ದಾವಣಗೆರೆ: ನೀರು ಕುಡಿಯಲು ಬಂದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ನೀರು ಅರಸಿ ಬಂದಿದ್ದ ಕರಡಿಯನ್ನು ಸೆರೆ ಹಿಡಿಯಲಾಗಿದೆ.
ಹಲವು ದಿನದಿಂದ ಇದೇ ಕರಡಿ ಜನರಿಗೆ ಉಪಟಳ ನೀಡುತ್ತಿತ್ತು. ಕರಡಿ ಭಯದಲ್ಲಿ ಇದ್ದ ಗ್ರಾಮಸ್ಥರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.