ದಾವಣಗೆರೆ: ಸಂಕಷ್ಟದಲ್ಲಿರುವವರಿಗೆ ಸಂಘ-ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ಆದರೆ ಇದನ್ನು ದುರುಪಯೋಗ ಮಾಡಿಕೊಂಡು ಸಿಎಂ ರಾಜಕೀಯ ಕಾರ್ಯದರ್ಶಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಹೊನ್ನಾಳಿ ತಾಲೂಕಿನಲ್ಲಿ 500ಕ್ಕೂ ಹೆಚ್ಚು ಕಿಟ್ಗಳನ್ನು ವಿತರಿಸಿಲ್ಲ. ವೈಯಕ್ತಿಕವಾಗಿ ಒಂದೂ ಕಿಟ್ ರೇಣುಕಾಚಾರ್ಯ ವಿತರಿಸಿಲ್ಲ ಎಂದು ಕಾಂಗ್ರೆಸ್ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಹಿರಿಯ. ವಯಸ್ಸಿಗೆ ಸಹ ಬೆಲೆ ಕೊಟ್ಟಿಲ್ಲ. ಏಕವಚನದಲ್ಲಿ ಮಾತನಾಡಿರುವುದು ರೇಣುಕಾಚಾರ್ಯರ ಸಂಸ್ಕೃತಿ ತೋರಿಸುತ್ತದೆ. ಯಾರೋ ಕೊಟ್ಟ ನೆರವನ್ನು ತನ್ನದೆಂದು ಹೇಳಿಕೊಂಡು ಪ್ರಚಾರ ಮಾಡಿರುವ ಅವರು, ಹಲವು ಬಾರಿ ಲಾಕ್ಡೌನ್ ಉಲ್ಲಂಘನೆ ಮಾಡಿದ್ದು, ಸಿಎಂ ಯಡಿಯೂರಪ್ಪನವರೇ ಬೈದರೂ ಬುದ್ಧಿ ಬಂದಿಲ್ಲ ಎಂದರು.
ದಿನಸಿ ಕಿಟ್ ವಿತರಣೆ ಹಾಗೂ ನಿತ್ಯವೂ ನಾಲ್ಕೈದು ಸಾವಿರ ಜನರಿಗೆ ಆಹಾರ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಬಾರದೇ? ತಹಶೀಲ್ದಾರ್ ಕಚೇರಿಗೆ ಬರುವಂತೆ ಹೇಳಿದ್ದು ಅವರೇ. ಹಾಗಾಗಿ ಹೋಗಿದ್ದೆವು. ಆದರೆ ಅವರೇ ಬಂದಿಲ್ಲ. ಪಾರದರ್ಶಕವಾಗಿದ್ದರೆ ಯಾಕೆ ಚರ್ಚೆಗೆ ಬರಲಿಲ್ಲ ಎಂದು ಶಾಂತನಗೌಡ ಪ್ರಶ್ನಿಸಿದರು.