ETV Bharat / state

ಶೂ ಧರಿಸಿ ಪೂಜೆಯಲ್ಲಿ ಭಾಗಿ.. ಚರ್ಚೆಗೆ ಗ್ರಾಸವಾದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಡೆ - MLA Madal Virupkshappa latest news

ಪಿ ಬಿ ರಸ್ತೆಯ ಸಾಯಿ ಇಂಟರ್ ನ್ಯಾಷನಲ್ ಸ್ಕೂಲ್​ ಬಳಿ ಮರ ನೆಡುವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೊರೊನಾ ಸೋಂಕು ಹರಡುವ ಭೀತಿ ಇದ್ದರೂ ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ..

ಆಸ್ಪತ್ರೆಯ ನಿರ್ಮಾಣದ ಶಂಕುಸ್ಥಾಪನೆ
ಆಸ್ಪತ್ರೆಯ ನಿರ್ಮಾಣದ ಶಂಕುಸ್ಥಾಪನೆ
author img

By

Published : Jul 4, 2020, 6:44 PM IST

ದಾವಣಗೆರೆ : ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ 100 ಹಾಸಿಗೆ ಆಸ್ಪತ್ರೆಯ ನಿರ್ಮಾಣದ ಶಂಕುಸ್ಥಾಪನೆಯ ಪೂಜಾ ಕಾರ್ಯಕ್ರಮದ ವೇಳೆ ಬಿಜೆಪಿಯ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಶೂ ಧರಿಸಿ ಪಾಲ್ಗೊಂಡಿದ್ದು ಈಗ ಚರ್ಚೆಗೆ ಕಾರಣವಾಗಿದೆ.

ಆಸ್ಪತ್ರೆಯ ನಿರ್ಮಾಣದ ಶಂಕುಸ್ಥಾಪನೆ

ಆರೋಗ್ಯ ಸಚಿವ ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಸಂಸದ ಸಿದ್ದೇಶ್ವರ್ ಸೇರಿದಂತೆ ಶಾಸಕರು, ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ವೇಳೆ ಇವರು ಶೂ, ಚಪ್ಪಲಿ ಬಿಟ್ಟು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆರತಿ ಪಡೆಯುವಾಗಲೂ, ಗುದ್ದಲಿ ಪೂಜೆ ನೆರವೇರಿಸುವಾಗಲೂ ಮಾಡಾಳ್ ವಿರೂಪಾಕ್ಷಪ್ಪ ಶೂ ಧರಿಸಿಯೇ ಇದ್ದದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಅಂತರ ಮರೆತ ಸಚಿವರು, ಅಧಿಕಾರಿಗಳು: ಪಿ ಬಿ ರಸ್ತೆಯ ಸಾಯಿ ಇಂಟರ್ ನ್ಯಾಷನಲ್ ಸ್ಕೂಲ್​ ಬಳಿ ಮರ ನೆಡುವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೊರೊನಾ ಸೋಂಕು ಹರಡುವ ಭೀತಿ ಇದ್ದರೂ ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ. ಚಿಗಟೇರಿ ಆಸ್ಪತ್ರೆಯ ಬಳಿಯೂ ಇದು ಪುನರಾವರ್ತನೆ ಆಯಿತು. ಇಲ್ಲಿಯೂ ಯಾವುದೇ ಅಂತರ ಕಾಯ್ದುಕೊಳ್ಳದೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.