ETV Bharat / state

ಹಾಲುಮತ ಸಮುದಾಯದ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ : ಸಿಎಂ ಬಿಎಸ್​ವೈ - ಕನಕ ಗುರುಪೀಠದಲ್ಲಿ ಸಿಎಂ ಬಿಎಸ್​ವೈ ಭಾಷಣ

ಚಿತ್ರದುರ್ಗದಲ್ಲಿ ಕನಕ ಏಕಶಿಲಾ ವಿಗ್ರಹ ನಿರ್ಮಾಣಕ್ಕೆ 5 ಕೋಟಿ ರೂ. ಹಣ ಬಿಡುಗಡೆ ಮಾಡುತ್ತೇವೆ. ರಾಯಣ್ಣ ಪ್ರಾಧಿಕಾರಕ್ಕೆ ಹಂಚಿಕೆಯಾದ ಅನುದಾನದಲ್ಲಿ 30 ಕೋಟಿ ರೂ. ಬಿಡುಗಡೆಯಾಗಲು ಬಾಕಿಯಿದೆ ಎಂದು ಹೇಳಲಾಗ್ತಿದೆ. ಅದನ್ನೂ ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ..

CM BSY Statement on Kuruba ST Reservation
ಸಿಎಂ ಬಿ.ಎಸ್​.ಯಡಿಯೂರಪ್ಪ
author img

By

Published : Apr 4, 2021, 3:33 PM IST

Updated : Apr 4, 2021, 3:49 PM IST

ದಾವಣಗೆರೆ : ಹಾಲುಮತ ಸಮುದಾಯವನ್ನು ಎಸ್ಟಿ ಸೇರ್ಪಡೆಗೊಳಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ ಎಂದು ಸಿಎಂ ಬಿ ಎಸ್​ ಯಡಿಯೂರಪ್ಪ ತಿಳಿಸಿದರು.

ಹರಿಹರ ತಾಲೂಕಿನ ಬೆಳ್ಳೂಡಿ ಕನಕ ಗುರುಪೀಠದಲ್ಲಿ ಮಾತನಾಡಿದ ಅವರು, ಹಾಲುಮತ ಸಮುದಾಯದ ಕುಲಶಾಸ್ತ್ರ ಅಧ್ಯಯನಕ್ಕೆ ಈಗಾಗಲೇ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಲಾಗಿದೆ.

ಮೀಸಲಾತಿ ಕುರಿತಂತೆ ಸಿಎಂ ಬಿ ಎಸ್ ಯಡಿಯೂರಪ್ಪ ಮಾತನಾಡಿರುವುದು..

ಅಲ್ಲದೆ, ಮೀಸಲಾಯಿಯನ್ನು ಶೇ.50ಕ್ಕೆ ಏರಿಸಲು ಅನುವು ಮಾಡಿಕೊಡುವಂತೆ ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಲಾಗಿದೆ. ಕೋರ್ಟ್ ಮೀಸಲಾತಿ ಹೆಚ್ಚಿಸಲು ಅವಕಾಶ ಕೊಟ್ಟರೆ ಎಲ್ಲಾ ಸಮುದಾಯಗಳಿಗೂ ಹೆಚ್ಚಿನ ಮೀಸಲಾತಿ ನೀಡಲು ಸಾಧ್ಯವಾಗುತ್ತದೆ ಎಂದರು.

ಓದಿ : ಮುಂದಿನ ಚುನಾವಣೆಗೆ ಸಿದ್ದರಾಮಯ್ಯರನ್ನ ಸಿಎಂ ಮಾಡ್ತೇವೆಂದು ಹೇಳಲಿ, ಆಗ ಒಪ್ಪುತ್ತೇನೆ- ಹೆಚ್‌ ಡಿ ರೇವಣ್ಣ

ಚಿತ್ರದುರ್ಗದಲ್ಲಿ ಕನಕ ಏಕಶಿಲಾ ವಿಗ್ರಹ ನಿರ್ಮಾಣಕ್ಕೆ 5 ಕೋಟಿ ರೂ. ಹಣ ಬಿಡುಗಡೆ ಮಾಡುತ್ತೇವೆ. ರಾಯಣ್ಣ ಪ್ರಾಧಿಕಾರಕ್ಕೆ ಹಂಚಿಕೆಯಾದ ಅನುದಾನದಲ್ಲಿ 30 ಕೋಟಿ ರೂ. ಬಿಡುಗಡೆಯಾಗಲು ಬಾಕಿಯಿದೆ ಎಂದು ಹೇಳಲಾಗ್ತಿದೆ. ಅದನ್ನೂ ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದರು.‌

Last Updated : Apr 4, 2021, 3:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.