ETV Bharat / state

ರೈಸ್ ಮಿಲ್​ನಲ್ಲಿ‌‌‌ ವನ್ಯಜೀವಿಗಳು ಪತ್ತೆ ಪ್ರಕರಣ ಬೆನ್ನಲ್ಲೇ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ

ರೈಸ್​ ಮಿಲ್​ನಲ್ಲಿ ವನ್ಯ ಜೀವಿಗಳು ಪತ್ತೆ ಪ್ರಕರಣದ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ ನಾಯಕರಿಂದ ದೂರು-ಪ್ರತಿದೂರು ದಾಖಲು.

author img

By

Published : Dec 29, 2022, 7:31 PM IST

Updated : Dec 29, 2022, 10:19 PM IST

case of finding wild animals in a rice mill
ರೈಸ್ ಮಿಲ್​ನಲ್ಲಿ‌‌‌ ವನ್ಯ ಜೀವಿಗಳು ಪತ್ತೆ ಪ್ರಕರಣ

ದಾವಣಗೆರೆ: ಮಾಜಿ‌ ಸಚಿವರೊಬ್ಬರ ರೈಸ್ ಮಿಲ್​​ನಲ್ಲಿ‌‌‌ ವನ್ಯ ಜೀವಿಗಳ‌ ಪತ್ತೆ ಪ್ರಕರಣ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಶುರುವಾಗಿದೆ. ಎರಡು ಪಕ್ಷಗಳ ಪ್ರಮುಖರಿಂದ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಕಾಂಗ್ರೆಸ್ ‌ಮುಖಂಡರಾದ ಎ‌. ನಾಗರಾಜ್​ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ ಹಾಗೂ ಎಸ್​ ಟಿ ವೀರೇಶ ಸೇರಿ 13 ಜನರ ವಿರುದ್ಧ ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಮಾಜಿ‌ ಸಚಿವರ ರೈಸ್‌ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆ ಕೇಸ್: ಅರಣ್ಯ ಇಲಾಖೆ ಕಚೇರಿಗೆ ಬಿಜೆಪಿ ಮುತ್ತಿಗೆ

ತಮ್ಮ ನಾಯಕರಾದ ಮಾಜಿ ಸಚಿವರನ್ನು ಕಾಡುಗಳ್ಳ ವೀರಪ್ಪನ ರೀತಿ ಬಿಂಬಿಸಿದ್ದಾರೆ‌. ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಪ್ರತಿಭಟನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಎಫ್​ಐಆರ್ ದಾಖಲು‌ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ‌ ಕೌಂಟರ್ ಕೊಟ್ಟಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಕೂಡ ಕೈ ನಾಯಕರ ಮೇಲೆ ಎಫ್​ಐಆರ್ ದಾಖಲು ಮಾಡಿದ್ದಾರೆ.

ಬಿಜೆಪಿ ಸಂಸದ ಜಿ.ಎಂ‌.ಸಿದ್ದೇಶ್ವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರಾದ ಗಡಿಗುಡಾಳ್ ಮಂಜುನಾಥ, ದಿನೇಶ್ ಶೆಟ್ಟಿ ಸೇರಿ ಮೂರು ಜನರ ವಿರುದ್ಧ ಬಿಜೆಪಿ ಮುಖಂಡ ಕೆ. ಮಂಜುನಾಥ ಅವರು ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಫಾರ್ಮ್ ಹೌಸ್​ನಲ್ಲಿ ವನ್ಯಜೀವಿಗಳು ಪತ್ತೆ: ನಿರೀಕ್ಷಣಾ ಜಾಮೀನಿಗಾಗಿ ಆರೋಪಿಗಳಿಂದ ಅರ್ಜಿ

Last Updated : Dec 29, 2022, 10:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.