ETV Bharat / state

ನರ್ಸ್ ಕೈಯಿಂದ ಜಾರಿ ಬಿದ್ದು ಮಗು ಮೃತಪಟ್ಟ ಆರೋಪ: ಆಸ್ಪತ್ರೆ ಸಿಬ್ಬಂದಿಗೆ ಸಂಬಂಧಿಕರಿಂದ ತರಾಟೆ

ಚನ್ನಗಿರಿ ತಾಲೂಕಿನ ದೇವರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಸುಗೂಸು ಮೃತಪಟ್ಟಿದ್ದು, ನರ್ಸ್​ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ.

author img

By

Published : May 27, 2021, 2:40 PM IST

Newborn baby died in Davange
ದಾವಣಗೆರೆಯಲ್ಲಿ ನವಜಾತ ಶಿಶು ಸಾವು

ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಕೈಯಿಂದ ಜಾರಿ ಬಿದ್ದು ಹಸುಗೂಸು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.

ದೇವರಹಳ್ಳಿ ಗ್ರಾಮದ ತಿಮ್ಮೇಶ್ ಮತ್ತು ಲಕ್ಷ್ಮಿ ದಂಪತಿಯ ಮಗು ಜನಿಸಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದು, ನರ್ಸ್​ ಅಜಾಗರೂಕತೆಯೇ ಮಗುವಿನ ಸಾವಿಗೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ವೈದ್ಯರು ಇಲ್ಲದ ವೇಳೆ ಸಾಕಮ್ಮ ಎಂಬ ನರ್ಸ್​ ಹೆರಿಗೆ ಮಾಡಿಸಿದ್ದರು, ಈ ವೇಳೆ ಅವರ ಕೈಯಿಂದ ಜಾರಿ ಬಿದ್ದು ಮಗು ಮೃತಪಟ್ಟಿದೆ ಎಂದು ಹೇಳಲಾಗ್ತಿದೆ.

ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸಂಬಂಧಿಕರು

ಓದಿ : ಬೆಳಗಾವಿ ವ್ಯಕ್ತಿಯ 'ಅಸಹಜ ಸಾವು' ಪ್ರಕರಣ: ಪೊಲೀಸರ ವಿರುದ್ಧವೇ ಮೃತನ ಸಂಬಂಧಿಕರ ಆರೋಪ

ಗಂಡು ಮಗುವಾಯಿತು ಎಂದು ಖುಷಿಯಲ್ಲಿದ್ದ ತಂದೆ ತಾಯಿಗೆ ನಿರಾಸೆ ಮೂಡಿದೆ. ನರ್ಸ್ ಬೇಜವಾಬ್ದಾರಿಯಿಂದ ಮಗು ಮೃತಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಬಂಧಿಕರು, ದೇವರಹಳ್ಳಿ ಆಸ್ಪತ್ರೆ ಎದುರು ಜಮಾಯಿಸಿ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.