ದಾವಣಗೆರೆ: ನನಗೆ ರಾಜಕೀಯದ ಒಳಗುಟ್ಟುಗಳನ್ನು ಹೇಳಿಕೊಡುವ ಗುರುಗಳು ಎಂ.ಪಿ. ರೇಣುಕಾಚಾರ್ಯ ಎಂದು ಕುಡಚಿ ಶಾಸಕ ರಾಜೀವ್ ಹೇಳಿದ್ದಾರೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಗುರುಗಳು ಹೊನ್ನಾಳಿ ಶಾಸಕರು. ನಮ್ಮ ಸಮುದಾಯದ ಬಗ್ಗೆ ಅವರಿಗೆ ಅಪಾರವಾದ ಕಾಳಜಿ ಇದೆ ಎಂದರು.
ಸೇವಾಲಾಲ್ ಜಾತ್ರಾ ಮಹೋತ್ಸವದ ಧ್ವನಿವರ್ಧಕದ ಉದ್ಘಾಟನೆ ಮಾಡಲು ಆಗಮಿಸಿದ್ದ ಸಂದರ್ಭದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯರ ಬಗ್ಗೆ ಮಾತನಾಡಿದರು.