ETV Bharat / state

ಮಹಿಳಾ ತಹಶೀಲ್ದಾರ್​ ನಿಂದಿಸಿದ ಆರೋಪ: ಮಾಜಿ ಶಾಸಕ ಡಿ ಜಿ ಶಾಂತನಗೌಡ ವಿರುದ್ಧ ಪ್ರತಿಭಟನೆ - ಹಾಲಿ ಶಾಸಕ ಎಂ ಪಿ ರೇಣುಕಾಚಾರ್ಯ ಆರೋಪ‌

ಮಹಿಳಾ ತಹಶೀಲ್ದಾರ್​ಗೆ ಮಾಜಿ ಶಾಸಕ ಡಿ ಜಿ ಶಾಂತನಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಖಂಡಿಸಿ, ಮಾಜಿ ಶಾಸಕರ ವಿರುದ್ಧ ಬೀದಿಗಿಳಿದ ಮಹಿಳೆಯರು ಬೃಹತ್​ ಪ್ರತಿಭಟನೆ ನಡೆಸಿದರು.

former MLA D G Shantanagouda
ಮಾಜಿ ಶಾಸಕ ಡಿ ಜಿ ಶಾಂತನಗೌಡ ವಿರುದ್ಧ ಪ್ರತಿಭಟನೆ
author img

By

Published : Sep 26, 2022, 6:40 PM IST

ದಾವಣಗೆರೆ: ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಆಗಿದೆ ಎಂಬ ವಿಷಯ ಇದೀಗ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಜಟಾಪಟಿಗೆ ಕಾರಣವಾಗಿದೆ. ಈ ವಿಚಾರವಾಗಿ ಮಾತನಾಡಲು ಕೆಲ ದಿನಗಳ ಹಿಂದೆ ಮಾಜಿ ಶಾಸಕ ಡಿ ಜಿ ಶಾಂತನಗೌಡ ಹೊನ್ನಾಳಿ ಮಹಿಳಾ ತಹಶೀಲ್ದಾರ್​ ರಶ್ಮಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ, ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಹಾಲಿ ಶಾಸಕ ಎಂ ಪಿ ರೇಣುಕಾಚಾರ್ಯ ಆರೋಪ‌ ಮಾಡಿದ್ದರು.

ಮಾಜಿ ಶಾಸಕ ಡಿ ಜಿ ಶಾಂತನಗೌಡ ವಿರುದ್ಧ ಪ್ರತಿಭಟನೆ

ಸೋಮವಾರ ಬಿಜೆಪಿ ಹೊನ್ನಾಳಿ ಮಂಡಲ ಮಹಿಳಾ ಮೋರ್ಚಾ ಮಹಿಳಾ ಕಾರ್ಯಕರ್ತರು ಪ್ರತಿಭಟಿಸುವ ಮೂಲಕ ಇದನ್ನು ಖಂಡಿಸಿದರು. ಮಾಜಿ ಶಾಸಕ ಡಿಜಿ ಶಾಂತನಗೌಡ ವಿರುದ್ಧ ಹೊನ್ನಾಳಿಯಲ್ಲಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಕ್ರಮಕ್ಕೆ ಆಗ್ರಹಿಸಲಾಯಿತು.

ಹೊನ್ನಾಳಿಯ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನೆ ತಹಶೀಲ್ದಾರ್ ಕಚೇರಿವರೆಗೆ ತಲುಪಿ, ಮನವಿ ಸಲ್ಲಿಸಲಾಯಿತು. ನಾಲ್ಕು ಸಾವಿರ ಮಹಿಳೆಯರಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ: ಮಳೆಯಿಂದ ಮನೆ ಹಾನಿ: ಪರಿಹಾರ ನೀಡುವ ವಿಚಾರಕ್ಕೆ ಹಾಲಿ, ಮಾಜಿ ಶಾಸಕರ ಕಿತ್ತಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.