ETV Bharat / state

ಸಹೋದರನ ಪುತ್ರ ಕಣ್ಮರೆ: ಊಟ ಬಿಟ್ಟ ಶಾಸಕ ರೇಣುಕಾಚಾರ್ಯಗೆ ಪುತ್ರಿಯಿಂದ ಕೈತುತ್ತು - ರೇಣುಕಾಚಾರ್ಯ ಕುಟುಂಬ ಚಂದ್ರುಗಾಗಿ ಹುಡುಕಾಟ

ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆಯಾಗಿದ್ದಕ್ಕೆ ತೀವ್ರ ಮನನೊಂದಿದ್ದಾರೆ. ಊಟ ಬಿಟ್ಟು ಅವರು ಕಣ್ಣೀರು ಹಾಕುತ್ತಿದ್ದು, ಕುಟುಂಬಸ್ಥರು ಸಂತೈಸುತ್ತಿದ್ದಾರೆ.

renukacharya-crying-for-son-chandrashekhar-missing
ಊಟ ಬಿಟ್ಟ ಶಾಸಕ ರೇಣುಕಾಚಾರ್ಯಗೆ ಪುತ್ರಿಯಿಂದ ಕೈತುತ್ತು
author img

By

Published : Nov 2, 2022, 5:40 PM IST

Updated : Nov 2, 2022, 7:25 PM IST

ದಾವಣಗೆರೆ: ಕಣ್ಮರೆಯಾಗಿರುವ ಶಾಸಕ ಎಂಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಮೂರು ಕಳೆದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ತೀವ್ರ ಆತಂಕ ಮೂಡಿಸಿದೆ. ಇದರಿಂದ ಮನನೊಂದಿರುವ ರೇಣುಕಾಚಾರ್ಯ ಊಟ ಬಿಟ್ಟು ಕಣ್ಣೀರು ಹಾಕುತ್ತಿದ್ದಾರೆ. ತಂದೆಯ ಗೋಳಾಟ ನೋಡಿ ಮಗಳು ಸಂತೈಸಿ ಊಟ ಮಾಡಿಸಿದರು.

ಊಟ ಬಿಟ್ಟ ಶಾಸಕ ರೇಣುಕಾಚಾರ್ಯಗೆ ಪುತ್ರಿಯಿಂದ ಕೈತುತ್ತು

ಶಾಸಕರ ಸಹೋದರ ರಮೇಶ್ ಅವರ ಪುತ್ರ ಚಂದ್ರಶೇಖರ್ ಮೂರು ದಿನಗಳಿಂದ ಕಣ್ಮರೆಯಾಗಿದ್ದಾರೆ. ಇದರಿಂದ ಕಂಗೆಟ್ಟಿರುವ ರೇಣುಕಾಚಾರ್ಯ ಕುಟುಂಬ ಚಂದ್ರುಗಾಗಿ ಹುಡುಕಾಟ ನಡೆಸುುತ್ತಿದೆ. ಪುತ್ರ ಚಂದ್ರಶೇಖರ್​ ಕಾರು ಮೈಸೂರು ಮಾರ್ಗವಾಗಿ ಬಂಡೀಪುರ ಅಭಯಾರಣ್ಯ ಕಡೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಮೈಸೂರಿನ ಕಡೆಗೆ ಧಾವಿಸಿದ್ದಾರೆ.

ರೇಣುಕಾಚಾರ್ಯಗೆ ಸಂತೈಸಿದ ಮಗಳು: ಇತ್ತ ಪುತ್ರನಿಗಾಗಿ ಶಾಸಕ ರೇಣುಕಾಚಾರ್ಯ ಊಟ ಮಾಡದೇ ಕಣ್ಣೀರು ಹಾಕುತ್ತಿದ್ದಾರೆ. ಚಂದ್ರು ಎಲ್ಲಿದ್ದರೂ ಬೇಗ ವಾಪಸ್ ಮನೆಗೆ ಬಾ ಮಗನೇ ಎಂದು ಹೇಳಿ ಅಳುತ್ತಿದ್ದಾರೆ. ಹೊನ್ನಾಳಿಯ ನಿವಾಸದಲ್ಲಿ ರೇಣುಕಾಚಾರ್ಯ ಅವರನ್ನು ತಬ್ಬಿಕೊಂಡ ಮಗಳು ಚೇತನಾ ಊಟ ಮಾಡುವಂತೆ ಕಣ್ಣೀರು ಹಾಕಿದ ದೃಶ್ಯ ಮನಕಲಕುವಂತಿತ್ತು.

ಓದಿ: ಚಂದ್ರು ಎಲ್ಲಿದ್ದಿಯೋ ಬಾರೋ ಎಂದು ಅಣ್ಣನ ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಾಸಕ ರೇಣುಕಾಚಾರ್ಯ

Last Updated : Nov 2, 2022, 7:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.