ETV Bharat / state

ನ್ಯಾ. ಸದಾಶಿವ ಆಯೋಗ ವರದಿ ಚರ್ಚಿಸದೆ ಶಿಫಾರಸು ಬೇಡ : ಬಂಜಾರ ಸಮಾಜದ ಮನವಿ

ಆಯೋಗದ ವರದಿ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಯಲಿ. ಆಗ ಜನ ಸಾಮಾನ್ಯರಿಗೆ ಅದರ ಬಗ್ಗೆ ತಿಳಿಯುತ್ತದೆ. ಹಾಗೇ ಮಾಡದೆ ನೇರ ವರದಿ ಜಾರಿಗೆ ತರುವುದು ಸರಿಯಲ್ಲ. ಒಂದು ವೇಳೆ ತಂದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು..

ಹರಿಹರ
ಹರಿಹರ
author img

By

Published : Sep 21, 2020, 6:57 PM IST

ಹರಿಹರ : ಬಹಿರಂಗ ಚರ್ಚೆಗೆ ಒಳಪಡಿಸದೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ತರದಂತೆ ಆಗ್ರಹಿಸಿ ಬಂಜಾರ ಸಮಾಜ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಶಾಸಕ ಎಸ್ ರಾಮಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಬಂಜಾರ ಸಮಾಜದ ಕಾರ್ಯಾಧ್ಯಕ್ಷ ಅರ್ಜಾನಾಯ್ಕ ಯಲವಟ್ಟಿ ಮಾತನಾಡಿ, ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ಅಸ್ಪೃಶ್ಯ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಹುಸಿ ವಾದ ಮುಂದಿಟ್ಟು ಪರಿಶಿಷ್ಟ ಜಾತಿಗಳ ಒಗ್ಗಟ್ಟು ಮುರಿಯಲು ಕೆಲವರು ಹುನ್ನಾರ ನಡೆಸಿದ್ದಾರೆ. ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಕೊರಮ, ಕೊರಚ, ಭೋವಿ ಸಮುದಾಯಗಳನ್ನು ಕೈಬಿಡಬೇಕೆಂಬ ವಾದದಲ್ಲಿ ಎಳ್ಳಷ್ಟೂ ಹುರುಳಿಲ್ಲ.

ಆಯೋಗದ ವರದಿ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಯಲಿ. ಆಗ ಜನ ಸಾಮಾನ್ಯರಿಗೆ ಅದರ ಬಗ್ಗೆ ತಿಳಿಯುತ್ತದೆ. ಹಾಗೇ ಮಾಡದೆ ನೇರ ವರದಿ ಜಾರಿಗೆ ತರುವುದು ಸರಿಯಲ್ಲ. ಒಂದು ವೇಳೆ ತಂದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಳಿಕ ಗೌರವಾಧ್ಯಕ್ಷ ಬಿ. ಮೋತ್ಯನಾಯ್ಕ ಮಾತನಾಡಿ, ಪರಿಶಿಷ್ಟ ಜಾತಿ/ಪಂಗಡಗಳ ಐಕ್ಯತೆ ಉಳಿಸಿಕೊಳ್ಳುವುದು ಮುಖ್ಯ. ಪರಸ್ಪರ ದ್ವೇಷ ಹುಟ್ಟು ಹಾಕುವ ಈ ಆಯೋಗದ ವರದಿ ಚರ್ಚೆಯಾಗದೆ ಶಿಫಾರಸು ಆಗಬಾರದು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ಈ ವರದಿಯ ದೃಢೀಕೃತ ಪ್ರತಿ ತಲುಪಬೇಕು. ಆಕ್ಷೇಪಣೆ, ತಕರಾರುಗಳಿಗೆ ಕಾಲಾವಕಾಶ ನೀಡಬೇಕು. ರಾಜ್ಯದ ಎಲ್ಲ ಜಾತಿ, ಜನಾಂಗ, ಬುಡಕಟ್ಟುಗಳ ವಾಸ್ತವ ಸ್ಥಿತಿಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು 99 ಸಮುದಾಯಗಳ ಹಿತ ಕಾಪಾಡಬೇಕು. ಕೆನೆಪದರ, ವರ್ಗೀಕರಣ ಮುಂತಾದ ವಿಚಾರಗಳಿಂದ ಐಕ್ಯತೆಯನ್ನು ಛಿದ್ರಗೊಳಿಸುವುದು ಬೇಡ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಶಿವಾನಂದ್ ಎಸ್. ಚೌಹಾಣ್, ಪ್ರಧಾನ ಕಾರ್ಯದರ್ಶಿ ಮಂಜನಾಯ್ಕ ಹೆಚ್, ಪದಾಧಿಕಾರಿಗಳಾದ ಲಕ್ಷ್ಮಣ್ ನಾಯ್ಕ, ಅಣ್ಣಪ್ಪ ಸ್ವಾಮಿ, ರಾಜನಾಯ್ಕ, ಬಾಬು ರಾಠೋಡ್, ರಘುನಾಯ್ಕ, ರವಿನಾಯ್ಕ, ಹರೀಶ್ ನಾಯ್ಕ ಸೇರಿದಂತೆ ಹಲವರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.