ETV Bharat / state

ಪಹಣಿ ಪತ್ರದಲ್ಲಿ ವಕ್ಫ್ ಹೆಸರು ತೆರವು: ನಿಟ್ಟುಸಿರು ಬಿಟ್ಟ ಉಪ್ಪಿನ ಬೆಟಗೇರಿ ರೈತರು

ಇತ್ತೀಚೆಗೆ ತಹಶೀಲ್ದಾರ್​ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ವಕ್ಫ್ ಮಂಡಳಿಯಿಂದ ರೈತರ ಪಹಣಿಯಲ್ಲಿ ವಕ್ಫ್​ ಆಸ್ತಿ ಎನ್ನುವುದನ್ನು ತೆರವುಗೊಳಿಸುವ ಸಂಬಂಧ ಎನ್​ಒಸಿ ಪಡೆಯಲಾಗಿತ್ತು.

Uppina Betageri Farmers
ಉಪ್ಪಿನ ಬೆಟಗೇರಿ ರೈತರು (ETV Bharat)
author img

By ETV Bharat Karnataka Team

Published : Nov 13, 2024, 11:05 AM IST

Updated : Nov 13, 2024, 12:27 PM IST

ಧಾರವಾಡ: ರೈತರ ಪಹಣಿ ಪತ್ರದಲ್ಲಿ ವಕ್ಫ್​ ಆಸ್ತಿ ಎಂದು ನಮೂದಾಗಿದ್ದನ್ನು ತಹಶೀಲ್ದಾರ್​ ತೆರವು ಮಾಡಿದ್ದು, ಉಪ್ಪಿನ ಬೆಟಗೇರಿ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಜವಳಗಿ, ಮಸೂತಿ ಹಾಗೂ ಹುಟಗಿ ಎಂಬ ರೈತ ಕುಟುಂಬಗಳ ಪಹಣಿ ಪತ್ರದ ಕಾಲಂ ನಂಬರ್ 11ರಲ್ಲಿ 'ವಕ್ಫ್​ ಆಸ್ತಿಗೆ ಒಳಪಟ್ಟಿದೆ' ಎಂದು ನಮೂದಾಗಿತ್ತು. ಪಹಣಿಯಲ್ಲಿನ ವಕ್ಫ್​ ಆಸ್ತಿ ಎಂಬ ಪದ ತೆಗೆಯಬೇಕು ಎಂದು ಆಗ್ರಹಿಸಿ ರೈತರು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ದೊಡ್ಡಮಟ್ಟದ ಹೋರಾಟ ನಡೆಸಿದ್ದರು. ಇದಾದ ನಂತರ, ತಹಶೀಲ್ದಾರ್​ ವಕ್ಫ್ ಹಾಗೂ ರೈತರೊಂದಿಗೆ ಸಭೆ ನಡೆಸಿ ಎನ್ಒಸಿ ಕೊಡಿಸಿದ್ದರು.

ರೈತ ಮನು ಮಸೂತಿ (ETV Bharat)

ಪಹಣಿಯಲ್ಲಿ ನಮೂದಾಗಿದ್ದ ವಕ್ಫ್ ಹೆಸರನ್ನು ತೆರವುಗೊಳಿಸುವಂತೆ ತಹಶೀಲ್ದಾರ್​ ಗಡುವು ನೀಡಿದ್ದರು. ಇದೀಗ ರೈತರ ಪಹಣಿಯಲ್ಲಿ ನಮೂದಾದ ವಕ್ಫ್​ ಹೆಸರು ತೆರುವು ಮಾಡಿರುವುದರಿಂದ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಇದನ್ನೂ ಓದಿ: ವಕ್ಫ್ ಆಸ್ತಿ ಪ್ರಕರಣ: ಉಪ್ಪಿನ ಬೆಟಗೇರಿ ಗ್ರಾಮದ ರೈತರು ನಿರಾಳ

Last Updated : Nov 13, 2024, 12:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.