ETV Bharat / business

ರಿಯಾಲ್ಟಿ ಷೇರುಗಳ ಖರೀದಿ ಭರಾಟೆ: ಸೆನ್ಸೆಕ್ಸ್​ 445 & ನಿಫ್ಟಿ 144 ಪಾಯಿಂಟ್ಸ್​ ಏರಿಕೆ

ಸೋಮವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಇಳಿಕೆಯೊಂದಿಗೆ ಕೊನೆಗೊಂಡಿದೆ.

ಬಾಂಬೆ ಸ್ಟಾಕ್ ಎಕ್ಸ್​ ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ ಚೇಂಜ್ (IANS)
author img

By ETV Bharat Karnataka Team

Published : 2 hours ago

ಮುಂಬೈ: ರಿಯಾಲ್ಟಿ ಕ್ಷೇತ್ರದ ಷೇರುಗಳ ಭಾರೀ ಖರೀದಿಯ ಕಾರಣದಿಂದ ದೇಶೀಯ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಏರಿಕೆ ಕಂಡಿವೆ. ನಿಫ್ಟಿ ರಿಯಾಲ್ಟಿ ಶೇಕಡಾ 3 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಸೆನ್ಸೆಕ್ಸ್ 445.29 ಪಾಯಿಂಟ್ ಅಥವಾ ಶೇಕಡಾ 0.56 ರಷ್ಟು ಏರಿಕೆಯಾಗಿ 80,248.08 ರಲ್ಲಿ ಕೊನೆಗೊಂಡರೆ, ನಿಫ್ಟಿ 50 144.95 ಪಾಯಿಂಟ್ ಅಥವಾ ಶೇಕಡಾ 0.60 ರಷ್ಟು ಏರಿಕೆಯಾಗಿ 24,276.05 ರಲ್ಲಿ ಕೊನೆಗೊಂಡಿದೆ.

ವಿಶಾಲ ಮಾರುಕಟ್ಟೆಯಲ್ಲಿ ನಿಫ್ಟಿ ಮಿಡ್ ಕ್ಯಾಪ್ 100 ಶೇಕಡಾ 1.08 ರಷ್ಟು ಏರಿಕೆಯಾದರೆ, ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 1.04 ರಷ್ಟು ಏರಿಕೆಯಾಗಿದೆ.

ವಲಯ ಮಟ್ಟದಲ್ಲಿ ನಿಫ್ಟಿ ರಿಯಾಲ್ಟಿ, ಲೋಹ, ಮಾಧ್ಯಮ, ಆಟೋ, ಐಟಿ, ಹಣಕಾಸು ಸೇವೆ, ಫಾರ್ಮಾ, ಇಂಧನ, ಖಾಸಗಿ ಬ್ಯಾಂಕುಗಳು, ಇನ್ ಫ್ರಾ, ಸರಕುಗಳು ಹಸಿರು ಬಣ್ಣದಲ್ಲಿ ಕೊನೆಗೊಂಡರೆ, ನಿಫ್ಟಿ ಪಿಎಸ್ ಯು ಬ್ಯಾಂಕ್, ಪಿಎಸ್ಇ ಮತ್ತು ಎಫ್ಎಂಸಿಜಿ ಕೆಂಪು ಬಣ್ಣದಲ್ಲಿ ಕೊನೆಗೊಂಡವು.

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ, ಅಲ್ಟ್ರಾಟೆಕ್ ಸಿಮೆಂಟ್, ಜೆಎಸ್ ಡಬ್ಲ್ಯೂ ಸ್ಟೀಲ್, ಅದಾನಿ ಪೋರ್ಟ್ಸ್, ಟೆಕ್ ಮಹೀಂದ್ರಾ, ಎಂ &ಎಂ ಮತ್ತು ಮಾರುತಿ ಹೆಚ್ಚು ಲಾಭ ಗಳಿಸಿದವು. ಎನ್‌ಟಿಪಿಸಿ, ಹಿಂದೂಸ್ತಾನ್ ಯೂನಿಲಿವರ್, ಕೊಟಕ್ ಮಹೀಂದ್ರಾ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎಲ್ &ಟಿ ಮತ್ತು ಪವರ್ ಗ್ರಿಡ್ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ (ಬಿಎಸ್ಇ) ನಲ್ಲಿ 2,509 ಷೇರುಗಳು ಏರಿಕೆಯೊಂದಿಗೆ ಮತ್ತು 1,547 ಷೇರುಗಳು ಇಳಿಕೆಯೊಂದಿಗೆ ವಹಿವಾಟು ನಡೆಸಿದವು. ಆದರೆ 181 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಸೋಮವಾರ ಭಾರತೀಯ ರೂಪಾಯಿ ಯುಎಸ್ ಡಾಲರ್ ಎದುರು 84.73 ಯ ಹೊಸ ದಾಖಲೆಯ ಕನಿಷ್ಠ ಮಟ್ಟ ತಲುಪಿದೆ. ಇದು ಹಿಂದಿನ ದಿನದ ಮುಕ್ತಾಯಕ್ಕೆ ಹೋಲಿಸಿದರೆ 13 ಪೈಸೆ ಕಡಿಮೆಯಾಗಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ 84.59 ರಲ್ಲಿ ಪ್ರಾರಂಭವಾಯಿತು ಮತ್ತು ಯುಎಸ್ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ 84 ಕ್ಕೆ ಇಳಿಯುವ ಮೊದಲು ಸೀಮಿತ ವ್ಯಾಪ್ತಿಯಲ್ಲಿ ಚಲಿಸಿತು. ನಿರಾಶಾದಾಯಕ ಸ್ಥೂಲ ಆರ್ಥಿಕ ದತ್ತಾಂಶ ಮತ್ತು ನಿರಂತರ ವಿದೇಶಿ ನಿಧಿಯ ಹೊರಹರಿವು ಹೂಡಿಕೆದಾರರ ಭಾವನೆಗಳನ್ನು ದುರ್ಬಲಗೊಳಿಸಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಭಾರತದ ಸೌರ ಶಕ್ತಿಗೆ ಆನೆ ಬಲ ನೀಡುವ ಖಾವ್ಡಾದ ಸ್ಥಾವರ: ಏನಿದು ನವೀಕರಿಸಬಹುದಾದ ಇಂಧನ ಉದ್ಯಾನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.