ETV Bharat / state

ಆಗ್ನೇಯ ಪದವೀಧರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ: ಸಂಸದ ಸಿದ್ದೇಶ್ವರ

ಈ ಬಾರಿ ನಡೆಯಲಿರುವ ಆಗ್ನೇಯ ಪದವೀಧರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯ ಸಾಧಸಲಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

author img

By

Published : Oct 23, 2020, 8:58 PM IST

MP SIddeshwar
MP SIddeshwar

ಹರಿಹರ: ಅ.28 ರಂದು ನಡೆಯಲಿರುವ ಆಗ್ನೇಯ ಪದವೀಧರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಶಾಲಿಯಾಗಲಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿ ನಂತರ ಮಾತನಾಡಿದ ಅವರು, ಸುಶಿಕ್ಷಿತರು ಬಿಜೆಪಿ ಪರವಿದ್ದು ನಮ್ಮ ಪಕ್ಷದ ಅಭ್ಯರ್ಥಿ ಬಾರಿ ಅಂತರದಿಂದ ಜಯಗಳಿಸಲಿದ್ದಾರೆ ಎಂದರು.

ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, ಸಾವಿರಾರು ಶಿಕ್ಷಕರನ್ನು ನೇಮಕ ಮಾಡಿದ್ದಲ್ಲದೇ ಶಿಕ್ಷಕರ ಮತ್ತು ಉಪನ್ಯಾಸಕರ ಹಲವಾರು ಬೇಡಿಕೆಗಳನ್ನು ಈಡೇರಿಸಿದ್ದಾರೆ. ಸಮಾಜದ ಎಲ್ಲ ಸಮಸ್ಯೆಗಳಿಗೆ ಮೌಲ್ಯಾಧಾರಿತ ಗುಣಾತ್ಮಕ ಶಿಕ್ಷಣವೊಂದೇ ಪರಿಹಾರ ಎನ್ನುವ ನಂಬಿಕೆ ಇರುವ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಿದ್ದು, ಪ್ರಥಮ ಪ್ರಾಶಸ್ತ್ಯ ಮತ ನೀಡುವಂತೆ ಮನವಿ ಮಾಡಿದರು.

ಅಭ್ಯರ್ಥಿ ಚಿದಾನಂದ್.ಎಂ.ಗೌಡ ಪರ ಮತಯಾಚಿಸಲು ಭಾನುವಾರ ದಾವಣಗೆರೆಗೆ ಸಿಎಂ ಬಿ.ಎಸ್.ಯಡಿಯ್ಯೂರಪ್ಪ ಆಗಮಿಸಲಿದ್ದು, ಜಿಲ್ಲೆಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಂಜೂರಾದ ಯಾವುದೇ ಕಂಪನಿಗಳು ಹರಿಹರದಿಂದ ಸ್ಥಳಾಂತರವಾಗುವುದಿಲ್ಲ :

ತಾಲೂಕಿನ ಹನಗವಾಡಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಎಂಆರ್‌ಪಿಎಲ್ ಕಾರ್ಖಾನೆ ಮತ್ತು ಕುರುಬರಹಳ್ಳಿ ಬಳಿಯ ಯೂರಿಯಾ ಉತ್ಪಾದನಾ ಕಾರ್ಖಾನೆಗಳನ್ನು ಯಾವುದೇ ಕಾರಣಕ್ಕೂ ಬೇರೆಡೆ ಸ್ಥಳಾಂತರವಾಗುವುದಿಲ್ಲ. ಸಾರ್ವಜನಿಕರು ಅನಾವಶ್ಯಕ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಸಂಸದ ಜಿ.ಎಂ ಸಿದ್ದೇಶ್ವರ ಸ್ಪಷ್ಟಪಡಿಸಿದರು.

ದೇಶದಲ್ಲಿ ಕೊರೊನಾದಿಂದ ಅಭಿವೃದ್ಧಿ ಕೆಲಸಗಳು ತಡವಾಗುತ್ತಿವೆಯೇ ಹೊರತು ವಿಳಂಬವಾಗುತ್ತಿಲ್ಲ. ಸೋಂಕಿನ ಹರಡುವಿಕೆಯಿಂದ ವಿದೇಶದಿಂದ ಬರಬೇಕಾದ ಸಾಮಗ್ರಿಗಳು ಬಂದಿಲ್ಲ. 2021 ಮಾರ್ಚ್ ತಿಂಗಳಲ್ಲಿ ಹನಗವಾಡಿಯ ಎಂಆರ್‌ಪಿಎಲ್ ಕಾರ್ಖಾನೆಯ ಕೆಲಸ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಕುರುಬರಹಳ್ಳಿ ಬಳಿಯ ಯೂರಿಯಾ ಉತ್ಪಾದನಾ ಕಾರ್ಖಾನೆಗೆ ಈಗಾಗಲೇ 320 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಈ ಕಂಪನಿಯೂ ಸಹ ಮುಂದಿನ ವರ್ಷದಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸುತ್ತದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಳಿ ಈ ವಿಷಯ ಕುರಿತು ಅನೇಕ ಸಾರಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ಎರಡು ಕಂಪನಿಗಳು ಹರಿಹರ ಬಿಟ್ಟು ಬೇರೆಡೆ ಸ್ಥಳಾಂತರಿಸುವುದಿಲ್ಲ ಎಂದು ಜನರಲ್ಲಿದ್ದ ಗೊಂದಲಕ್ಕೆ ತೆರೆ ಎಳೆದರು.

ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ಶ್ರೀದೇವಿ.ಎಂ, ನಗರಸಭಾ ಸದಸ್ಯರಾದ ನೀತಾ ಮೇಹರ್‍ವಾಡೆ, ಆಟೋ ಹನುಮಂತಪ್ಪ, ರಜನಿಕಾಂತ್, ಅಶ್ವಿನಿ, ದೂಡಾ ಸದಸ್ಯ ರಾಜು ರೊಖಡೆ, ಗ್ರಾಮಾಂತರ ಅಧ್ಯಕ್ಷ ಲಿಂಗರಾಜು, ಪ್ರಧಾನ ಕಾರ್ಯದರ್ಶಿಗಳಾದ ಎಚ್. ಮಂಜಾನಾಯ್ಕ್, ಮಾರುತಿ ಶೆಟ್ಟಿ, ಮುಖಂಡರಾದ ಬಾತಿ ಚಂದ್ರಶೇಖರ್, ರಾಘವೇಂದ್ರ ಕೊಂಡಜ್ಜಿ, ಆನಂದ್ ಕುಮಾರ್, ಪ್ರವೀಣ್, ತುಳುಜಪ್ಪ ಭೂತೆ, ವೀರೇಶ್ ಆಚಾರ್, ರವಿ.ಆರ್, ಸುರೇಶ್ ಸ್ವಾಮಿ, ಮಾಜಿ ಶಾಸಕ ಬಿ.ಪಿ ಹರೀಶ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.