ದಾವಣಗೆರೆ: ನಾಪತ್ತೆಯಾಗಿರುವ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ನ ಕಾರು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ರಸ್ತೆಯ ಪೆಟ್ರೋಲ್ ಬಂಕ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಮವಾರ ರಾತ್ರಿ 11.47 ಸುಮಾರು ಸುರಹೊನ್ನೆ ರಸ್ತೆಯಿಂದ ಹೊನ್ನಾಳಿ ಕಡೆಗೆ ತೆರಳಿರುವ ಕಾರಿನ ದೃಶ್ಯಗಳಿಗಳು ಈಟಿವಿಗೆ ದೊರೆತಿದೆ.
ಆದರೆ ಹೊನ್ನಾಳಿಗೆ ಕಾರು ಬಂದಿಲ್ಲ ಎಂದು ಚಂದ್ರಶೇಖರ್ ಕುಟುಂಬದವರು ವಾದವಾಗಿದೆ. ಕಾರು ಪಾಸಾಗಿರುವ ದೃಶ್ಯ ಪೆಟ್ರೋಲ್ ಬಂಕ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಾಪತ್ತೆಯಾಗಿರುವ ಚಂದ್ರಶೇಖರ್ ಯಾವ ಕಡೆಗೆ ತೆರಳಿದ್ದಾರೆ ಎಂಬ ಬಗ್ಗೆ ಗೊಂದಲ ಮೂಡಿದ್ದು, ರೇಣುಕಾಚಾರ್ಯ ಹಾಗೂ ಕುಟುಂಬದವರಲ್ಲಿ ಆತಂಕ ಮನೆಮಾಡಿದೆ. ರೇಣುಕಾಚಾರ್ಯ ಸಹೋದರ ಎಂ.ಪಿ ರಮೇಶ್ ಪುತ್ರ ಚಂದ್ರಶೇಖರ ನಾಪತ್ತೆಯಾಗಿ ಇಂದಿಗೆ ಮೂರು ದಿನಗಳು ಕಳೆದರು ಕೂಡ ಪತ್ತೆಯಾಗದ ಬೆನ್ನಲ್ಲೇ ಪೋಲಿಸ್ ಇಲಾಖೆ ತನಿಖೆ ನಡೆಸುತ್ತಿದೆ.
ಚಂದ್ರಶೇಖರ್ ರೂಂ ಪರಿಶೀಲನೆ ಮಾಡುತ್ತಿರುವ ಎಸ್ಪಿ ಸಿಬಿ ರಿಷ್ಯಂತ್: ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ಗಂಟೆಗಳ ಕಾಲ ಚಂದ್ರಶೇಖರ್ ರೂಂನ್ನು ಎಸ್ಪಿ ಸಿಬಿ ರಿಷ್ಯಂತ್ ಪರಿಶೀಲನೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ ನಿವಾಸದಲ್ಲಿರುವ ಚಂದ್ರಶೇಖರ್ನ ಪ್ರತ್ಯೇಕ ರೂಂ ಅನ್ನು ರಿಷ್ಯಂತ್, ಹೊನ್ನಾಳಿ ಸಿಪಿಐ ಸಿದ್ದೇಗೌಡ ಸೇರಿ ರೂಂ ಪರಿಶೀಲನೆ ಮಾಡಿದ್ದು, ಚಂದ್ರು ಅವರ ಆಪ್ತರ ಹಾಗೂ ಪೋಷಕರ ಬಳಿ ಮಾಹಿತಿ ಪಡೆದಿದ್ದಾರೆ.
ಎರಡು ಗಂಟೆಗಳ ಕಾಲ ಕುಟುಂಬಸ್ಥರ ವಿಚಾರಣೆ ಮಾಡಿದ ಎಸ್ಪಿ ರಿಷ್ಯಂತ: ಸತತ ಎರಡು ಗಂಟೆಗಳ ಕಾಲ ಕುಟುಂಬಸ್ಥರನ್ನು ಎಸ್ಪಿ ವಿಚಾರಣೆ ಮಾಡಿದ್ದಾರೆ. ಚಂದ್ರಶೇಖರ ತಂದೆ ರಮೇಶ್ ಹಾಗೂ ಶಾಸಕ ರೇಣುಕಾಚಾರ್ಯ, ಉಳಿದ ಕುಟುಂಬ ಸದಸ್ಯರ ಜೊತೆ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಂತರ ಎಸ್ಪಿ ರಿಷ್ಯಂತ್ ಪ್ರತಿಕ್ರಿಯಿಸಿ, ಚಂದ್ರಶೇಖರ ನಾಪತ್ತೆ ಬಗ್ಗೆ ತನಿಖೆ ನಡೀತಾ ಇದೆ. ಶಿವಮೊಗ್ಗದಿಂದ ನ್ಯಾಮತಿ ಕಡೆ ಬಂದಿರುವ ಬಗ್ಗೆ ಮಾಹಿತಿ ಇದೆ, ಏನಾಗಿದೆ ಎಂಬುವುದರ ಬಗ್ಗೆ ಸದ್ಯಕ್ಕೆ ಹೇಳುವುದಕ್ಕೆ ಆಗಲ್ಲ, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಸಾಂತ್ವನ ಹೇಳಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ: ರೇಣುಕಾಚಾರ್ಯ ಅವರ ಅಣ್ಣನ ಮಗ ಕಾಣೆಯಾಗಿದ್ದಕ್ಕೆ ಶಾಸಕರು ನೋವಿನಲ್ಲಿ ಇದ್ದಾರೆ, ಅವರಿಗೆ ಧೈರ್ಯ ತುಂಬಿದ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ, ಎಸ್ಪಿ ಅವರ ಜೊತೆ ಈಗಾಗಲೇ ಮಾತನಾಡಿದ್ದೇನೆ, ನಾಪತ್ತೆಯಾಗಿರುವ ಚಂದ್ರು ಕಾರು ಶಿವಮೊಗ್ಗದಿಂದ ಸುರಹೊನ್ನೆ ವರೆಗೆ ಮಾತ್ರ ಟ್ಯ್ರಾಕ್ ಆಗಿದೆ, ಅಲ್ಲಿಂದ ಈ ಕಡೆ ಬಂದಿರುವ ಸುಳಿವು ಸಿಗುತ್ತಿಲ್ಲ, ಎಸ್ಪಿ ಅವರು ಕೂಡ ಅದಷ್ಟು ಬೇಗ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಸಹೋದರನ ಪುತ್ರ ಕಣ್ಮರೆ: ಊಟ ಬಿಟ್ಟ ಶಾಸಕ ರೇಣುಕಾಚಾರ್ಯಗೆ ಪುತ್ರಿಯಿಂದ ಕೈತುತ್ತು