ದಾವಣಗೆರೆ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಕಮಿಷನ್ ದಂಧೆ ಬೆಣ್ಣೆ ನಗರಿಗೂ ಕಾಲಿಟ್ಟಿದೆ. ಇದೀಗ 20-20 ಕಮಿಷನ್ ಆರೋಪ ದಾವಣಗೆರೆಯಲ್ಲೂ ಕೇಳಿಬಂದಿದೆ. ಕೇಂದ್ರ ಸರ್ಕಾರಕ್ಕೆ 20 ಹಾಗೂ ರಾಜ್ಯ ಸರ್ಕಾರಕ್ಕೆ 20 ಕಮಿಷನ್ ಹೋಗ್ತಿದೆ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ಅವರು ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಈಗಾಗಲೇ ಸ್ಮಾರ್ಟ್ ಸಿಟಿ ಸೇರಿದಂತೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳು ನಡೆಯುತ್ತಿವೆ. ಇಂತಹ ಕಾಮಗಾರಿಗಳಲ್ಲಿ ಕಮಿಷನ್ ಎನ್ನುವುದು ಮಾಮೂಲು ಎನ್ನುವಂತೆ ನಡೆಯುತ್ತಿತ್ತು. ಯಾವಾಗ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ನಡೆಯಿತೋ ಆಗ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಇದೀಗ ದಾವಣಗೆರೆಯಲ್ಲಿ 20-20ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಆರೋಪಿಸಿದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಸಂಸದ ಜಿ.ಎಂ.ಸಿದ್ದೇಶ್ವರ, ಯಾರೋ ಕಟ್ಟಿದ ಹುತ್ತಕ್ಕೆ ಸೇರಿಕೊಂಡು ಶ್ರೀಮಂತಿಕೆಯ ಅಹಂಕಾರದಿಂದ ಹೀಗೆ ಮಾತನಾಡುತ್ತಾರೆ. ಯಾರೂ ಕೂಡ ಕಮಿಷನ್ ತಗೊಂಡಿಲ್ಲ. ಆ ಬದುಕು ಮಾಡಿದವರಿಗೆ ಅನುಭವ ಇದೆ, ಹಾಗಾಗಿ ಹೇಳ್ತಾರೆ ಎಂದು ಹೇಳಿದರು.
ಇದನ್ನೂ ಓದಿ: 'ಬಿಜೆಪಿಗರನ್ನು ರಕ್ಷಿಸಲು ಅಮೃತ್ ಪೌಲ್ರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಿದ್ರಾ?'