ETV Bharat / state

ಜನಪ್ರತಿನಿಧಿ, ಅಧಿಕಾರಿಗಳ ಮನವಿಗೆ ಮನ್ನಣೆ ನೀಡದ ವ್ಯಾಪಾರಿಗಳು - ಅಧಿಕಾರಿಗಳ ಮಾತಿಗೆ ಬೆಲೆ ನೀಡದೆ ವ್ಯಾಪಾರ ಮಾಡಿದ ವರ್ತಕರು

ಇಂದು ಶಾಸಕ ಎಸ್.ರಾಮಪ್ಪ ಅವರು ಅಂಗಡಿಗಳನ್ನು ಬಂದ್ ಮಾಡಲು ಮನವಿ ಮಾಡಿಕೊಂಡಿದ್ದರು. ಆದರೆ ವರ್ತಕರಿ ಶಾಸಕರ ಮಾತಿಗೆ ಬೆಲೆ ನೀಡದೆ ಅಂಗಡಿ ತೆರದು ವ್ಯಾಪಾರ ನಡೆಸಿದ್ದಾರೆ.

Harihara
Harihara
author img

By

Published : Jun 25, 2020, 6:56 PM IST

ಹರಿಹರ: ತಾಲೂಕಿನಲ್ಲಿ ಕೊರೊನಾ ಹೆಚ್ಚಾಗುತ್ತಿರುವುದನ್ನು ತಡೆಯಲು ಶಾಸಕ ಎಸ್.ರಾಮಪ್ಪ ಇಂದು ಮಧ್ಯಾಹ್ನದ ಮೇಲೆ ಅಂಗಡಿ ಬಂದ್ ಮಾಡಲು ವರ್ತಕರಿಗೆ ಮನವಿ ಮಾಡಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ನಗರದ ವ್ಯಾಪಾರಿಗಳು ಎಂದಿನಂತೆ ವಹಿವಾಟು ನೆಡೆಸಿದರು.

ಶಾಸಕ ಎಸ್. ರಾಮಪ್ಪ ನೇತೃತ್ವದಲ್ಲಿ ಅಧಿಕಾರಗಳು ಹಾಗೂ ವರ್ತಕರು ಸಭೆ ಕರೆದು ಇಂದು ಮಧ್ಯಾಹ್ನ ನಗರದ ಎಲ್ಲಾ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಕೊರೊನಾ ವೈರಸ್ ಹರಡದಂತೆ ತಡೆಯಲು ಸಹಕರಿಸಬೇಕೆಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ನಗರದ ವ್ಯಾಪಾರಿಗಳು ಬೆಳಗ್ಗೆಯಿಂದಲೇ ವ್ಯಾಪಾರವನ್ನು ಆರಂಭಿಸಿದ್ದರು. ಕೆಲವೇ ಕೆಲವು ವ್ಯಾಪಾರಸ್ಥರು ಸ್ಪಂದಿಸಿ ತಮ್ಮ ವ್ಯಾಪಾರವನ್ನು ಬಂದ್ ಮಾಡಿದ್ದು, ಬಿಟ್ಟರೆ ಉಳಿದಂತೆ ಬಹುತೇಕ ವ್ಯಾಪಾರಸ್ಥರು ಮಧ್ಯಾಹ್ನದ ನಂತರವೂ ನಿರ್ಭಯವಾಗಿ ತಮ್ಮ ವ್ಯಾಪಾರ-ವಹಿವಾಟನ್ನು ನೆಡೆಸಿದರು.

ಮಾಹಿತಿ ಇಲ್ಲ:

ಸ್ವಯಂ ಲಾಕ್ ಡೌನ್ ಮಾಡಲು ತಾಲೂಕು ಕಛೇರಿಯಲ್ಲಿ ಕರೆಯಲಾಗಿದ್ದ ಶಾಸಕರ -ಅಧಿಕಾರಿಗಳ ಸಭೆಗೆ ನಗರದ ಹಲವಾರು ವ್ಯಾಪಾರಸ್ಥರ ಸಂಘಟನೆಗಳಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಜನರು ವಿರಳ:

ನಗರದಲ್ಲಿ ಪಾಸಿಟಿವ್ ಕೇಸ್‌ಗಳು ಪತ್ತೆಯಾದ ನಂತರ ಬಹುತೇಕ ಗ್ರಾಮೀಣ ಭಾಗದ ಜನರು ನಗರದ ಕಡೆಗೆ ಸುಳಿಯುತ್ತಿಲ್ಲ. ಇದರಿಂದಾಗಿ ನಗರದ ವ್ಯಾಪಾರ-ವಹಿವಾಟು ಕ್ಷೀಣಿಸಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.