ETV Bharat / state

ಮುನಿಸು ತರವೇ..ಮಾತನಾಡಿಸದೆ ಪರಸ್ಪರ ಅಂತರ ಕಾಯ್ದುಕೊಂಡ ಬಿಎಸ್​ವೈ-ಈಶ್ವರಪ್ಪ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ಕಾಗಿನೆಲೆ ಬೆಳ್ಳೂಡಿ ಶಾಖಾ ಮಠಕ್ಕೆ ಪುತ್ರ ಕಾಂತೇಶ್ ಜೊತೆ ಆಗಮಿಸಿದ ಈಶ್ವರಪ್ಪ ಬೀರಲಿಂಗೇಶ್ವರ ದೇವಸ್ಥಾನದ ಪ್ರಾಣಪ್ರತಿಷ್ಠಾನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹೋಮದಲ್ಲಿ ಪಾಲ್ಗೊಂಡರು. ಈ ವೇಳೆ ಸಿಎಂ ಯಡಿಯೂರಪ್ಪ ಅವರ ಅಕ್ಕಪಕ್ಕ ನಿಂತುಕೊಂಡಿದ್ದರೂ ಮಾತನಾಡಿಸದೆ ಅಂತರ ಕಾಯ್ದುಕೊಂಡು ಮೌನಕ್ಕೆ ಶರಣಾದರು.

Davangere
ಮುಂದುವರೆದ ಮುನಿಸು..ಮಾತನಾಡಿಸದೆ ಅಂತರ ಕಾಯ್ದುಕೊಂಡ ಬಿಎಸ್​ವೈ-ಈಶ್ವರಪ್ಪ
author img

By

Published : Apr 4, 2021, 2:26 PM IST

ದಾವಣಗೆರೆ: ಸಿಎಂ ಯಡಿಯೂರಪ್ಪ ಅವರು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.‌ಈಶ್ವರಪ್ಪ ಅವರ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕಾಗಿ ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದ ಬೆನ್ನಲ್ಲೇ ಇಬ್ಬರ ಮುನಿಸು ಮುಂದುವರೆದಿದೆ.

ಇಂದು ಕೂಡ ಖಾಸಗಿ ಕಾರ್ಯಕ್ರಮದಲ್ಲಿ ಮುಖಾಮುಖಿಯಾದ ಉಭಯ ನಾಯಕರು ಪರಸ್ಪರ ಮಾತನಾಡಿಸದೆ 'ಸಾಮಾಜಿಕ ಅಂತರ' ಕಾಯ್ದುಕೊಂಡರು.

ಮುಂದುವರೆದ ಮುನಿಸು.. ಮಾತನಾಡಿಸದೆ ಅಂತರ ಕಾಯ್ದುಕೊಂಡ ಬಿಎಸ್​ವೈ-ಈಶ್ವರಪ್ಪ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ಕಾಗಿನೆಲೆ ಬೆಳ್ಳೂಡಿ ಶಾಖಾ ಮಠಕ್ಕೆ ಪುತ್ರ ಕಾಂತೇಶ್ ಜೊತೆ ಆಗಮಿಸಿದ ಈಶ್ವರಪ್ಪ, ಬೀರಲಿಂಗೇಶ್ವರ ದೇವಸ್ಥಾನದ ಪ್ರಾಣಪ್ರತಿಷ್ಠಾನೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹೋಮದಲ್ಲಿ ಪಾಲ್ಗೊಂಡರು. ಸಿಎಂ ಯಡಿಯೂರಪ್ಪ ಅವರ ಅಕ್ಕಪಕ್ಕ ನಿಂತುಕೊಂಡಿದ್ದರೂ ಮಾತನಾಡಿಸದೆ ಅಂತರ ಕಾಯ್ದುಕೊಂಡು ಮೌನಕ್ಕೆ ಶರಣಾದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಿಎಂ ಮಾತನಾಡುವ ವೇಳೆಯಲ್ಲಿಯೂ ಕೂಡ ಅಂತರ ಕಾಯ್ದುಕೊಂಡು ಕೆ.ಎಸ್. ಈಶ್ವರಪ್ಪ ವೇದಿಕೆಯತ್ತ ಮುಖ ಮಾಡಿದರು.

ಇದನ್ನೂ ಓದಿ: ರಾಜ್ಯಪಾಲರಿಗೆ ಸಚಿವ ಈಶ್ವರಪ್ಪ ಪತ್ರದ ಬಗ್ಗೆ ಕೇಳಿದ್ದಕ್ಕೆ ಗರಂ ಆದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.