ETV Bharat / state

ಭದ್ರಾ ಜಲಾಶಯದಿಂದ ತುಂಗಭದ್ರಾ ಡ್ಯಾಂಗೆ ನೀರು ಬಿಟ್ಟರೇ ಜೋಕೆ: ಸರ್ಕಾರಕ್ಕೆ ಎಚ್ಚರಿಸಲು ಹೋರಾಟಕ್ಕಿಳಿದ ದಾವಣಗೆರೆ ರೈತರು - ಭಾರತೀಯ ರೈತರ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ

ಭದ್ರಾ ಡ್ಯಾಂನಿಂದ ತುಂಗಭದ್ರಾ ಡ್ಯಾಂಗೆ ಏಳು ಟಿಎಂಸಿ ನೀರು ಬಿಟ್ಟರೇ ಉಗ್ರ ಹೋರಾಟ ಮಾಡುವುದಾಗಿ ಭಾರತೀಯ ರೈತರ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

farmers oppose for water release
ಭದ್ರಾ ಜಲಾಶಯದಿಂದ ತುಂಗಭದ್ರಾ ಡ್ಯಾಂಗೆ ನೀರು ಬಿಡಲು ರೈತರ ವಿರೋಧ
author img

By

Published : Feb 28, 2023, 10:21 AM IST

ದಾವಣಗೆರೆ: ನಮ್ಮಲ್ಲಿ ನೀರಿದ್ದರೆ ಕೊಡಬಹುದು. ನಮಗೆ ನೀರಿನ ಕೊರತೆ ದಟ್ಟವಾಗಿರುವುದರಿಂದ ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಕೊಡಲು ಆಗಲ್ಲ ಎಂದು ನೀರಾವರಿ ಸಲಹ ಸಮಿತಿ ಹೇಳಿದ್ದರೂ ಕೂಡ ರಾಜ್ಯ ಸರ್ಕಾರ ನಿರ್ಧಾರಕ್ಕೆ ಬರುವ ಭೀತಿ ದಾವಣಗೆರೆಯ ರೈತರನ್ನು ಕಾಡುತ್ತಿದೆ. ಭದ್ರಾ ಡ್ಯಾಂನಿಂದ ತುಂಗಭದ್ರಾ ಡ್ಯಾಂಗೆ ಏಳು ಟಿಎಂಸಿ ನೀರು ಬಿಟ್ಟರೇ ಉಗ್ರ ಹೋರಾಟ ಮಾಡುವುದಾಗಿ ಭಾರತೀಯ ರೈತರ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದೆ. ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಭದ್ರಾ ನೀರನ್ನು ತುಂಗಭದ್ರಾಗೆ ಬಿಡದಂತೆ ರೈತರು ಪಟ್ಟು ಹಿಡಿದು ಹೋರಾಟಕ್ಕಿಳಿದಿದ್ದು, ಎಸಿಯವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗದ ಲಕ್ಕವಳ್ಳಿಯ ಭದ್ರಾ ಡ್ಯಾಂ ದಾವಣಗೆರೆ ಜಿಲ್ಲೆಯ ಜನತೆಗೆ ಹಾಗೂ ರೈತರಿಗೆ ಜೀವನಾಡಿ. ಇದೇ ಡ್ಯಾಂನಿಂದ ಬರುವ ನೀರಿನಲ್ಲಿ ವರ್ಷಕ್ಕೆ 2 ಭತ್ತದ ಬೆಳೆಯನ್ನು ದಾವಣಗೆರೆ ರೈತರು ಬೆಳೆಯುತ್ತಾರೆ. ಸಾವಿರಾರು ಎಕರೆ ಪ್ರದೇಶದ ಅಡಿಕೆ ಹಾಗೂ ತೆಂಗಿನ ತೋಟ ಮಾಡಿಕೊಂಡಿದ್ದಾರೆ. ಅಂತಹ ಭದ್ರಾ ಡ್ಯಾಂನಿಂದ ಹೊಸಪೇಟೆ ಬಳಿಯ ತುಂಗಾಭದ್ರಗೆ ಏಳು ಟಿಎಂಸಿ ನೀರು ಹರಿಸಬೇಕೆಂದು ಆ ಭಾಗದ ಜನಪ್ರತಿನಿಧಿಗಳು ಹಾಗೂ ರೈತರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಸಿಎಂ ಸಹ ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ ಎಂದು ದಾವಣಗೆರೆ ರೈತರು ಮಾಹಿತಿ ನೀಡಿದ್ದಾರೆ.

ಹೀಗೆ ಬೆಂಗಳೂರಿನಲ್ಲಿ ಸಿಎಂ ಸಭೆ ಮಾಡುತ್ತಿದ್ದಂತೆ ದಾವಣಗೆರೆ ಜಿಲ್ಲೆಯ ರೈತರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಶಿವಮೊಗ್ಗ ಸೇರಿದಂತೆ ಭದ್ರಾ ಅಚ್ಚುಕಟ್ಟು ಪ್ರದೇಶದ ಒಂದು ಲಕ್ಷ ಎಳು ಸಾವಿರ ಹೆಕ್ಟೇರ್​​ ಪ್ರದೇಶಕ್ಕೆ ಬೇಸಿಗೆ ಹಂಗಾಮಿನಲ್ಲಿ ನೂರು ದಿನ ನೀರು ಕೊಡಬೇಕು. ಇದಕ್ಕಾಗಿ ಬೇಕಾದ ನೀರು ಡ್ಯಾಂನಲ್ಲಿ ಇಲ್ಲ. ಇಂತಹ ಪರಿಸ್ಥಿಯಲ್ಲಿ ಮುಖ್ಯಮಂತ್ರಿಗಳು ಹೊಸಪೇಟೆ ಭಾಗದ ರೈತರ ಅಥವಾ ಚುನಾವಣೆ ಹಿನ್ನೆಲೆ ತುಂಗಭದ್ರಾ ಡ್ಯಾಂ ನೀರು ಬಿಟ್ಟರೆ ಭದ್ರಾ ಅಚ್ಚುಕಟ್ಟು ಪ್ರದೇಶಗಳಾದ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ರೈತರು ಉಗ್ರ ಹೋರಾಟ ಮಾಡುವುದಾಗಿ ನಿನ್ನೆ(ಸೋಮವಾರ) ದಾವಣಗೆರೆ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಗಂಭೀರ ಸಭೆ ನಡೆಸಿದ್ದಾರೆ. ಬಳಿಕ ಸರ್ಕಾರದ ಈ ಕ್ರಮವನ್ನು ಖಂಡಿಸಿ ಹೋರಾಟಕ್ಕಿಳಿದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ಹೋರಾಟ: ಈ ವೇಳೆ ರೈತ ಮುಖಂಡ ನಾಗರಾಜ ಕೊಂಡಜ್ಜಿ ಶಾನಭೋಗ ಮಾತನಾಡಿ ಭದ್ರಾದಿಂದ ತುಂಗಭದ್ರಾ ಅಣೆಕಟ್ಟಗೆ ಬೇಸಿಗೆಯಲ್ಲಿ 7 ಟಿಎಂಸಿ ನೀರು ಬಿಡಲು ಸರ್ಕಾರ ಸಭೆ ಕರೆದಿದೆ ಎಂಬ ಮಾಹಿತಿ ಬಂದಿದೆ. ಸರ್ಕಾರ ಯಾರನ್ನು ಪರಿಗಣಿಸದೆ ಈ ನಿರ್ಣಯ ತೆಗೆದುಕೊಂಡಿರುವುದು ದುರಂತ. ನೀರು ಹರಿಸಿದರೆ ಕುಡಿಯುವ ನೀರಿಗೆ, ಬೆಳೆಗೆ ಹಾಗೂ ತೋಟಗಾರಿಕೆಗೆ ತೊಂದರೆಯಾಗಲಿದೆ. ಬೇಸಿಗೆಯಲ್ಲಿ ಭದ್ರಾದಿಂದ ನೀರು ಹರಿಸಿದ್ದೇ ಆದರೆ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ಎಸಿಯವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಭದ್ರಾ ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ಇಲ್ಲಿನ ಇಂಜಿನಿಯರ್​ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅಂದರೆ ಸದ್ಯ ಭದ್ರಾ ಡ್ಯಾಂನಲ್ಲಿ 57.491 ಟಿಎಂಸಿ ನೀರು ಇದೆ. 13.832 ಟಿಎಂಸಿ ಡೆಡ್​​ ಸ್ಟೋರೇಜ್, 4.14 ಟಿಎಂಸಿಯಷ್ಟು ಡ್ಯಾಂನಲ್ಲಿ ಹೂಳು ತುಂಬಿಕೊಂಡಿದೆ. ಇದೆಲ್ಲ ಹೋಗಿ ಡ್ಯಾಂನಲ್ಲಿ ಉಳಿಯುವ ನೀರಿನ ಪ್ರಮಾಣ 39.479 ಟಿಎಂಸಿ. ಈ ನೀರಿನಲ್ಲಿ ಭದ್ರ ಅಚ್ಚುಕಟ್ಟು ಪ್ರದೇಶದ ಒಂದು ಲಕ್ಷ ಏಳು ಸಾವಿರ ಹೆಕ್ಟೇರ್​​ ಪ್ರದೇಶಕ್ಕೆ ಬೇಸಿಗೆ ಹಂಗಾಮಿನಲ್ಲಿ 100 ದಿನ ನೀರು ಪೂರೈಕೆಯಾಗಬೇಕು. ಇದಕ್ಕೆ ಬೇಕಾದ ನೀರು 42.172 ಟಿಎಂಸಿ. ಆದರೆ ಈಗ ಲಭ್ಯ ಇರುವುದು 39.479 ಟಿಎಂಸಿ ನೀರು. ಹೀಗಾಗಿ ರೈತರಿಗೆ ನೀರು ಪೂರೈಸಲು ಇನ್ನೂ 2 ಟಿಎಂಸಿ ನೀರು ಕೊರತೆ ಆಗಲಿದೆ ಎಂದು ಅವರು ವಿವರಿಸಿದರು.

ರೈತರ ಹಿತ ಕಾಪಾಡಬೇಕು: ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಶಾಮನೂರ ಲಿಂಗರಾಜ್ ಮಾತನಾಡಿ "ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇದ್ದು, ಜಲಾಶಯದಲ್ಲಿರುವ ನೀರಿನ ಮಟ್ಟದ ಬಗ್ಗೆ ಈಗಾಗಲೇ ಭದ್ರಾ ಅಚ್ಚುಕಟ್ಟಿನ ಮುಖ್ಯ ಇಂಜಿನಿಯರ್ ಬಣಕರ್ ಅವರು ಹಾಗೂ ಸೂಪರಿಂಡೆಂಟ್ ಇಂಜಿನಿಯರ್ ಸುಜಾತ ಅವರು ಈಗಾಗಲೇ ಸರ್ಕಾರಕ್ಕೆ ವರದಿ ನೀಡಿದ್ದಾರೆ. ತುಂಗಾಭದ್ರಾ ಜಲಾಶಯಕ್ಕೆ ನೀರನ್ನು ಬಿಟ್ಟಿದ್ದೇ ಆದರೆ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ರೈತರಿಗೆ ತೊಂದರೆಯಾಗಲಿದೆ. ಕೂಡಲೇ ಸಿಎಂ ಬೊಮ್ಮಾಯಿ ಅವರು ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.

ತುಂಗಭದ್ರಾ ಡ್ಯಾಂಗೆ ನೀರು ಬಿಡುವ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ರಾಜಕೀಯ ಕಾರಣಕ್ಕಾಗಿ ಏಳು ಟಿಎಂಸಿ ನೀರು ಕೊಟ್ಟರೆ ಬೇಸಿಗೆ ಬೆಳೆಗೆ ನೀರು ಪೂರೈಕೆ ಕಷ್ಟವಾಗುತ್ತದೆ. ನೀರು ಬಿಟ್ಟರೆ ರಾಜ್ಯ ಸರ್ಕಾರ ಮತ್ತೆ ಈ ಭಾಗದ ರೈತರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಈ ಬಗ್ಗೆ ಚಿಂತನೆ ಮಾಡಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು.

ಇದನ್ನೂ ಓದಿ: ದುಸ್ಥಿತಿಯಿಂದ ಸುಸ್ಥಿತಿಗೆ ಬಂದ ಜಲಮೂಲ.. ಪುನರುಜ್ಜೀವನಗೊಂಡ ಮಾರಗೊಂಡನಹಳ್ಳಿ ಕೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.