ETV Bharat / state

75 ವರ್ಷವಾದರೆ ಏನಾಯಿತು, ಪಕ್ಷ ಹೇಳಿದಂತೆ ಕೇಳುತ್ತೇನೆ : ಶಾಸಕ ಎಸ್ ಎ ರವೀಂದ್ರನಾಥ್ - ಸಂಸದ ಜಿ ಎಂ ಸಿದ್ದೇಶ್ವರ್

ಕಾಂಗ್ರೆಸ್​ನಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ನೋಡಿಕೊಂಡು ಸ್ಪರ್ಧೆ ಮಾಡ್ತೀವಿ. 2023 ರ ಚುನಾವಣೆಗೆ ಸ್ಪರ್ಧಿಸಲು ಒಲವಿದೆ ಎಂದು ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ್ ತಿಳಿಸಿದ್ದಾರೆ.

ಶಾಸಕ ಎಸ್ ಎ ರವೀಂದ್ರನಾಥ್
ಶಾಸಕ ಎಸ್ ಎ ರವೀಂದ್ರನಾಥ್
author img

By

Published : Nov 25, 2022, 5:16 PM IST

ದಾವಣಗೆರೆ: ಜಿಲ್ಲೆಯ ಉತ್ತರ ವಿಧಾನಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡ್ತೀನಿ. 75 ವರ್ಷವಾದರೆ ಏನಾಯಿತು. ಪಕ್ಷ ಹೇಳಿದಂತೆ ಕೇಳ್ತಿನಿ ಎಂದು ದಾವಣಗೆರೆ ಉತ್ತರ ಮತ ಕ್ಷೇತ್ರದ ಹಿರಿಯ ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ್ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.

ಶಾಸಕ ಎಸ್ ಎ ರವೀಂದ್ರನಾಥ್ ಅವರು ಮಾತನಾಡಿದರು

ದಾವಣಗೆರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನಿಂದ ಯಾರು ಸ್ಪರ್ಧೆ ಮಾಡ್ತಾರೆ ಎಂಬುದನ್ನು ನೋಡಿಕೊಂಡು ಸ್ಪರ್ಧೆ ಮಾಡ್ತೀವಿ. 2023 ರ ಚುನಾವಣೆಗೆ ಸ್ಪರ್ಧಿಸುವ ಒಲವಿದೆ. ಪಕ್ಷ ಹೇಳಿದರೆ ಖಂಡಿತ ನಾನು ಸ್ಪರ್ಧೆ ಮಾಡುವೆ. ಯಡಿಯೂರಪ್ಪ ಬಿಟ್ಟು ನಾನೇನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. 75 ವರ್ಷ ಆಗಿದ್ದರೆ ಏನಾಯಿತು. ಸದ್ಯ ವಯಸ್ಸಿನ ಪ್ರಶ್ನೆ ಬರುವುದಿಲ್ಲ. ಪಕ್ಷದಿಂದ ಮತ್ತೆ ನನಗೆ ಟಿಕೆಟ್ ನೀಡ್ತಾರೆ, ನಾನಂತೂ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವೆ ಎಂದು ಇಂಗಿತ ವ್ಯಕ್ತಪಡಿಸಿದರು.

ಇನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉತ್ತರಕ್ಕೆ ಸ್ಪರ್ಧೆ ಮಾಡ್ತಾರೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಬದಲಾಗಿ ಇದರ ಬಗ್ಗೆ ಸಂಸದ ಜಿ ಎಂ ಸಿದ್ದೇಶ್ವರ್ ಅವರು ಮಾತನಾಡುತ್ತಾರೆ ಎಂದರು. ಇನ್ನು ಇದಲ್ಲದೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸ್ಪರ್ಧೆ ಮಾಡುವ ಕ್ಷೇತ್ರ ಶಿಗ್ಗಾವಿ ಅಲ್ಲಿ ಅವರು ಸ್ಪರ್ಧೆ ಮಾಡಿದರೆ ಗೆಲ್ತಾರೆ, ಇಲ್ಲಿ ಉತ್ತರದಲ್ಲಿ ನಿಲ್ಲಿಸಿ ಏನ್ ಮಾಡೋದು ಎಂದು ಪತ್ರಕರ್ತರನ್ನು ಮರು ಪ್ರಶ್ನೆ ಕೇಳಿದ್ರು.

ಓದಿ: ರಾಜ್ಯಗಳನ್ನು ಬೇರ್ಪಡಿಸುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ನಿಲ್ಲಿಸಬೇಕು, ಶೀಘ್ರ ಸರ್ವಪಕ್ಷ ಸಭೆ: ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.