ETV Bharat / state

ಇಂದಿರಾ ಕ್ಯಾಂಟೀನ್​ ಪರ ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ್ ಬ್ಯಾಟಿಂಗ್​

ಇಂದಿರಾ ಕ್ಯಾಂಟೀನ್ ಹೆಸರಿನ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ. ಈ ಮಧ್ಯೆ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.

Indira Canteen Name Issue
ಸಂಸದ ಜಿ.ಎಂ ಸಿದ್ದೇಶ್ವರ್
author img

By

Published : Aug 14, 2021, 12:17 PM IST

Updated : Aug 14, 2021, 12:55 PM IST

ದಾವಣಗೆರೆ : ಇಂದಿರಾ ಗಾಂಧಿ ಕೂಡ ದೇಶದ ಮಹಾನ್ ಲೀಡರ್ ಆಗಿದ್ದವರು. ಹಾಗಾಗಿ, ಕ್ಯಾಂಟೀನ್​ಗೆ ಅವರ ಹೆಸರಿಟ್ಟಿರುವುದನ್ನು ನಾನು ವಿರೋಧ ಮಾಡುವುದಿಲ್ಲ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಇಂದಿರಾ ಕ್ಯಾಂಟೀನ್ ಪರ ಬ್ಯಾಟಿಂಗ್ ಮಾಡಿದರು.

ನಗರದಲ್ಲಿ ಮಾತನಾಡಿದ ಅವರು, ಕ್ಯಾಂಟೀನ್ ಹೆಸರಿನಲ್ಲಿ ನಾನಾ ರೀತಿಯಲ್ಲಿ ಪರ- ವಿರೋಧ ಚರ್ಚೆಗಳು ನಡೆಯುತ್ತಿವೆ. ಇಂದಿರಾ ಗಾಂಧಿ ನಮ್ಮ ದೇಶದ ಲೀಡರ್ ಆಗಿದ್ದವರು. ದೇಶದ ಪ್ರಧಾನಿಯಾಗಿ 16 ವರ್ಷ ಆಡಳಿತ ಮಾಡಿದವರು. ವಾಜಪೇಯಿ, ಇಂದಿರಾ ಗಾಂಧಿ ಅವರ ಆಡಳಿತವನ್ನು ಅಲ್ಲಗೆಳೆಯಲು ಆಗುವುದಿಲ್ಲ. ಆದ್ದರಿಂದ ಕ್ಯಾಂಟೀನ್​ಗೆ ಇಂದಿರಾ ಗಾಂಧಿ ಹೆಸರಿಟ್ಟಿರುವುದಕ್ಕೆ ನನ್ನ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಂಸದ ಜಿ.ಎಂ ಸಿದ್ದೇಶ್ವರ್

ಓದಿ : C. T. ರವಿ ನಾಲಿಗೆಯನ್ನು ಇಟ್ಟಿಗೆಯಿಂದ ಉಜ್ಜಿ ಸರಿ ಮಾಡಬೇಕು: ಕೆ ಎನ್ ರಾಜಣ್ಣ ಕಿಡಿ ..

ಹೆಸರು ಬದಲಾವಣೆ ಸಂಬಂಧ ಕೇಂದ್ರ ರಾಜ್ಯ, ಸರ್ಕಾರಗಳು ತೀರ್ಮಾನ ತೆಗೆದುಕೊಳ್ಳುತ್ತವೆ ಎಂದು ತಿಳಿಸಿದರು. ಕಾಂಗ್ರೆಸ್​ನವರು ನೆಹರೂ ಹುಕ್ಕಾಬಾರ್ ತೆರೆಯಲಿ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಹುಕ್ಕಾಬಾರ್ ಬಗ್ಗೆ ಅಂದರೆ ನನಗೆ ಏನು ಅಂತಾನೇ ಗೊತ್ತಿಲ್ಲ ಎಂದು ಹೇಳಿದರು.

ಮೇಕೆದಾಟು ಮಾಡೇ ಮಾಡ್ತೀವಿ : ಯಾರೇ ಪ್ರತಿಭಟನೆ ಮಾಡಲಿ, ಮೇಕೆದಾಟು ಮಾಡೇ ಮಾಡ್ತೀವಿ. ಈಗಾಗಲೇ ಸಿಎಂ ಈ ಬಗ್ಗೆ ನಿರ್ಧಾರ ಮಾಡಿದ್ದಾರೆ. ಇದರ ಬಗ್ಗೆ ಸಿ.ಟಿ ರವಿ ಏನು ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ನಾಡಿನ ರಕ್ಷಣೆ ನಮ್ಮ ಹೊಣೆ. ಹಾಗಾಗಿ, ನಾವು ರಾಜ್ಯದ ಪರ ಮಾತನಾಡುತ್ತೇವೆ ಎಂದು ಸಿದ್ದೇಶ್ವರ್​ ತಿಳಿಸಿದರು.

Last Updated : Aug 14, 2021, 12:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.