ETV Bharat / state

ಬಡ ರೈತರು ಬೆಳೆದ ರಾಗಿ‌ಗಿಲ್ಲ ಬೆಲೆ; ಇಲ್ಲೇನಿದ್ರೂ ದಲ್ಲಾಳಿಗಳದ್ದೇ ಹವಾ - ದಾವಣಗೆರೆಯ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ವಂಚನೆ ಆರೋಪ

ರಾಗಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳೇ ಹೆಚ್ಚೆಚ್ಚು ನೋಂದಣಿ‌ ಮಾಡಿಕೊಂಡು ಕ್ವಿಂಟಲ್‌ಗಟ್ಟಲೆ ರಾಗಿ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದು, ರೈತರಿಗೆ ವಂಚನೆಯಾಗುತ್ತಿದೆ ಎಂದು ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ರಾಗಿ‌
ರಾಗಿ‌
author img

By

Published : Apr 28, 2022, 6:08 PM IST

ದಾವಣಗೆರೆ: ರಾಗಿ ಬೆಳೆಯಿಂದ ಜಿಲ್ಲೆಯಲ್ಲಿ ರೈತರು ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈಗಾಗಲೇ ಸಾಕಷ್ಟು ರೈತರು ಹೆಚ್ಚು ರಾಗಿ ಬೆಳೆದು ಮಾರಾಟ ಮಾಡಲು ಕಾದು ಕುಳಿತಿದ್ದಾರೆ. ಆದರೆ, ಸರ್ಕಾರ ಖರೀದಿ ಕೇಂದ್ರ‌ ತೆರೆದರೂ ಕೂಡ ಅಲ್ಲಿ ಬಡ ರೈತರು ಬೆಳೆದ ರಾಗಿ‌ಗೆ ಬೆಲೆಯೇ ಇಲ್ಲದಂತಾಗಿದೆ. ಬದಲಿಗೆ ಮಾಮೂಲು ಪಡೆದು ಖರೀದಿ‌ ಕೇಂದ್ರದ ಸಿಬ್ಬಂದಿ ದಲ್ಲಾಳಿಗಳಿಂದಲೇ ಖರೀದಿ ಮಾಡುತ್ತಿದ್ದಾರೆ. ಇದು ರೈತರನ್ನು ಕೆರಳಿಸಿದೆ.‌

ದಾವಣಗೆರೆಯಲ್ಲಿ ಸರ್ಕಾರದಿಂದ ರೈತರಿಗಾಗಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದ್ದು, ರೈತರ ಬದಲಿಗೆ ಕೇವಲ ದಲ್ಲಾಳಿಗಳಿಗೆ ಮಾತ್ರ ಉಪಯೋಗ ಆಗುತ್ತಿದೆ. ಖರೀದಿ ಕೇಂದ್ರದಲ್ಲಿ ರೈತರು ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ತೆರಳಿದರೆ ಸಿಬ್ಬಂದಿ ಮಾತ್ರ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ.

ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳೇ ಹೆಚ್ಚೆಚ್ಚು ನೋಂದಣಿ‌ ಮಾಡಿಕೊಂಡು ಕ್ವಿಂಟಲ್‌ಗಟ್ಟಲೆ ರಾಗಿ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದು ರೈತರಿಗೆ ವಂಚನೆಯಾಗುತ್ತಿದೆ. ಇದರಿಂದ ಬೇಸತ್ತಿರುವ ರೈತರು ದಾವಣಗೆರೆ ರಾಗಿ ಖರೀದಿ ಕೇಂದ್ರಕ್ಕೆ ಮುತ್ತಿಗೆ ಹಾಕಿ, ರಸ್ತೆ ತಡೆ‌ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರೈತರೊಬ್ಬರು ಮಾತನಾಡಿ, ರೈತರಿಗೆ ಕಳೆದ ಮೂರು ದಿನಗಳಿಂದ ಸರ್ವರ್ ಬ್ಯುಸಿಯಾಗಿದೆ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಲೆಡ್ಜರ್‌ನಲ್ಲಿ ಎಂಟ್ರಿ ಮಾಡಿಸಿಕೊಳ್ಳುತ್ತಿದ್ದಾರೆ.‌ ಆದರೆ, ನೋಂದಣಿ ಮಾಡಿಕೊಳ್ಳುವುದು ಮಾತ್ರ ದಲ್ಲಾಳಿಗಳದ್ದು, ರಾಗಿ ಖರೀದಿದಾರರದ್ದು ಎಂದು ದೂರಿದರು. ಕ್ವಿಂಟಲ್ ರಾಗಿಗೆ ಸರ್ಕಾರದ ಖರೀದಿ ಕೇಂದ್ರದಲ್ಲಿ 3,377 ರೂಪಾಯಿ ಬೆಲೆ‌‌ ನಿಗದಿ ಮಾಡಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್​ ರಾಗಿಗೆ 1,900 ರೂಪಾಯಿ ಇದ್ದು ದಲ್ಲಾಳಿಗಳು ಮೊದಲು ರೈತರಿಂದ‌ ಕಡಿಮೆ‌ ಬೆಲೆಗೆ ರಾಗಿ ಖರೀದಿ ಮಾಡುತ್ತಿದ್ದಾರೆ. ಬಳಿಕ ಅದೇ ರಾಗಿಯನ್ನು ಖರೀದಿ ಕೇಂದ್ರದಲ್ಲಿ ಎಂಟ್ರಿ ಹಾಗೂ ಜಿಪಿಎಸ್ ಮಾಡಿಸುವ ಮೂಲಕ ಸಿಬ್ಬಂದಿಗೆ ಇಂತಿಷ್ಟು ಹಣ ನೀಡಿ 3,377ಕ್ಕೆ‌ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಕಷ್ಟು ರೈತರ ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿಯಾಗಿಲ್ಲ. ಇದರಿಂದ‌ ರೈತರು ಜಿಲ್ಲಾಡಳಿತದ ಕದ ತಟ್ಟಿದ್ದಾರೆ.

ಇದಕ್ಕೆ ಸ್ಪಂದಿಸಿದ ಎಸಿ ಮಮತ ಹೊಸಗೌಡರ್, ಪರಿಶೀಲನೆ ನಡೆಸಿ ರೈತರ ರಾಗಿಯನ್ನು ಖರೀದಿ ಕೇಂದ್ರದಲ್ಲಿ ಖರೀದಿ ಮಾಡುವಂತೆ ಜಿಲ್ಲಾಧಿಕಾರಿಗಳ‌ ಮೂಲಕ ಒತ್ತಾಯಿಸುತ್ತೇನೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ನೌಕರಿಗೂ ದುಡ್ಡು, ಟ್ರಾನ್ಸ್‌ಫರ್‌ಗೂ ದುಡ್ಡು; ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕೆಟ್ಟು ಹೋಗಿದೆ: ಖರ್ಗೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.