ETV Bharat / state

ಬೆಣ್ಣೆ ನಗರಿಯಲ್ಲಿ ಮುಂದುವರೆದ ಮಳೆ ಅವಾಂತರ.. ಅಡಕೆ ತೋಟಗಳು ಜಲಾವೃತ, ಹೈರಾಣಾದ ರೈತ

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಅಡಕೆ ತೋಟಗಳು ಜಲಾವೃತಗೊಂಡಿದೆ.

Nut plantation flooded  heavy rain in Davanagere  waterlogged in farm  crop loss due to heavy rain  ಬೆಣ್ಣೆ ನಗರಿಯಲ್ಲಿ ಮುಂದುವರೆದ ಮಳೆ ಅವಾಂತರ  ಅಡಿಕೆ ತೋಟಗಳು ಜಲಾವೃತ  ದಾವಣಗೆರೆಯಲ್ಲಿ ಮಳೆರಾಯನ ಆರ್ಭಟ  ಮಳೆ ಆಗಿದ್ದರಿಂದ ಸಾಕಷ್ಟು ಅವಾಂತರ ಸೃಷ್ಟಿ  ಮಳೆಯಿಂದಾಗಿ ಭದ್ರಾ ಕಾಲುವೆಗಳು ಸಂಪೂರ್ಣವಾಗಿ ಭರ್ತಿ  ಅಡಿಕೆ ತೋಟಗಳು ನೀರಿನಿಂದ ಜಲಾವೃತ  ರೈತ ಕಣ್ಣೀರು ಸುರಿಸುವ ಪರಿಸ್ಥಿತಿ ನಿರ್ಮಾಣ
ಬೆಣ್ಣೆ ನಗರಿಯಲ್ಲಿ ಮುಂದುವರೆದ ಮಳೆ ಅವಾಂತರ
author img

By

Published : Oct 20, 2022, 1:00 PM IST

ದಾವಣಗೆರೆ: ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಸಾಕಷ್ಟು ಅವಾಂತರ ಸೃಷ್ಟಿ ಮಾಡಿದ್ದಾನೆ. ಕಳೆದ ದಿನ ಮಳೆ ಆಗಿದ್ದರಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಭದ್ರಾ ಕಾಲುವೆಗಳು ಸಂಪೂರ್ಣವಾಗಿ ಭರ್ತಿಯಾಗಿ ಸಮಸ್ಯೆಯನ್ನುಂಟು ಮಾಡಿವೆ. ಕಾಲುವೆಗಳ ನೀರು ನೇರ ಅಡಕೆ ತೋಟಗಳಿಗೆ ನುಗ್ಗುತ್ತಿದ್ದು, ಇಡೀ ಅಡಕೆ ತೋಟಗಳು ನೀರಿನಿಂದ ಜಲಾವೃತ ಆಗಿವೆ. ಅಡಿಕೆ ಕೊಯ್ಲಿಗೆ ಬಂದಿದ್ದರಿಂದ ರೈತನಿಗೆ ಆತಂಕ ಶುರುವಾಗಿದೆ.

ಬೆಣ್ಣೆ ನಗರಿಯಲ್ಲಿ ಮುಂದುವರೆದ ಮಳೆ ಅವಾಂತರ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದಲ್ಲಿ ಮಳೆಯಿಂದ ಅಡಕೆ ತೋಟ ಜಲಾವೃತವಾಗಿದ್ದು, ರೈತ ಕಣ್ಣೀರು ಸುರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಚನ್ನಗಿರಿ ತಾಲೂಕಿನ ಮಲಹಾಳ್ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಅಡಕೆ ತೋಟ ಜಲಾವೃತವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಇದಲ್ಲದೇ ನೂರು ಎಕರೆ ಪ್ರದೇಶದ ಅಡಕೆ ತೋಟಕ್ಕೆ ನೀರು ನುಗ್ಗಿದ್ದರಿಂದ ಇಡೀ ಅಡಕೆ ತೋಟಗಳು ದ್ವೀಪದಂತಾಗಿದೆ.

ಓದಿ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಲುಗಿದ ಸಿಲಿಕಾನ್ ಸಿಟಿ: ಬಡಾವಣೆಗಳು ಜಲಾವೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.