ದಾವಣಗೆರೆ : ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಆ್ಯಂಬುಲೆನ್ಸ್ಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿದೆ. ಹಳ್ಳಿಗಾಡು ಪ್ರದೇಶಗಳಿಂದ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಈ ಆ್ಯಂಬುಲೆನ್ಸ್ಗಳು ಸದ್ದಿಲ್ಲದೆ ಉಚಿತ ಸೇವೆ ನೀಡುತ್ತಿವೆ.
ಎರಡು ವಿಧದ ಆ್ಯಂಬುಲೆನ್ಸ್ : ಜಿಲ್ಲೆಯಲ್ಲಿ ಎರಡು ತರಹದ ಆ್ಯಂಬುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ (ಸಾಮಾನ್ಯ ರೋಗಿಗಳನ್ನು ಸಾಗಿಸುವಂತಹದ್ದು) ಮತ್ತೊಂದು ಅಡ್ವಾನ್ಸ್ ಲೈಫ್ ಸಪೋರ್ಟ್ (ವೆಂಟಿಲೇಟರ್ ಹಾಗೂ ಆಕ್ಸಿಜನ್ ಹೊಂದಿರುವಂತಹದ್ದು). ಈ ಎರಡೂ ವಿಧದ ಆ್ಯಂಬುಲೆನ್ಸ್ ಚಾಲಕರು ಹಗಲಿರುಳೆನ್ನದೆ ಕೆಲಸ ಮಾಡುತ್ತಾ, ಜನರ ಜೀವ ಉಳಿಸುವ ಕಾರ್ಯ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿರುವ ಆ್ಯಂಬುಲೆನ್ಸ್ಗಳೆಷ್ಟು?
ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಒಟ್ಟು 83 ಆ್ಯಂಬುಲೆನ್ಸ್ಗಳು ಸೇವೆ ಒದಗಿಸುತ್ತಿವೆ. ಈ ಪೈಕಿ ಸರ್ಕಾರದ 108 ಜೀವರಕ್ಷಕ ಆ್ಯಂಬುಲೆನ್ಸ್ಗಳು 19, ಸಾಮಾನ್ಯ ಸರ್ಕಾರಿ ಆ್ಯಂಬುಲೆನ್ಸ್ಗಳು 11 ಇವೆ. ಉಳಿದ 53 ಖಾಸಗಿ ಆ್ಯಂಬುಲೆನ್ಸ್ಗಳಾಗಿವೆ.
ಸರ್ಕಾರಿ ಆ್ಯಂಬುಲೆನ್ಸ್ಗಳ ಸಂಖ್ಯೆ ಕಡಿಮೆ ಇರುವುದರಿಂದ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಖಾಸಗಿ ಆ್ಯಂಬುಲೆನ್ಸ್ಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಬಳಸಿಕೊಳ್ಳುತ್ತಿದೆ.