ETV Bharat / state

ದಾವಣಗೆರೆಯಲ್ಲಿ ಹೆಚ್ಚುತ್ತಿರುವ ಕೊರೊನಾ: ಜಿಲ್ಲಾಡಳಿತದ ಜೊತೆ ಕೈ ಜೋಡಿಸಲು ಡಿಸಿ ಮನವಿ

ಜಿಲ್ಲೆಯಲ್ಲಿ 10,097 ಕೊರೊನಾ ಸೋಂಕಿತರಿದ್ದು, ಇದುವರೆಗೆ 196 ಜನರು ಸಾವನ್ನಪ್ಪಿದ್ದಾರೆ. ಜನ ತಮ್ಮಷ್ಟಕ್ಕೆ ತಾವೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಜಿಲ್ಲಾಡಳಿತದ ಜೊತೆ ಕೈ ಜೋಡಿಸಲು ಡಿಸಿ ಮನವಿ
ಜಿಲ್ಲಾಡಳಿತದ ಜೊತೆ ಕೈ ಜೋಡಿಸಲು ಡಿಸಿ ಮನವಿ
author img

By

Published : Sep 3, 2020, 12:43 PM IST

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹತ್ತು ಸಾವಿರ ಗಡಿ ದಾಟಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಬಲಿಯಾಗುತ್ತಿರುವುದಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಕಳವಳ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ 10,097 ಕೊರೊನಾ ಸೋಂಕಿತರಿದ್ದು, ಇದುವರೆಗೆ 196 ಜನರು ಸಾವನ್ನಪ್ಪಿದ್ದಾರೆ. ಜನ ತಮ್ಮಷ್ಟಕ್ಕೆ ತಾವೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮನೆಯಲ್ಲಿಯೇ ಮೆಡಿಕಲ್ ಶಾಪ್​​ಗಳಿಂದ ಮಾತ್ರೆ ತೆಗೆದುಕೊಂಡು ಸುಮ್ಮನಾಗುತ್ತಿದ್ದಾರೆ. ಆರೋಗ್ಯ ಗಂಭೀರ ಸ್ಥಿತಿಗೆ ಬಂದ ಬಳಿಕ ಆಸ್ಪತ್ರೆಗೆ ಬರುತ್ತಾರೆ. ಇವರನ್ನು ಉಳಿಸುವುದು ಕಷ್ಟ ಎಂದು ಹೇಳಿದ್ದಾರೆ.

ಪ್ರಾಥಮಿಕ ಹಂತದಲ್ಲಿ ನಮಗೆ ಮಾಹಿತಿ ನೀಡಿದರೆ ಯಾವುದೇ ಸಮಸ್ಯೆ ಆಗಲ್ಲ. ದಯವಿಟ್ಟು ಕೊರೊನಾ ಟೆಸ್ಟ್ ಮಾಡಿಸಿ.‌ ಜಿಲ್ಲಾಡಳಿತದ ಜೊತೆ ಕೈ ಜೋಡಿಸಿ ಮಹಾಮಾರಿ ಕೊರೊನಾ ಓಡಿಸಲು ಸಹಕರಿಸಿ ಎಂದು ಡಿಸಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.