ETV Bharat / state

ಖರೀದಿದಾರರ ಕೊರತೆ, ಬೆಲೆ ಕುಸಿತದಿಂದ ಸಮಸ್ಯೆಗೆ ಸಿಲುಕಿದ ದಾವಣಗೆರೆಯ ಭತ್ತ ಬೆಳೆಗಾರರು - ಲಾಕ್ ಡೌನ್ ಪರಿಣಾಮ

ಲಾಕ್​ಡೌನ್​ ವೇಳೆ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಬೆಳೆದ ಬೆಳೆಯನ್ನು ಕೊಳ್ಳುವವರಿಲ್ಲದೆ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಸಾವಿರಾರು ಎಕರೆಯಲ್ಲಿ ಭತ್ತ ಬೆಳೆದ ದಾವಣಗೆರೆಯ ರೈತರ ಸಮಸ್ಯೆಯೂ ಇದೇ ಆಗಿದೆ.

Lack of paddy buyers
ಸಮಸ್ಯೆಗೆ ಸಿಲುಕಿದ ದಾವಣಗೆರೆಯ ಭತ್ತ ಬೆಳೆಗಾರರು
author img

By

Published : Jun 3, 2021, 10:57 AM IST

ದಾವಣಗೆರೆ: ಭತ್ತ ಖರೀದಿದಾರರು ತಮಗೆ ಇಷ್ಟ ಬಂದಂತೆ ಬೆಲೆ ನಿಗದಿ ಮಾಡುತ್ತಿದ್ದು, ಇದರಿಂದ ನಷ್ಟವಾಗ್ತಿದೆ. ಹಾಗಾಗಿ, ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಭತ್ತವನ್ನು ಬೆಳೆಯುವ ರೈತರೇ ಹೆಚ್ಚಿದ್ದು, ಸಾವಿರಾರು ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ಈಗಾಗಲೇ ಭತ್ತ ನಾಟಿ ಮಾಡಿ ಫಸಲು ಕೈಗೆ ಬರುವ ವೇಳೆಯಲ್ಲಿ ಲಾಕ್​​ಡೌನ್ ಘೋಷಣೆಯಾಗಿದ್ದರಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಹರಿಹರ ತಾಲೂಕಿನ ಕಡ್ಲೆಗುಂದಿ ಗ್ರಾಮದ ರೈತರು ಸಾವಿರಾರು ಎಕರೆಯಲ್ಲಿ ಭತ್ತ ಬೆಳೆದು ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಮೂರ್ನಾಲ್ಕು ಖರೀದಿದಾರರು ಭತ್ತ ಖರೀದಿಗೆ ಮುಂದೆ ಬಂದರೂ ಕ್ವಿಂಟಾಲ್ ಭತ್ತಕ್ಕೆ ಕೇವಲ 1,450 ರೂಪಾಯಿ ನಿಗದಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಕ್ವಿಂಟಾಲ್ ಭತ್ತದ ದರ 2,000 ರೂ.ತನಕ ಇರುತ್ತದೆ. ಈಗ 1,450 ರೂ. ಬೆಲೆಗೆ ಮಾರಾಟ ಮಾಡಿದರೆ, ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ನಷ್ಟ ಉಂಟಾಗಲಿದೆ.

ಸಮಸ್ಯೆಗೆ ಸಿಲುಕಿದ ದಾವಣಗೆರೆಯ ಭತ್ತ ಬೆಳೆಗಾರರು

ಖರೀದಿ ಕೇಂದ್ರ ತೆರೆಯಲು ಒತ್ತಾಯ: ದಾವಣಗೆರೆ ಕೃಷಿ ಇಲಾಖೆ ಭತ್ತ ಖರೀದಿ ಕೇಂದ್ರ ತೆರೆಯಲು ಹಿಂದೇಟು ಹಾಕುತ್ತಿದೆ. ಮಳೆಗಾಲ ಸಮೀಪಿಸಿದ್ದರಿಂದ ರೈತರು ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಶ್ರೀರಾಮ್, ಮಾಮೂಲ್ ಸೋನಾ, ಆರ್.ಎನ್​.ಆರ್​ ತಳಿಗಳ ಭತ್ತ ಬೆಳೆಯಲಾಗಿದೆ. ಶ್ರೀರಾಮ್ ತಳಿಯ ಭತ್ತಕ್ಕೆ ಕ್ವಿಂಟಾಲ್​ಗೆ 2,500 ರೂ., ಆರ್.ಎನ್.ಆರ್​ಗೆ 2,000, ಸೋನಾಗೆ 2,000 ರೂ. ಇದ್ದ ದರ, ಈಗ 1,450ರಿಂದ 1,800 ತನಕ ಆಗಿದೆ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ, ಕೃಷಿ ಇಲಾಖೆ ಭತ್ತ ಖರೀದಿ ಕೇಂದ್ರ ತೆರೆದು ಬೆಂಬಲ ನಿಗದಿ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಓದಿ : ರೈತರು ಅನಾಮಧೇಯ ನಕಲಿ ಬಿತ್ತನೆ ಬೀಜಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಡಾ. ಮಲ್ಲಿಕಾರ್ಜುನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.