ETV Bharat / state

ದಾವಣಗೆರೆಯಲ್ಲಿ‌ ನಿನ್ನೆ ಪತ್ತೆಯಾಗಿದ್ದು 200 ಕೊರೊನಾ‌ ಕೇಸ್​​​, 323 ಅಲ್ಲ! - ದಾವಣಗೆರೆ

ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ತಾಂತ್ರಿಕ ದೋಷದಿಂದಾಗಿ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಲ್ಲಿ ತಪ್ಪಾಗಿದೆ.

Dr Raghavan
Dr Raghavan
author img

By

Published : Aug 14, 2020, 12:07 PM IST

ದಾವಣಗೆರೆ: ಜಿಲ್ಲೆಯಲ್ಲಿ‌ ನಿನ್ನೆ ತಾಂತ್ರಿಕ ದೋಷದಿಂದ 323 ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಆದರೆ ವಾಸ್ತವವಾಗಿ ಪಾಸಿಟಿವ್ ಬಂದಿರುವುದು ಇನ್ನೂರು ಪ್ರಕರಣಗಳು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಮೀಡಿಯಾ ಬುಲೆಟಿನ್ ಗ್ರೂಪ್‌ನಲ್ಲಿ ಸ್ಪಷ್ಟನೆ ನೀಡಿರುವ ಅವರು, ಐಸಿಎಂಆರ್ ಪೋರ್ಟಲ್‌ನಲ್ಲಿ 200 ಪ್ರಕರಣಗಳು ಮಾತ್ರ ಅಪ್​​ಲೋಡ್ ಆಗಬೇಕಿತ್ತು. ಆದ್ರೆ ಜಿಲ್ಲೆಯಿಂದ ಪಾಸಿಟಿವ್ ಕೇಸ್​​​ಗಳನ್ನು ಅಪ್‌ಲೋಡ್ ಮಾಡಬೇಕಾದ 'ಪರಿಹಾರ' ಪೋರ್ಟಲ್​​ನಲ್ಲಿ ನಮೂದು ಮಾಡುವಾಗ ಬುಧವಾರದ 123 ಪ್ರಕರಣಗಳು ಉಳಿದುಕೊಂಡಿದ್ದವು. ಡಿಲೀಟ್ ಮಾಡಲು ಪ್ತಯತ್ನಿಸಿದರೂ 123 ಪ್ರಕರಣಗಳು ಹಾಗೆಯೇ ಉಳಿದುಕೊಂಡಿವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಡಬಲ್ ಎಂಟ್ರಿ ಡಿಲೀಟ್ ಮಾಡಲು ಯತ್ನಿಸಲಾಯಿತಾದರೂ ಆಗಲಿಲ್ಲ.‌ ಈ ತಾಂತ್ರಿಕ ದೋಷದಿಂದ ಹೆಚ್ಚುವರಿ ಪ್ರಕರಣಗಳು ರಾಜ್ಯ ಹಾಗೂ ಜಿಲ್ಲಾ ಹೆಲ್ತ್ ಬುಲೆಟಿನ್​​ನಲ್ಲಿ‌ ಕಾಣಿಸಿವೆ ಎಂದು ಮಾಹಿತಿ‌ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.