ದಾವಣಗೆರೆ: ತಾಲೂಕು ಪಂಚಾಯಿತಿ ಸದಸ್ಯರಾಗಿದ್ದವರು, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಿಸಲು ರೂಪುರೇಷೆ ಹಾಕಿಕೊಳ್ಳುವುದನ್ನು ನಾವು ನೀವೆಲ್ಲಾ ನೋಡಿರುತ್ತೇವೆ. ಆದ್ರೆ ಇಲ್ಲೊಬ್ರು ತಾಲೂಕು ಪಂಚಾಯಿತಿ ಸದಸ್ಯತ್ವವನ್ನು ಬಿಟ್ಟು ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಹೌದು, ಮಂಜುಳಾ ಶಿವಮೂರ್ತಿ ಎನ್ನುವರು ಗ್ರಾ.ಪಂ.ಗೆ ಸ್ಪರ್ಧಿಸಿರುವ ಸದಸ್ಯೆಯಾಗಿದ್ದಾರೆ. ದಾವಣಗೆರೆ ತಾಲೂಕು ಅಣಬೇರು ಗ್ರಾ.ಪಂ.ಗೆ ಸ್ಪರ್ಧಿಸಿರುವ ಮಂಜುಳಾ ಶಿವಮೂರ್ತಿ ಅವರೊಂದಿಗೆ ಪತಿ ಸಹ ಮತ್ತೊಂದು ವಾರ್ಡ್ಗೆ ಸ್ಪರ್ಧೆ ಮಾಡಿದ್ದಾರೆ.
ಓದಿ:ಶಾಸಕ ರಾಮಚಂದ್ರಪ್ಪ ವಿಶೇಷ ಪ್ರಯತ್ನ.. ಜಗಳೂರಿನ 100 ಗ್ರಾಪಂ ಸ್ಥಾನಗಳ ಅವಿರೋಧ ಆಯ್ಕೆ
ಅಣಬೇರು ಶಿವಮೂರ್ತಿ ಹಾಗೂ ಮಂಜುಳಾ ಶಿವಮೂರ್ತಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ ದಂಪತಿಗಳಾಗಿದ್ದಾರೆ. ಮಂಜುಳಾ ಅವರ ಪತಿ ಶಿವಮೂರ್ತಿ ಕಳೆದ ಚುನಾವಣೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ, ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿ ಗೆದ್ದು, ಬಳಿಕ ಗ್ರಾ.ಪಂ. ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು.