ETV Bharat / state

ಸಚಿವರು ನಮ್ಮ ಫೋನ್​ ರಿಸೀವ್ ಮಾಡುತ್ತಿಲ್ಲ: ಕಾಂಗ್ರೆಸ್​ ಶಾಸಕ ಬಸವರಾಜ ಶಿವಗಂಗಾ ಅಸಮಾಧಾನ

author img

By ETV Bharat Karnataka Team

Published : Aug 30, 2023, 6:57 AM IST

ಕೆಲ ಸಚಿವರು ನಮ್ಮ ಕರೆಗಳಿಗೆ ಸ್ಪಂದಿಸುವುದಿಲ್ಲ ಎಂದು ಮತ್ತೊಮ್ಮೆ ಚನ್ನಗಿರಿ ಶಾಸಕ ಬಸವರಾಜ ವಿ ಶಿವಗಂಗಾ ಅಸಮಾಧಾನ ಹೊರಹಾಕಿದ್ದಾರೆ.

Congress MLA Basavaraj Shivaganga
ಕಾಂಗ್ರೆಸ್​ ಶಾಸಕ ಬಸವರಾಜ ಶಿವಗಂಗಾ

ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್​ ಶಾಸಕ ಬಸವರಾಜ ಶಿವಗಂಗಾ

ದಾವಣಗೆರೆ : ಕೆಲ ಸಚಿವರು ನಮ್ಮ ಕರೆಗಳಿಗೆ ಸ್ಪಂದಿಸುವುದಿಲ್ಲ, ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರೂ ಅದೇ ರೀತಿ ಮುಂದುವರೆದಿದೆ. ಸಚಿವರು ಸುಧಾರಿಸಿಲ್ಲ, ಶಾಸಕರ ಫೋನ್​ ಕಾಲ್​ ರಿಸೀವ್ ಮಾಡುತ್ತಿಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜ ವಿ ಶಿವಗಂಗಾ ಸ್ವಪಕ್ಷದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಗಂಗೂರು ಗ್ರಾಮದಲ್ಲಿ ಮಾತನಾಡಿದ ಅವರು, "ಸಿಎಂ ಮತ್ತು ಡಿಸಿಎಂ ಸಭೆ ಮಾಡಿದರೂ ಸಹ ಯಾವುದೇ ಸುಧಾರಣೆ ಆಗಿಲ್ಲ, ಕೆಲ ಸಚಿವರ ಪಿಎ ಗಳು ಕೂಡ ಅದೇ ದಾರಿ ಹಿಡಿದಿದ್ದಾರೆ. ಒಬ್ಬ ಸಚಿವರಿಗೆ 135 ಕ್ಷೇತ್ರದ ಶಾಸಕರ ಫೋನ್ ನಂಬರ್ ಸೇವ್ ಮಾಡಿಕೊಳ್ಳುವಷ್ಟು ಅವರ ಮೊಬೈಲ್​ನಲ್ಲಿ ಮೆಮೊರಿ ಇರೋದಿಲ್ವಾ?, ಎಲ್ಲ ಶಾಸಕರ ಫೋನ್ ನಂಬರ್ ಸೇವ್ ಮಾಡಿಕೊಂಡರೆ ಯಾರು ಕಾಲ್​ ಮಾಡಿದರು ಎಂದು ಗೊತ್ತಾಗುತ್ತದೆ. ಅದ್ದರಿಂದ ಈ ರೀತಿ ಆಗಬಾರದು" ಎಂದು ಮಾಧ್ಯಮಗಳ ಮುಂದೆ ಬೇಸರ ಹೊರಹಾಕಿದರು.

ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಅಣ್ಣ, ಅವರ ಮೇಲೆ ಯಾವುದೇ ಬೇಸರ ಅಥವಾ ಮುನಿಸು ಇಲ್ಲ, ನಮ್ಮ ಉಸ್ತುವಾರಿ ಸಚಿವರು ಫೋನ್ ರಿಸೀವ್ ಮಾಡ್ತಾರೆ, ನಮ್ಮ ಸಚಿವರ ವಿರುದ್ಧ ದೂರು ಇಲ್ಲ. ಬೇರೆ ಸಚಿವರು ಹಾಗೆ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಲ್ಲದೇ, ಯಾವ ಸಚಿವರು ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಮಾತ್ರ ಹೇಳಿಲ್ಲ.

ಇದನ್ನೂ ಓದಿ : DCM D. K. Shivakumar : ಈ ವರ್ಷ ಅಭಿವೃದ್ಧಿಗೆ ಹಣ ನೀಡಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್

ಎಂ ಪಿ ರೇಣುಕಾಚಾರ್ಯ ಪ್ರಚಾರದ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಸಚಿವರನ್ನು ಕಾದು ಹೋಗಿ ಮಾತನಾಡಿಸಿಕೊಂಡು ಬರ್ತಾರೆ, ವಿರೋಧ ಪಕ್ಷದವರಿಗೆ ಕೆಲಸವಿಲ್ಲ, ಅದ್ದರಿಂದ ಮನೆಯಲ್ಲಿ ಕಾದಿದ್ದು ಮಾತನಾಡಿಸಿಕೊಂಡು ಬರ್ತಾರೆ. ನಮಗೆ ಕ್ಷೇತ್ರದಲ್ಲಿ ಕೆಲಸವಿದೆ, ಕಾಯಲು ಸಮಯವಿಲ್ಲ. ಕೇವಲ ಪ್ರಚಾರಕ್ಕಾಗಿ ರೇಣುಕಾಚಾರ್ಯ ನಮ್ಮ ನಾಯಕರನ್ನು ಭೇಟಿ ಮಾಡೋದು ಸರಿಯಲ್ಲ, ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದರೆ ನಾನೇ ಸ್ವಾಗತ ಮಾಡುತ್ತೇನೆ, ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸ್ವಾಗತ ಮಾಡುತ್ತೇವೆ ಎಂದರು.

ಇದನ್ನೂ ಓದಿ : ಕಾಂಗ್ರೆಸ್ ಅಧಿಕಾರ ಹಿಡಿದು 2 ತಿಂಗಳಾಗಿಲ್ಲ, ಆಗಲೇ ಸ್ವಪಕ್ಷೀಯರಿಂದ ಅಪಸ್ವರ : ಜಿ.ಟಿ ದೇವೇಗೌಡ ಟೀಕೆ

ಬಸವರಾಜ ಶಿವಗಂಗಾಗೆ ಟಾಂಗ್ ಕೊಟ್ಟ ಸಚಿವ ಮಲ್ಲಿಕಾರ್ಜುನ್‌ : ಹಿರೇಗಂಗೂರು ಗ್ರಾಮದ ಕಾರ್ಯಕ್ರಮವೊಂದರಲ್ಲಿ ಇದೇ ವಿಚಾರವಾಗಿ ಮಾತನಾಡಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಚನ್ನಗಿರಿ ಶಾಸಕ ಬಸವರಾಜ ಅವರು ಯುವಕರಿದ್ದು, ಬಹಳ ಆ್ಯಕ್ಟಿವ್ ಇದ್ದಾರೆ. ಧಿಡೀರ್ ಎಂದು ಒಂದೇ ಬಾರಿ ಎಲ್ಲಾ ಮೆಟ್ಟಿಲು ಹತ್ತಲು ಹೋಗಬೇಡಿ, ಒಂದೊಂದೆ ಮೆಟ್ಟಿಲು ಹತ್ತಿ ಎಂದು ರೇಗಿಸಿದರು.

ಇದನ್ನೂ ಓದಿ : ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್​ಗೆ ಬಂದರೆ ಅಚ್ಚರಿ ಇಲ್ಲ : ಸಚಿವ ಶಿವರಾಜ್ ತಂಗಡಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.