ದಾವಣಗೆರೆ: ಬೆಣ್ಣೆನಗರಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ 2.76 ಲಕ್ಷ ರೂ. ಮೌಲ್ಯದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ್ದಾರೆ.
ಶೇಕ್ ಮುಜಾಹಿದ್ ಬಂಧಿತ ಆರೋಪಿ. ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಭಾನುವಾರ ಕಾಡಜ್ಜಿ ಗ್ರಾಮದ ಷಣ್ಮುಖಪ್ಪ ಎನ್ನುವರಿಗೆ ಸೇರಿದ್ದ 3.62 ಲಕ್ಷ ಮೌಲ್ಯದ ಸ್ಫೋಟಕ ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಸೋಮವಾರ 2.76 ಲಕ್ಷ ಮೌಲ್ಯದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ವಿಕ್ರಮ್ ಎಂಬಾತ ದಾವಣಗೆರೆಯಿಂದ ಮಾನ್ವಿಗೆ ಸ್ಫೋಟಕಗಳನ್ನು ಮಾರಾಟ ಮಾಡಿದ್ದ. ಇದರ ಜಾಡು ಹಿಡಿದು ಖಚಿತ ಮಾಹಿತಿ ತೆರಳಿದ್ದ ಪೊಲೀಸರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಆರ್ಜಿ ಕ್ಯಾಂಪ್ನಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನಿಂದ 50 ಬಾಕ್ಸ್ ಜಿಲೆಟಿನ್, 6 ಬಾಕ್ಸ್ ಎಲೆಕ್ಟ್ರಾನಿಕ್ ಡಿಟೋನೇಟರ್, 750 ಕೆಜಿ ಅಮೋನಿಯಂ ನೈಟ್ರೇಟ್ ಪೌಡರ್ ಸೇರಿದಂತೆ ಹಲವು ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಓದಿ: ದಾವಣಗೆರೆ: ಗೋಡೌನ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕ ವಶ