ದಾವಣಗೆರೆ: ಪರೀಕ್ಷೆಗೆ ಹೆದರಿ ಹಾಜರಾಗದೇ ಮನೆಯಲ್ಲೇ ಕೂತಿದ್ದ ವಿದ್ಯಾರ್ಥಿನಿಯನ್ನು ಮನವೊಲಿಸಲಾಗಿತ್ತು. ಪರಿಣಾಮ ಆಕೆ ಎಸ್ಎಸ್ಎಲ್ಸಿಯಲ್ಲಿ 466 ಅಂಕ ಪಡೆದು ಮಾದರಿಯಾಗಿದ್ದಾಳೆ.
ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿನಿ ತಸ್ಮೀಯಾ ಭಾನು ವ್ಯಾಸಂಗ ಮಾಡುತ್ತಿದ್ದಳು. ಈಕೆ ಓದಿಲ್ಲ ಎಂದು ಪರೀಕ್ಷೆಗೆ ಗೈರಾಗುವ ನಿರ್ಧಾರ ಮಾಡಿದ್ದಳು.
ಈ ವಿಚಾರ ತಿಳಿದು ಬಿಇಒ ಕೆ. ಮಂಜುನಾಥ ಅವರು ವಿದ್ಯಾರ್ಥಿನಿ ಮನವೊಲಿಸಿ ಪರೀಕ್ಷೆ ಬರೆಸಿದ್ದರು. ಇದೀಗ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಶೇ.75 ರಷ್ಟು ಅಂಕವನ್ನು ಆಕೆ ಪಡೆದಿದ್ದಾಳೆ. ಈ ವಿಷಯ ತಿಳಿದು ಸ್ವತಃ ಬಿಇಒ ಅವರೇ ವಿದ್ಯಾರ್ಥಿನಿ ಮನೆಗೆ ಬಂದು ಸಿಹಿ ತಿನ್ನಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಓದಿ: ಹೃದಯ ಸಂಬಂಧಿ ಕಾಯಿಲೆ ನಡುವೆ ವಿದ್ಯಾರ್ಥಿನಿ ಸಾಧನೆ: ಶಾಸಕರಿಂದ ಹೂಗುಚ್ಛ ನೀಡಿ ಶುಭಾಶಯ