ದಾವಣಗೆರೆ: ಕೊರೊನಾ, ಲಾಕ್ಡೌನ್ ಸಮಯದಲ್ಲಿ ಕಷ್ಟದಲ್ಲಿರುವ ಮಂಗಳ ಮುಖಿಯರಿಗೆ ಮಹಿಳೆಯೊಬ್ಬರು ಸೊಪ್ಪು ನೀಡಿ ಮಾನವೀಯತೆ ಮೆರೆದಿದ್ದಾರೆ.
ನಗರದ ಕೆಆರ್ ಮಾರುಕಟ್ಟೆಯಲ್ಲಿ ಜಿಲ್ಲಾಡಳಿತದಿಂದ ಮಂಗಳಮುಖಿಯರಿಗೆ ಫುಡ್ ಕಿಟ್ ನೀಡುವ ವೇಳೆ ತಳ್ಳುವ ಗಾಡಿಯಲ್ಲಿ ಸೊಪ್ಪು ಮಾರುತ್ತಾ ಬಂದ ಅಂಬುಜಮ್ಮ, ಕಳೆದ ವರ್ಷ ಕೂಡ ಸೊಪ್ಪು ನೀಡಿದ್ದೆ, ಈ ಬಾರಿನೂ ನೀಡ್ಬೇಕು ಎಂದು ಮುಂದೆ ಬಂದು ತಹಶೀಲ್ದಾರ್ ಗಿರೀಶ್ ಸಮ್ಮುಖದಲ್ಲಿ ಮಂಗಳಮುಖಿಯರಿಗೆ ಸೊಪ್ಪು ನೀಡಿದ್ದಾರೆ.
ಅಂಬುಜಮ್ಮ ಸಾಮಾಜಿಕ ಕಳಕಳಿ ಗಮನಿಸಿದ ತಹಶೀಲ್ದಾರ್ ಗಿರೀಶ್ ತಾಲೂಕು ಆಡಳಿತದ ವತಿಯಿಂದ ಹೊಸ ತಳ್ಳುವ ಗಾಡಿ ನೀಡಿ ಪ್ರತಿ ದಿನ ಮುವತ್ತು ರೂಪಾಯಿ ಬಾಡಿಗೆ ನೀಡೋದನ್ನ ತಪ್ಪಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜನ ಸಂಕಷ್ಣಕ್ಕೀಡಾಗಿದ್ದಾರೆ. ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ಮಂಗಳ ಮುಖಿಯರು ಕಷ್ಟದಲ್ಲಿದ್ದಾರೆ. ಜೀವನ ನಡೆಸಲು ಆಗದೆ ಸಂಕಷ್ಟಕ್ಕೀಡಾಗಿದ್ದನ್ನು ಗಮನಿಸಿದ ಜಿಲ್ಲಾಡಳಿತ ಮಂಗಳ ಮುಖಿಯರ ಸಹಾಯಕ್ಕೆ ನಿಂತಿದೆ. ಜಿಲ್ಲಾಡತದಿಂದ 200 ಆಹಾರ ಕಿಟ್ಗಳನ್ನು ವಿತರಿಸಲಾಗಿದೆ.
ಓದಿ:CD case: ’ಕೂಡಲೇ ರೇಪಿಸ್ಟ್ ರಮೇಶ್ನನ್ನು ಬಂಧಿಸಿ’ - ಡಿಕೆಶಿ ಆಗ್ರಹ