ETV Bharat / state

ಯತ್ನಾಳ್​ಗೆ ವಿನಾಶಕಾಲೇ ವಿಪರೀತ ಬುದ್ಧಿ: ವಿಜಯಾನಂದ ಕಾಶಪ್ಪನವರ್ - VIJAYANAND KASHAPPANAVAR

ಕರ್ನಾಟಕ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ.

vijayanand-kashappanavar
ವಿಜಯಾನಂದ ಕಾಶಪ್ಪನವರ್ (ETV Bharat)
author img

By ETV Bharat Karnataka Team

Published : Dec 2, 2024, 4:48 PM IST

ಬೆಂಗಳೂರು: ಬಸನಗೌಡ ಯತ್ನಾಳ್​ ಅವರದ್ದು ವಿನಾಶಕಾಲೇ ವಿಪರೀತ ಬುದ್ಧಿ. ಅವರು ವಿನಾಶ ಆಗಿಯೇ ಆಗ್ತಾರೆ ಎಂದು ಕರ್ನಾಟಕ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ವಿವಿ ಟವರ್ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಯತ್ನಾಳ್ ಅವರು ಪದೇ ಪದೇ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅವಮಾನ ಮಾಡುವ ರೀತಿ ಹೇಳಿಕೆ ನೀಡುತ್ತಿದ್ದಾರೆ. ಬಸವಣ್ಣ ಹೊಳೆ ಹಾರಿದರು ಅಂತ ಒಮ್ಮೆ ಹೇಳ್ತಾರೆ. ಯತ್ನಾಳ್ ಲಿಂಗಾಯತ ಪಂಚಮಸಾಲಿ ಧರ್ಮದಲ್ಲಿ ಜನಿಸಿ ಈ ರೀತಿ ಮಾತನಾಡುವುದು ಸರಿಯಲ್ಲ. ಜಗಜ್ಯೋತಿ ಬಸವಣ್ಣನವರ ಬಗ್ಗೆ ಹೇಡಿ ಎಂಬ ರೀತಿ ಮಾತಾಡಿದ್ದನ್ನು ಖಂಡಿಸುತ್ತೇನೆ‌. ಯತ್ನಾಳ್ ಕ್ಷಮೆ ಕೇಳುವುದಕ್ಕೂ ಅರ್ಹರಲ್ಲ. ಅವರು ಎಲ್ಲರ ಬಗ್ಗೆಯೂ ಮಾತನಾಡ್ತಾರೆ. ಹೇಳಿಕೆಗಳನ್ನು ನಿಲ್ಲಿಸದೇ ಇದ್ದರೆ ಬಸವ ಅನುಯಾಯಿಗಳು ಹೋರಾಟ ಮಾಡ್ತಾರೆ ಎಂದು ಎಚ್ಚರಿಕೆ ನೀಡಿದರು.

ಯತ್ನಾಳ್ ಶುಗರ್ ಫ್ಯಾಕ್ಟರಿ ಬಂದಾಗ ಸರ್ಕಾರದ ವಿರುದ್ಧ ಯಾಕೆ ಸ್ವಾಮೀಜಿಗಳು ಮಾತಾಡಬೇಕು?. ಪಂಚಮಸಾಲಿ ಹೋರಾಟ ಯತ್ನಾಳ್​ಗೆ ಸೀಮಿತವಾದ ಹೋರಾಟವಾಗಿದೆ. ಜಯ ಮೃತ್ಯುಂಜಯ ಸ್ವಾಮೀಜಿಗಳು ಕೇವಲ ಯತ್ನಾಳ್​ ಪರ ಮಾತನಾಡುತ್ತಾರೆ. ವಕ್ಫ್​ ಬಗ್ಗೆ ಯತ್ನಾಳ್ ಹೋರಾಟ ಕಪಟ ನಾಟಕ. ಅವರದ್ದು ಯಾವ ರೈತರ ಪರ ಹೋರಾಟವೂ ಅಲ್ಲ. ಹಿಂದೆ ಇದೇ ಯತ್ನಾಳ್ ಬಿಜೆಪಿ ಕಾಲದಲ್ಲಿ ನೋಟಿಸ್ ಕೊಟ್ಟಾಗ ಮಾತಾಡಲಿಲ್ಲ. ವಿಜಯೇಂದ್ರ ಟಾರ್ಗೆಟ್ ಮಾಡಿ ಯತ್ನಾಳ್ ಹೋರಾಟ‌. ವಿಜಯೇಂದ್ರ ಹಠಾವೋ ಪಾರ್ಟಿ ಬಚಾವೋ ಅಷ್ಟೇ ಯತ್ನಾಳ್ ಅವರ ಹೋರಾಟ‌. ಹಿಂದೆ ಯತ್ನಾಳ್ ಅವರ ಸರ್ಕಾರ ಇದ್ದಾಗ ಬೊಮ್ಮಾಯಿ ವಕ್ಫ್ ಬಗ್ಗೆ ಏನು ಹೇಳಿದ್ರು‌?. ಸುಮ್ಮನೆ ಯತ್ನಾಳ್ ಗುಂಪುಗಾರಿಕೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಯಾವ ಪಕ್ಷಕ್ಕೂ ಕೂಡ ಯತ್ನಾಳ್ ವಿನಯವಾಗಿಲ್ಲ ಎಂದು ಕಿಡಿಕಾರಿದರು.

ಪಂಚಮಸಾಲಿ ಸಮುದಾಯದಲ್ಲಿ ಬಿರುಕು ಮೂಡಿರುವ ವಿಚಾರವಾಗಿ ಮಾತನಾಡಿ, ಪಕ್ಷ ಆಧರಿತ ಹೋರಾಟ ಈಗ ಶುರುವಾಗಿದೆ. ಈ ಹಿಂದೆ ಈ ರೀತಿ ಇರಲಿಲ್ಲ. ಯತ್ನಾಳ್, ಜಯಮೃತ್ಯುಂಜಯ ಸ್ವಾಮೀಜಿಗಳು ಮಾಡ್ತಿದ್ದಾರೆ. ಸರ್ಕಾರಕ್ಕೆ ಧಮ್ಕಿ ಹಾಕ್ತಿದ್ದಾರೆ. ಕೆಲವರನ್ನು ಒತ್ತಾಯ ಮಾಡಿ ಪ್ರತಿಭಟನೆಗೆ ಕರೆದುಕೊಂಡು ಹೋಗ್ತಾರೆ. ಲಿಂಗಾಯತ ಧರ್ಮ ಅಂದ್ರೆ ಹಿಂದೂ ಧರ್ಮ ಅಂತಾರೆ. ಕೇವಲ ಸಂಘ ಪರಿವಾರವನ್ನ ಮೆಚ್ಚಿಸಲು ಹೇಳಿಕೆ ಕೊಡ್ತಾರೆ. ಪಕ್ಷಾತೀತ ಹೋರಾಟ ಈಗ ನಡೀತಿಲ್ಲ. ಯಾವುದೇ ಸಭೆಗೆ ನನ್ನನ್ನು ಕರೆಯುತ್ತಿಲ್ಲ. ಅವತ್ತು ವಿಧಾನಸೌಧ ಮುತ್ತಿಗೆಯನ್ನ ತಡೆದವರು ಯಾರು?. ಹಿಂದುಳಿದ ಆಯೋಗದ ವರದಿ ಪೂರ್ಣ ಬರಬೇಕಿದೆ. ಜಾತಿಗಣತಿ ವರದಿಯನ್ನ ನಾನು ಕೂಡ ಹರಿದು ಹಾಕಿದ್ದೆ ಎಂದು ಹೇಳಿದರು.

ಪಂಚಮಸಾಲಿ ಸಮುದಾಯ ಕೇವಲ ಬಿಜೆಪಿ ಪರವಾಗಿ ಇದೆ ಎಂದು ಬಿಂಬಿಸಲು ಹೊರಟಿದ್ದಾರೆ. ಯತ್ನಾಳ್ ಅವರಿಂದಾಗಿಯೇ ಪಂಚಮಸಾಲಿ ಹೋರಾಟದ ವೇಳೆ ಬೆಳಗಾವಿ ಮುತ್ತಿಗೆ ಹಾಕಲಿಲ್ಲ. ಯತ್ನಾಳ್ ಕೇವಲ ನಮ್ಮ ಸಿಎಂ ಮೇಲೆ ಆರೋಪ ಮಾಡ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಪೂರ್ಣ ಪ್ರಮಾಣದ ವರದಿ ಬಂದ ಮೇಲೆ ಮೀಸಲಾತಿ ನೀಡುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದರು.

ಇದನ್ನೂ ಓದಿ : ಯತ್ನಾಳ್​​​ಗೆ ಶೋಕಾಸ್ ನೋಟಿಸ್: 10 ದಿನಗಳೊಳಗೆ ಉತ್ತರಿಸುವಂತೆ ಹೈಕಮಾಂಡ್ ಸೂಚನೆ: ಹೋರಾಟ ಮುಂದುವರೆಯುತ್ತೆ ಎಂದ ಬಸನಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.