ETV Bharat / state

ಕುರಿ ಕಳೆದುಕೊಂಡು‌ ಕಣ್ಣೀರು ಹಾಕಿದ ಯುವಕರನ್ನು ಸಂತೈಸಿದ ಶಾಸಕ ರೇಣುಕಾಚಾರ್ಯ - honnali MP Renukacharya

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿಯಲ್ಲಿ ಲಕ್ಕಿ ಕುರಿ ಕಳೆದುಕೊಂಡು‌ ಕಣ್ಣೀರಿಟ್ಟ ಯುವಕರನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಸಂತೈಸಿ, ಸಮಾಧಾನ ಹೇಳಿದ್ರು.

MP Renukacharya
ಎಂ.ಪಿ. ರೇಣುಕಾಚಾರ್ಯ
author img

By

Published : Aug 22, 2021, 12:24 PM IST

ದಾವಣಗೆರೆ: ಕೋವಿಡ್ ಸಂದರ್ಭದಲ್ಲಿ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮಾಡುತ್ತಿರುವ ಕಾರ್ಯಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಇದೀಗ ಜಿಲ್ಲೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿಯಲ್ಲಿ ತಮ್ಮ ನೆಚ್ಚಿನ ಕುರಿಯೊಂದು ಸಾವನ್ನಪ್ಪಿದ ಹಿನ್ನೆಲೆ ಯುವಕರು ಕಣ್ಣೀರು ಹಾಕಿದ್ದು, ಅವರನ್ನು ಸಂತೈಸುವ ಕೆಲಸ ಮಾಡಿದ್ದಾರೆ.

ದುರ್ಗಿಗುಡಿಯ ಅಪ್ಪು, ಪಾತು, ಅಣ್ಣಪ್ಪ, ಮಂಜುಬೂಸಿಯ ಎಂಬುವರಿಗೆ ಸೇರಿದ ನೆಚ್ಚಿನ ಕುರಿ ಲಕ್ಕಿ ಅನಾರೋಗ್ಯದಿಂದ ಶನಿವಾರ ಸಂಜೆ ಸಾವನ್ನಪ್ಪಿದೆ. ಕಳೆದ ಮೂರು ವರ್ಷದ ಹಿಂದೆ 1 ಲಕ್ಷದ ಇಪ್ಪತ್ತು ಸಾವಿರ ರೂ. ಹಣ ಕೊಟ್ಟು ಖರೀದಿಸಿದ್ದ ಆರು ಹಲ್ಲಿನ ಈ ಲಕ್ಕಿ ಕುರಿಯನ್ನು ಸ್ನೇಹಿತನಂತೆ ಯುವಕರು ಸಾಕಿದ್ದರು. ಅನಾರೋಗ್ಯದಿಂದ ಕುರಿ ಸಾವನ್ನಪ್ಪಿದ್ದು, ಯುವಕರು ಕಣ್ಣೀರಿಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಯುವಕರಿಗೆ ಧೈರ್ಯ ಹೇಳಿದರು.

ಯುವಕರನ್ನು ಸಂತೈಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ

ಲಕ್ಕಿ ಕುರಿಯ ಅಂತ್ಯಸಂಸ್ಕಾರದ ಮೆರವಣಿಗೆಯಲ್ಲಿ ಪಾಲ್ಗೊಂಡ‌ ರೇಣುಕಾಚಾರ್ಯ, ಬಳಿಕ ನಾಲ್ವರು ಯುವಕರಿಗೆ ವೈಯಕ್ತಿಕವಾಗಿ 25 ಸಾವಿರ ಹಣ ನೀಡಿ ಆಸರೆಯಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.