- ಶಿಗ್ಗಾಂವಿಯಲ್ಲಿ ಶೇ.75.07
- ಚನ್ನಪಟ್ಟಣ ಶೇ.84.25
- ಸಂಡೂರು ಶೇ.71.47
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ: ಸಂಜೆ 5ಗಂಟೆ ವೇಳೆಗೆ ಚನ್ನಪಟ್ಟಣದಲ್ಲಿ ಅತಿ ಹೆಚ್ಚು 84 ರಷ್ಟು ಮತದಾನ
Published : Nov 13, 2024, 10:23 AM IST
|Updated : Nov 13, 2024, 11:01 AM IST
ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿರುವ ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. ಮತದಾರರು ಉತ್ಸಾಹದಿಂದ ಮತಗಟ್ಟೆಗಳತ್ತ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿದೆ. ಇದೇ ಮೊದಲ ಸಲ ಮತ ಹಾಕುವ ಯುವಜನತೆ ಸೇರಿದಂತೆ ವಯೋವೃದ್ಧರೂ ಕೂಡಾ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ವೋಟ್ ಮಾಡುತ್ತಿದ್ದಾರೆ.
LIVE FEED
ಚನ್ನಪಟ್ಟಣದಲ್ಲಿ ಶೇ 84.26ರಷ್ಟು ಮತದಾನ
ಸಂಡೂರಿನಲ್ಲಿ ಸಂಜೆ ವೇಳೆ ಶೇ 71ರಷ್ಟು ಮತದಾನ
ಸಂಡೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಸಂಜೆ 5 ಗಂಟೆ ವೇಳೆಗೆ ಶೇ 71.47ರಷ್ಟು ಮತದಾನ ನಡೆದಿದೆ ಎಂದು ತಿಳಿದು ಬಂದಿದೆ.
3 ಗಂಟೆ ವೇಳೆಗೆ ಇಷ್ಟಿತ್ತು ಮತದಾನದ ಪ್ರಮಾಣ
- ಶಿಗ್ಗಾಂವಿಯಲ್ಲಿ ಶೇ.59.62
- ಚನ್ನಪಟ್ಟಣ ಶೇ.67.63
- ಸಂಡೂರು ಶೇ.58.27
1 ಗಂಟೆಯವರೆಗೆ ಶೇಕಡಾವಾರು ಮತದಾನದ ಪ್ರಮಾಣ
- ಶಿಗ್ಗಾಂವಿಯಲ್ಲಿ ಶೇ.43.50
- ಚನ್ನಪಟ್ಟಣ ಶೇ.48.15
- ಸಂಡೂರು ಶೇ.43.46
- ಒಟ್ಟು ಮತದಾನದ ಸರಾಸರಿ ಶೇ.45.02
ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಮತದಾನ
ಹುಲಗೂರ ನಗರದ ಬಾಲಕರ ಮಾದರಿ ಪ್ರಾಥಮಿಕ ಮಾದರಿ ಶಾಲೆಯ ಮತಗಟ್ಟೆ ಸಂಖ್ಯೆ 33ರಲ್ಲಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಮತ್ತು ಕೈ ಮುಖಂಡ ಅಜ್ಜಂಫೀರ್ ಖಾದ್ರಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಬಳಿಕ ತಮ್ಮ ವಿಜಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕರ್ತರ ಮನೆಯಲ್ಲಿ ಒಬ್ಬಟ್ಟು ಸವಿದ ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣದಲ್ಲಿ ಮತದಾನ ಬಿರುಸುಕೊಂಡಿದ್ದು, 90 ವರ್ಷದ ಜಯಮ್ಮ ಮತ್ತು ಮುದ್ದಮ್ಮ ಹಾಗೂ 85 ವರ್ಷದ ಚಿಕ್ಕಮ್ಮ ಎಂಬ ವೃದ್ಧೆಯರು ತಮ್ಮ ಮತದಾನ ಹಕ್ಕು ಚಲಾಯಿಸಲು ಕೊಡಂಬಳ್ಳಿಯ ಮತಗಟ್ಟೆ ಸಂಖ್ಯೆ 236ಗೆ ಆಗಮಿಸಿದ್ದರು. ಇನ್ನು ವಾರ್ಡ್ ನಂಬರ್ ಮೂರಕ್ಕೆ ಭೇಟಿ ನೀಡಿದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರೊಂದಿಗೆ ಕೆಲವು ಹೊತ್ತು ಮಾತುಕತೆ ನಡೆಸಿದರು. ಭೇಟಿಯ ವೇಳೆ ಕಾರ್ಯಕರ್ತರ ಮನೆಯಲ್ಲಿ ಒಬ್ಬಟ್ಟು ಸೇವಿಸಿದರು.
ಅಮೆರಿಕದಿಂದ ಆಗಮಿಸಿ ಮತದಾನ ಮಾಡಿದ ಅನುಷಾ
ಶಿಗ್ಗಾಂವಿಯಲ್ಲಿ ಮತದಾನ ಬಿರುಸುಗೊಂಡಿದ್ದು, ಗೃಹಿಣಿಯೊಬ್ಬಳು ಅಮೆರಿಕ (USA)ದಿಂದ ಆಗಮಿಸಿ ಮತ ಹಾಕಿದರು. ಅನುಷಾ ತನ್ನ ತಾಯಿ ಜೊತೆಗೆ ಆಗಮಿಸಿ ಮತದಾನ ಮಾಡಿದ ಗೃಹಿಣಿ. ಮಮ್ಲೇದೇಸಾಯಿ ಶಾಲೆಯಲ್ಲಿನ ಮತಗಟ್ಟೆಗೆ ಆಗಮಿಸಿ ಅವರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಬಳಿಕ ಮಾತನಾಡಿ, ಮತದಾನ ನಮ್ಮ ಹಕ್ಕು, ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು. ಈ ಮೂಲಕ ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಕುಮಾರಸ್ವಾಮಿ ವಿರುದ್ಧ ಸಿಪಿ ಯೋಗೇಶ್ವರ್ ವಾಗ್ದಾಳಿ
ಚಕ್ಕರೆ ಗ್ರಾಮದಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿ ಮಾತನಾಡಿದ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್, ಈ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ. ಇಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ನೀರಾವರಿ ಅಭಿವೃದ್ಧಿಯಾದಾಗ ಕ್ರೆಡಿಟ್ಗಾಗಿ ಬಹಳ ಜನರು ಬರುತ್ತಾರೆ. ಹೆಚ್ಡಿ ಕುಮಾರಸ್ವಾಮಿ ಅವರು ಮೊದಲು ಸಿಎಂ ಆಗಿದ್ದಾಗ ನೀರಾವರಿ ವಿಚಾರವೇ ಇರಲಿಲ್ಲ. ಆದರೆ, ಯೋಜನೆ ಯಶಸ್ವಿಯಾದ ಬಳಿಕ ಎಲ್ಲರೂ ಬರುತ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಕುಟುಂಬಸಮೇತರಾಗಿ ಮತಗಟ್ಟೆಗೆ ಬಂದು ವೋಟ್ ಮಾಡಿದ ಕಾಂಗ್ರೆಸ್ ಅಭ್ಯರ್ಥಿ
ಬಳ್ಳಾರಿಯ ಸಂಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಕುಟುಂಬಸಮೇತರಾಗಿ ಸಂಡೂರು ಪಟ್ಟಣದ 67ನೇ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, "ನಾನು ಮೊದಲ ಬಾರಿ ಅಭ್ಯರ್ಥಿಯಾಗಿ ಮತದಾನ ಮಾಡಿದ್ದು ಖುಷಿ ನೀಡಿತು. ಎಲ್ಲೆಡೆ ಮತದಾನ ಚೆನ್ನಾಗಿ ನಡೆಯುತ್ತಿದೆ. ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದೇನೆ. ಇದೊಂದು ಹೊಸ ಅನುಭವ. ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು. ಹಾಗೆಯೇ ಎಲ್ಲರೂ ತಮ್ಮ ಮತ ಹಕ್ಕು ಚಲಾಯಿಸಬೇಕು. ಸಂವಿಧಾನದ ಆಶಯದಂತೆ ವೋಟ್ ಮಾಡಿ" ಎಂದು ಮನವಿ ಮಾಡಿದರು.
ಸಂಸದ ತುಕಾರಾಂ ಮಾತನಾಡಿ, "ನಾವು ಕುಟುಂಬಸಮೇತರಾಗಿ ಮತದಾನ ಮಾಡಿದ್ದು ಖುಷಿಯಾಯಿತು. ಸಂವಿಧಾನದ ಆಶಯದಂತೆ ಎಲ್ಲರೂ ಮತದಾನ ಮಾಡಬೇಕು. ಇದು ನನ್ನ 6ನೇ ಚುನಾವಣೆ. ಸತತ ನಾಲ್ಕೂ ಬಾರಿ ಗೆದ್ದಿದ್ದೇನೆ. ಸಂವಿಧಾನ ವ್ಯವಸ್ಥೆಯಲ್ಲಿ ಯಾರೂ ಮತದಾನದಿಂದ ಹೊರಗುಳಿಯಬಾರದು" ಎಂದು ಹೇಳಿದರು.
11 ಗಂಟೆಯವರೆಗಿನ ಮತದಾನದ ವಿವರ ಹೀಗಿದೆ
- ಶಿಗ್ಗಾಂವಿಯಲ್ಲಿ ಶೇ.26.01
- ಚನ್ನಪಟ್ಟಣ ಶೇ.27.02
- ಸಂಡೂರು ಶೇ.25.96
- ಒಟ್ಟು ಮತದಾನದ ಸರಾಸರಿ ಶೇ 26.33
ಪುತ್ರನ ಬಗ್ಗೆ ಬಸವರಾಜ್ ಬೊಮ್ಮಾಯಿ ಹೇಳಿದ್ದೇನು?
ಮತದಾನ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, "ರಾಜ್ಯ ಸರ್ಕಾರ ಕಳೆದ 15 ದಿನದಿಂದ ವಿಧಾನಸೌಧಕ್ಕೆ ಕೀಲಿ ಹಾಕಿ ಹಣದ ಚೀಲ ತೆಗೆದುಕೊಂಡು ಬಂದು ಇಲ್ಲಿ ಚುನಾವಣೆ ಮಾಡಿದ್ದಾರೆ. ಅವರಿಗೆ ಜನ ಪಾಠ ಕಲಿಸುತ್ತಾರೆ" ಎಂದರು. "ಕ್ಷೇತ್ರದಲ್ಲಿ ಆರಂಭದಿಂದಲೂ ನಮಗೆ ನೂರಕ್ಕೆ ನೂರರಷ್ಟು ಸಾಮಾನ್ಯ ಮತದಾರರು ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದಾರೆ. ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಗೆಲ್ಲುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗ್ಗೆ 9 ಗಂಟೆಗೆ ಎಲ್ಲಿ ಎಷ್ಟು ಮತದಾನ?
- ಶಿಗ್ಗಾಂವಿ ಶೇ.10.08
- ಚನ್ನಪಟ್ಟಣ ಶೇ.10.34
- ಸಂಡೂರು ಶೇ.10.11
ಸಂತೋಷ್ ಲಾಡ್ ತಾಯಿ, ಸಹೋದರಿಯಿಂದ ಮತದಾನ
ಬಳ್ಳಾರಿಯ ಸಂಡೂರಿನಲ್ಲಿ ಸಚಿವ ಸಂತೋಷ್ ಲಾಡ್, ಸಹೋದರಿ ಹಾಗೂ ತಾಯಿ ಶೈಲಜಾ ಮತಗಟ್ಟೆ 67ರಲ್ಲಿ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಶೈಲಜಾ ಲಾಡ್ ಅವರ ಆಶೀರ್ವಾದ ಪಡೆದರು.
ಆಂಜನೇಯ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿದ ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತದಾನಕ್ಕೂ ಮುನ್ನ ಕ್ಷೇತ್ರದ ಪ್ರಸಿದ್ಧ ಶ್ರೀಕೆಂಗಲ್ ಆಂಜನೇಯ ಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಚನ್ನಪಟ್ಟಣ: ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮತದಾನ
ಬೊಂಬೆನಗರಿ ಚನ್ನಪಟ್ಟಣದಲ್ಲಿ ಮತದಾನ ಬಿರುಸು ಪಡೆದುಕೊಂಡಿದೆ. ಮತದಾರರು ಮತಗಟ್ಟೆ ಕೇಂದ್ರಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ತಾಲೂಕಿನ ಚಕ್ಕೆರೆ ಮತಗಟ್ಟೆ 167ರಲ್ಲಿ ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದರು.
ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮತದಾನ
ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಇವರ ತಂದೆ ಹಾಗು ಸಂಸದ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.