ETV Bharat / state

ಜನರು ಕಾನೂನು ಕೈಗೆತ್ತಿಕೊಂಡ್ರೆ ಸಹಿಸುವುದಿಲ್ಲ: ದಾವಣಗೆರೆ ಡಿಸಿ - dc mahantesh

ಲಾಕ್​​ಡೌನ್​ ಸಮಯದಲ್ಲಿ ಬಡವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಮಹಾನಗರ ಪಾಲಿಕೆ ವತಿಯಿಂದ ಹಾಲು ವಿತರಿಸಲಾಗುತ್ತಿತ್ತು. ಈ ವೇಳೆ ಪಾಲಿಕೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ.

lockdown: we will take strict action those who violate rules
ಲಾಕ್​ಡೌನ್​​: ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ-ಡಿಸಿ ಮಹಾಂತೇಶ್​​​
author img

By

Published : Apr 10, 2020, 4:51 PM IST

ದಾವಣಗೆರೆ: ಹಾಲು ವಿತರಣೆ ಮಾಡುವ ವೇಳೆ ಮಹಾನಗರ ಪಾಲಿಕೆ ಸಹಾಯಕರೊಬ್ಬರ ಮೇಲೆ ಹಲ್ಲೆ ನಡೆದಿರುವ ಸಂಬಂಧ ದಾವಣಗೆರೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಹಲ್ಲೆ ನಡೆಸಿದ್ದ ಹನುಮಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಾಕ್​ಡೌನ್​ ಹಿನ್ನೆಲೆ ಸ್ಲಂ ಪ್ರದೇಶದಲ್ಲಿ ಹಾಲು ವಿತರಿಸಲಾಗುತ್ತಿತ್ತು. ಈ ವೇಳೆ ದ್ವಿತೀಯ ದರ್ಜೆ ಸಹಾಯಕ ಪಾಲಾನಾಯ್ಕ್​ ಮತ್ತು ಹನುಮಂತನ ನಡುವೆ ವಾಗ್ವಾದ ಉಂಟಾಗಿ ಹಲ್ಲೆ ನಡೆಸಿದ್ದ. ಈ ವೇಳೆ ಪಾಲಾ ನಾಯ್ಕ್​ಗೆ ಮುಖ, ಕೈ ಕಾಲುಗಳಿಗೆ ಗಾಯವಾಗಿತ್ತು.

ಲಾಕ್​ಡೌನ್​​: ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ ಎಂದ ಡಿಸಿ ಮಹಾಂತೇಶ್​​​

ಬಳಿಕ ಸ್ಥಳಕ್ಕೆ ಆಗಮಿಸಿದ ಗಾಂಧಿನಗರ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ. ಲಾಕ್​​ಡೌನ್​​ಗೆ ಜನರು ಒಳ್ಳೆಯ ರೀತಿ ಸ್ಪಂದಿಸುತ್ತಿದ್ದು, ದಾನಿಗಳು ಸಹಾಯಹಸ್ತ ಚಾಚಿದ್ದಾರೆ. ಇಂಥ ಘಟನೆ ನಡೆದಿರುವುದು ಬೇಸರ ತರಿಸಿದೆ. ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.‌ ಹಲ್ಲೆ ನಡೆಸಿದಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.