ದಾವಣಗೆರೆ: ಜಿಲ್ಲೆಯಲ್ಲಿ 166 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 7210 ಕ್ಕೇರಿದೆ. ಏಳು ಮಂದಿ ವೈರಸ್ಗೆ ಬಲಿಯಾಗಿದ್ದು, ಇದುವರೆಗೆ 162 ಮಂದಿ ಮೃತಪಟ್ಟಿದ್ದಾರೆ.
ದಾವಣಗೆರೆಯಲ್ಲಿ 103, ಹರಿಹರ 17, ಜಗಳೂರು 3, ಚನ್ನಗಿರಿ 18, ಹೊನ್ನಾಳಿ 14 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ 11 ಮಂದಿಯಲ್ಲಿ ವೈರಾಣು ಇರುವುದು ಖಚಿತವಾಗಿದೆ.
ದಾವಣಗೆರೆ ತಾಲೂಕಿನ ಆರು ಮಂದಿ ಹಾಗೂ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದ 72 ವರ್ಷದ ವೃದ್ಧ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. 115 ಮಂದಿ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದುವರೆಗೆ 5030 ಜನರು ಡಿಸ್ಚಾರ್ಜ್ ಆಗಿದ್ದಾರೆ. 2018 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.