ETV Bharat / state

ಸಿದ್ದರಾ‌ಮಯ್ಯ, ಡಿಕೆಶಿಯವರೇ ಇದು ಡಬಲ್ ಇಂಜಿನ್ ಸರ್ಕಾರ, ಡಬಲ್ ಗುಂಡಿಗೆಯ ಸರ್ಕಾರ.. ರವಿಕುಮಾರ್ ಟಾಂಗ್​ - ಡಿಕೆಶಿ-ಸಿದ್ದರಾಮಯ್ಯಗೆ ರವಿಕುಮಾರ್ ಟಾಂಗ್

ಹಿಜಾಬ್ ಕಾಂಗ್ರೆಸ್​ನಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಯಾಗಿದೆ. ಇನ್ನು ಎಸ್​ಡಿಪಿಐ, ಪಿಎಫ್ಐ, ಸಿಎಫ್ಐ ಇವೆಲ್ಲ ಸಂಘಟನೆಗಳನ್ನು ಕಾಂಗ್ರೆಸ್ ಬೆಳೆಸಿದ ಕೂಸುಗಳು. ಇಂದು ಪೆಡಂಭೂತಗಳಾಗಿ ಬೆಳೆದಿವೆ. ಈ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಆಳವಾಗಿ ಅಧ್ಯಯನ ಮಾಡ್ತಿದೆ ಎಂದರು.

ravikumar
ರವಿಕುಮಾರ್
author img

By

Published : Feb 25, 2022, 5:47 PM IST

Updated : Feb 25, 2022, 6:40 PM IST

ದಾವಣಗೆರೆ: ಸಿದ್ದರಾ‌ಮಯ್ಯ, ಡಿಕೆಶಿಯವರೇ ಇದು ಡಬಲ್ ಇಂಜಿನ್ ಸರ್ಕಾರ. ಡಬಲ್ ಗುಂಡಿಗೆಯ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಎನ್‌ ರವಿಕುಮಾರ್ ಟಾಂಗ್ ನೀಡಿದರು.

ವಿಧಾನ ಪರಿಷತ್ ಸದಸ್ಯ ಎನ್‌. ರವಿಕುಮಾರ್ ಮಾತನಾಡಿದರು

ದಾವಣಗೆರೆಯಲ್ಲಿ ಮಾತನಾಡಿದ ಅವರು, ನಮ್ಮದು ಡಬಲ್ ಇಂಜಿನ್ ಸರ್ಕಾರ. ಈ ಸರ್ಕಾರ ಇರುವುದರಿಂದ ಕಾಶ್ಮೀರಕ್ಕೆ ಎಲ್ಲರೂ ಪ್ರವಾಸ ಹೋಗಿ ಬರಬಹುದು. ನಮ್ಮ ಸರ್ಕಾರದಿಂದಲೇ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಆದರೆ, ಕಾಂಗ್ರೆಸ್ ಸರ್ಕಾರ ಇದ್ದಾಗ ಕಾಶ್ಮೀರದ ಭಯೋತ್ಪಾದಕರಿಗೆ ಕೋಟಿಗಟ್ಟಲೆ ಬಿರಿಯಾನಿ‌ ತಿನಿಸುತ್ತಿದ್ದರು ಎಂದು ಪರಿಷತ್ ಸದಸ್ಯ ರವಿಕುಮಾರ್ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪಿಸಿದರು.

ಹಿಜಾಬ್ ಎನ್ನುವಂತಹದ್ದು ಕಾಂಗ್ರೆಸ್​ನಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಯಾಗಿದೆ. ಇನ್ನು ಎಸ್​ಡಿಪಿಐ, ಪಿಎಫ್ಐ, ಸಿಎಫ್ಐ ಇವೆಲ್ಲ ಸಂಘಟನೆಗಳನ್ನು ಕಾಂಗ್ರೆಸ್ ಬೆಳೆಸಿದ ಕೂಸುಗಳು. ಇಂದು ಪೆಡಂಭೂತಗಳಾಗಿ ಬೆಳೆದಿವೆ. ಈ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಆಳವಾಗಿ ಅಧ್ಯಯನ ಮಾಡ್ತಿದೆ ಎಂದರು. ಈ ಸಂಘಟನೆಗಳನ್ನು ನಿಷೇಧಿಸಲು ಬೇಕಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದೆ. ಕ್ರಮಕ್ಕೆ ಸರ್ಕಾರ ಮುಂದಾಗುತ್ತದೆ. ಇನ್ನು ನಮ್ಮ ಎಂಪಿ - ಎಂಎಲ್​ಎ, ಸಚಿವರು, ಕಾರ್ಯಕರ್ತರ ಮೇಲೂ ಈ ಭಯೋತ್ಪಾದಕರಿಂದ ಹಲ್ಲೆ ಆಗಿರುವುದು ಈ ಕಾಂಗ್ರೆಸ್ ಕಾರಣದಿಂದಾಗಿ. ಇದು ಕಾಂಗ್ರೆಸ್​ನ ಬಳುವಳಿ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.

ಓದಿ: ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿಸಿದರೇ ತಪ್ಪೇನು?: ಶಾಸಕ‌ ದೇಸಾಯಿ ಪ್ರಶ್ನೆ

Last Updated : Feb 25, 2022, 6:40 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.