ETV Bharat / state

ಮಲಿನವಾಗುತ್ತಿದ್ದಾಳೆ ತುಂಗಭಧ್ರೆ: ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ - Harihara in Davanagere district

ದಾವಣಗೆರೆ ಜಿಲ್ಲೆಯ ಹರಿಹರದ ಬಳಿಯಿರುವ ತುಂಗಭದ್ರಾ ನದಿ ನೀರು ಕಲುಷಿತವಾಗುತ್ತಿದ್ದು, ನಿರ್ಲಕ್ಷ್ಯ ತೋರಿರುವ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tungabhadra River Pollution
ಮಲಿನವಾಗುತ್ತಿದ್ದಾಳೆ ತುಂಗಭಧ್ರೆ
author img

By

Published : Jan 2, 2021, 8:12 PM IST

ದಾವಣಗೆರೆ: ಮಧ್ಯ ಕರ್ನಾಟಕ‌ ಜನತೆಯ ಜೀವನಾಡಿ ತುಂಗಭದ್ರಾ ನದಿ ನೀರು ಕಲುಷಿತವಾಗಿ ಅನೇಕ ರೋಗ-ರುಜಿನಗಳು ಕಾಡುವ ಆತಂಕ ಎದುರಾಗಿದೆ.

ಮಲಿನವಾಗುತ್ತಿದ್ದಾಳೆ ತುಂಗಭಧ್ರೆ

ಹರಿಹರದ ಬಳಿ ಹರಿಯುವ ನದಿಗೆ ಚರಂಡಿ ನೀರು, ಕಾರ್ಖಾನೆಗಳ ಕಲುಷಿತ ನೀರು ಸೇರುತ್ತಿದೆ. ಇದರಿಂದ ತುಂಗಭದ್ರೆ ಮಲಿನವಾಗುತ್ತಿದ್ದಾಳೆ. ಪ್ರತಿ ವರ್ಷ ಸಂಕ್ರಾತಿಯಂದು ಸಾವಿರಾರು ಜನ ನದಿಯಲ್ಲಿ ಸ್ನಾನ ಮಾಡಿ ಗಂಗೆ ಪೂಜೆಗಾಗಿ ರೊಟ್ಟಿ-ಬುತ್ತಿಯನ್ನು ಕಟ್ಟಿಕೊಂಡು ಬಂದು ಕುಟುಂಬದವರು ಸೇರಿ ಊಟ ಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.‌

ಆದರೆ ಈಗ ಕಲುಷಿತ ನೀರು ನದಿಗೆ ಸೇರಿ ನೀರು ಮಲಿನವಾಗಿ ಪರಿಸರ ಹಾಳಾಗುತ್ತಿದೆ. ಕೆಲ ಕಿಡಿಗೇಡಿಗಳು ಇಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಿ ನದಿ ದಡವನ್ನು ಗಲೀಜು ಮಾಡುತ್ತಿದ್ದಾರಂತೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡು ತುಂಗಾಭದ್ರ ನದಿಯನ್ನು ಉಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.