ETV Bharat / state

ಮೋದಿ, ಕೊರೊನಾ ಕುರಿತು ಸುಳ್ಳು ಸುದ್ದಿ ಹರಡಿದ್ದ ವ್ಯಕ್ತಿ ಬಂಧನ - ತಪ್ಪು ಮಾಹಿತಿ ಹರಡಿದಾತ ಬಂಧನ

ಶಿವಮೊಗ್ಗದಲ್ಲಿ ಪತ್ತೆಯಾದ ಎಂಟು ಮಂದಿ ಕೊರೊನಾ ಪಾಸಿಟಿವ್ ಸೋಂಕಿತರು ಗುಜರಾತಿನ ನಮೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಸುದ್ದಿ ಹರಡಿದ್ದ ವ್ಯಕ್ತಿಯನ್ನು ದಾವಣಗೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

police arrested a man who spreading misinformation about the coronavirus
ಕೊರೊನಾ ವೈರಸ್​​​​, ಮೋದಿ ಕುರಿತು ಜಾಲತಾಣದಲ್ಲಿ ತಪ್ಪು ಮಾಹಿತಿ ಹರಡಿ ಪೊಲೀಸರ ಅತಿಥಿಯಾದ ವ್ಯಕ್ತಿ
author img

By

Published : May 20, 2020, 11:03 PM IST

ದಾವಣಗೆರೆ: ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಿ, ಸಮಾಜದಲ್ಲಿ ಆತಂಕ ಸೃಷ್ಟಿಸುವ ಪ್ರಯತ್ನ ನಡೆಸಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ರಘು ದೊಡ್ಮನಿ ಬಂಧಿತ ಆರೋಪಿಯಾಗಿದ್ದು,‌ ಮೋದಿ ಹಾಗೂ ಕೊರೊನಾ ಕುರಿತು ಫೇಸ್​​​ಬುಕ್​ನಲ್ಲಿ ಫೋಟೋವೊಂದನ್ನ ವೈರಲ್ ಮಾಡಿದ್ದ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ದಾವಣಗೆರೆ ಎಸ್ಪಿ ಸುದ್ದಿಗೋಷ್ಠಿ

ಈ ಬಗ್ಗೆ ಬಿಜೆಪಿ ಯುವ ಮೋರ್ಚಾ ಸಹ ದೂರು ನೀಡಿತ್ತು. ಶಿವಮೊಗ್ಗದಲ್ಲಿ ಪತ್ತೆಯಾದ ಎಂಟು ಮಂದಿ ಕೊರೊನಾ ಪಾಸಿಟಿವ್ ಸೋಂಕಿತರು ಗುಜರಾತಿನ ನಮೋ ಕಾರ್ಯಕ್ರಮದಲ್ಲಿ ಭಾಗಿಯಾದ ಬಿಜೆಪಿ ಕಾರ್ಯಕರ್ತರು. ಏನೆಂದು ಹೆಸರಿಡೋಣ, ನಮೋ ವೈರಸ್, ಬಿಜೆಪಿ ವೈರಸ್, ಗುಜರಾತ್ ನಂಜು ಎಂದು ಫೇಸ್​ಬುಕ್​ನಲ್ಲಿ ರಘು ದೊಡ್ಮನಿ ಬರೆದು ಹಾಕಿದ್ದ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಎಸ್ಪಿಗೆ ಮನವಿ ಸಲ್ಲಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.