿ ಭಾವೈಕ್ಯತೆಯಿಂದ ಆಚರಣೆ ಮಾಡಿದರು.

urus
ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಉರುಸ್
author img

By ETV Bharat Karnataka Team

Published : Dec 29, 2023, 10:25 AM IST

ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಉರುಸ್

ದಾವಣಗೆರೆ : ತಾಲೂಕಿನ ಬಾತಿ ಗ್ರಾಮದ ಹಜರತ್ ಸೈಯ್ಯದ್ ಚಮನ್ ಷಾ ವಲಿ ದರ್ಗಾದ ಉರುಸ್ ಅನ್ನು ಹಿಂದೂ-ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಆಚರಿಸಿದರು. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಪದ್ಧತಿ ಇಂದಿಗೂ ಜಾರಿಯಲ್ಲಿದೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಚಮನ್ ಷಾ ವಲಿ ದರ್ಗಾದ ಅಧ್ಯಕ್ಷರಾದ ವೆಂಕಟೇಶ್, "ಡಿಸೆಂಬರ್ ತಿಂಗಳಲ್ಲಿ ಉರುಸ್ ಆರಂಭವಾಗಿ ಐದು ವಾರ ನಡೆಯುತ್ತದೆ. ಉರುಸ್​ ಅನ್ನು ಹಿಂದೂ ಮುಸ್ಲಿಂ ಬಾಂಧವರು ಜೊತೆಯಾಗಿ ಆಚರಣೆ ಮಾಡುತ್ತಾರೆ. ಉರುಸ್ ದಿನದಂದು ಗ್ರಾಮದಲ್ಲಿರುವ ಹಿಂದೂಗಳು ಆಂಜನೇಯ ಸ್ವಾಮಿ ದೇವಾಲಯದಿಂದ ದರ್ಗಾದವರೆಗೆ ಗಂಧದ ಮೆರವಣಿಗೆ ಮಾಡುತ್ತಾರೆ. ಬಳಿಕ, ಕೊಂದುರಿ ( ಕುರಿ, ಕೋಳಿ ಕೊಯ್ದು) ಅಡಿಗೆ ತಯಾರು ಮಾಡಿ, ಮೊದಲು ಚಮನ್ ಷಾ ವಲಿಯವರಿಗೆ ಎಡೆ ಹಾಕುತ್ತಾರೆ. ನಂತರ ಆ ಅಡುಗೆಯನ್ನು ಫಕೀರರು ಬಂದು ಊಟ ಮಾಡಿದ ಬಳಿಕ ಹಿಂದೂಗಳು ತಮ್ಮ ತಮ್ಮ ಮನೆಯಲ್ಲಿ ಇತರರಿಗೆ ಊಟ ಉಣಬಡಿಸುವ ಪದ್ಧತಿ ಚಾಲನೆಯಲ್ಲಿದೆ" ಎಂದರು.

ಇದನ್ನೂ ಓದಿ : ಮುಸ್ಲಿಂ ಧರ್ಮಿಯರೇ ಇಲ್ಲದ ಗ್ರಾಮದಲ್ಲಿ ಹಿಂದೂಗಳಿಂದ ಉರುಸ್ ಆಚರಣೆ

ಈ ಧಾರ್ಮಿಕ ಸ್ಥಳಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಚಮನ್ ಷಾ ವಲಿಯವರು 1886 ರಲ್ಲಿ ಮೊದಲ ಬಾರಿಗೆ ಬಾತಿ ಗ್ರಾಮದಲ್ಲಿ ಬಾವಿ ತೋಡಿ ಗ್ರಾಮಸ್ಥರಿಗೆ ನೀರು ನೀಡಿದ್ದರು. ಅಂದಿನಿಂದ ಈ ಗ್ರಾಮದಲ್ಲಿ ಪವಾಡಗಳು ನಡೆದಿದ್ದರಿಂದ ಗ್ರಾಮಸ್ಥರು ಚಮನ್ ಷಾ ವಲಿಯವರನ್ನು ಅರಾಧಿಸುತ್ತಿದ್ದರು.‌ 400 ವರ್ಷಗಳಿಂದ ಹಿಂದೂಗಳೇ ಈ ಬಾತಿ ದರ್ಗಾವನ್ನು ಅರೈಕೆ‌ ಮಾಡ್ತಿದ್ದಾರೆ. ಈ ದರ್ಗಾದಿಂದ ಯಾವುದೇ ಒಂದು ಸಣ್ಣ ಕಲ್ಲು ತೆಗೆದುಕೊಂಡು ಹೋದರೂ ಅಂತವರಿಗೆ ಉಳಿಗಾಲವಿಲ್ಲ ಎಂಬುದು ಗ್ರಾಮಸ್ಥರ ನಂಬಿಕೆ. ದನಗಳು ಹಾಲು ಕೊಡದಿದ್ದರೆ ಇಲ್ಲಿನ ಪ್ರಸಾದ ಹಾಗೂ ಬಾವಿ ನೀರನ್ನು ಮೇವಲ್ಲಿ ತಿನ್ನಿಸಿದ್ರೆ ಸಂಜೆ ವೇಳೆಗೆ ಜಾನುವಾರುಗಳು ಹಾಲು ಕೊಟ್ಟಿರುವ ಉದಾಹರಣೆ ಇದೆ ಎಂದು ದರ್ಗಾದ ಅಧ್ಯಕ್ಷ ವೆಂಕಟೇಶ ಮಾಹಿತಿ ನೀಡಿದರು.

ಹರತ್ ಸೈಯ್ಯದ್ ಚಮನ್ ಷಾ ವಲಿ ದರ್ಗಾದ ಇತಿಹಾಸ : ಹರತ್ ಸೈಯ್ಯದ್ ಚಮನ್ ಷಾ ವಲಿ ದರ್ಗಾದ ಇತಿಹಾಸದ ಬಗ್ಗೆ ದರ್ಗಾ ನೋಡಿಕೊಳ್ಳುವವರಾದ ಸೈಯ್ಯದ್ ಸಾದೀಕ್ ಚಿಸ್ತಿ ಅವರು ಮಾತನಾಡಿ, "363 ನೇ ಗದ್ದಿಗೆ ಇದಾಗಿದ್ದು, ಪ್ರತಿ ವರ್ಷ ಜರುಗುವ ಉರುಸ್ ಅನ್ನು ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಿಗೆ ಸೇರಿ ಮಾಡುವುದು ಪ್ರತೀತಿಯಲ್ಲಿದೆ. ಇಲ್ಲಿಗೆ ಅಶೀರ್ವಾದ ಪಡೆಯಲು ದೂರದ ಮಹಾರಾಷ್ಟ್ರ, ಆಂಧ್ರ, ಕರ್ನಾಟಕದಾದ್ಯಂತ ಭಕ್ತರು ಭೇಟಿ ಕೊಡ್ತಾರೆ. ಇಲ್ಲಿ ಪವಿತ್ರ ಬಾವಿ ಇದ್ದು, ಬಾವಿಯ ನೀರು ಸೇವಿಸಿದ್ರೆ ಅನಾರೋಗ್ಯಪೀಡಿತರು ಗುಣಮುಖರಾಗುತ್ತಾರೆ. ಮನೆಯಲ್ಲಿನ ಅಶಾಂತಿ, ಭೂತ ಪಿಶಾಚಿಗಳು ದೂರ ಆಗಲಿವೆ. ಮಕ್ಕಳು ಆಗದವರು ಹರಕೆ ಕಟ್ಟಿಕೊಂಡರೆ ಈಡೇರುತ್ತದೆ. ಉರುಸ್ ದಿನದಂದು ಇಡೀ ಗ್ರಾಮದ ಹಿಂದೂ ಬಾಂಧವರು ಕುರಿ, ಕೋಳಿ ಬಲಿ ಕೊಟ್ಟು ಜಾತ್ರೆಯಂತೆ ಆಚರಣೆ ಮಾಡ್ತಾರೆ. ಐದು ವಾರಗಳ ಕಾಲ ಈ ಉರುಸ್ ನಡೆಯಲಿದೆ‌ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.