ದಾವಣಗೆರೆ:ಸರ್ಕಾರ ಈಗಾಗಲೇ ಎಸ್ಸಿ ಮತ್ತು ಎಸ್ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದೆ. ಆದರೆ ಇದೀಗ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಗಾಗಿ ಸಮುದಾಯದ ಇತರ ಜಾತಿಗಳು ಸಂಘರ್ಷ ಜಾಥಾ ಆರಂಭಿಸಿವೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಸಮುದಾಯದ ಮುಖಂಡರು ದಾವಣಗೆರೆ ಜಿಲ್ಲೆಯ ಹರಿಹರದ ಪ್ರೋ.ಕೃಷ್ಣಪ್ಪ ಮೈತ್ರಿ ವನ ದಿಂದ ಆರಂಭವಾದ ಜಾಥಾ ದಾವಣಗೆರೆಯ ನಗರದ ಅಂಬೇಡ್ಕರ್ ಪುಥಳಿ ಬಳಿ ತಲುಪಿದೆ. ಇನ್ನೂ ಈ ಜಾಥಾವನ್ನು ಬೆಂಗಳೂರಿನ ಪ್ರೀಡಂ ಪಾರ್ಕ್ ವರೆಗೂ ಹಮ್ಮಿಕೊಳ್ಳಲಾಗಿದೆ.
ಇದೇ ಡಿಸೆಂಬರ್ 11 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಒಳಮೀಸಲಾತಿಗಾಗಿ ಬೃಹತ್ ಸಮಾವೇಶ ಕೂಡ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದ ಒಳಗೆ ಸದಾಶಿವ ಆಯೋಗದ ವರದಿ ಜಾರಿಗೆ ತರಬೇಕು, ಇಲ್ಲವಾದರೆ ಎಲ್ಲ ಪಕ್ಷದ ಮುಖಂಡರಿಗೆ ಚುನಾವಣೆಯಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಸಮುದಾಯದ ಮುಖಂಡರು ತಿಳಿಸಿದರು.
ಸಿದ್ದರಾಮಯ್ಯ ಕೂಡ ಒಳಮೀಸಲಾತಿ ಜಾರಿ ಮಾಡುವುದಾಗಿ ಮಾತು ಕೊಟ್ಟು ಬಳಿಕ ಜಾರಿಗೆ ತರದ ಕಾರಣ ಅವರು ಅಧಿಕಾರ ಕಳೆದುಕೊಂಡರು, ರಾಜ್ಯ ಸರ್ಕಾರ ಕೂಡಲೇ ಸದಾಶಿವ ಆಯೋಗವನ್ನು ಜಾರಿಗೊಳಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ದಾವಣಗೆರೆ: ಸೇತುವೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಕಾರು; ಎಎಸ್‌ಐ ಪುತ್ರ ಸಾವು