ದಾವಣಗೆರೆ: ಸಾವಿರ ರಾಜಕಾರಣಿಗಳಿಗೆ ಆಶೀರ್ವಾದ ಮಾಡಿ ಗೆಲ್ಲಿಸುವ ಬದಲಿಗೆ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡ ಮಾಜಿ ಶಾಸಕರುಗಳನ್ನು ಮುಂದಿನ ದಿನಗಳಲ್ಲಿ ಶಾಸಕರನ್ನಾಗಿ ಮಾಡುವುದೇ ನನ್ನ ಗುರಿ ಎಂದು ಕೂಡಲಸಂಗಮದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಶ್ರೀ ತಿಳಿಸಿದರು.
ಹರಿಹರ ಪಟ್ಟಣದಲ್ಲಿ ನಡೆದ ಶರುಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಶಂಕರ್, ವಿಜಯಾನಂದ ಕಾಶಪ್ಪನವರ, ಸಿ.ಸಿ. ಪಾಟೀಲ್ ಸೇರಿದಂತೆ ಹಾಲಿ ಶಾಸಕರಾಗಿರುವ ಅರವಿಂದ್ ಬೆಲ್ಲದ, ಯತ್ನಾಳ್ ಅವರನ್ನು ಮುಂದಿನ ದಿನಗಳಲ್ಲಿ ಶಾಸಕರನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಓದಿ: ಪಂಚಮಸಾಲಿ ಹೋರಾಟ ನಿರ್ಲಕ್ಷಿಸಿದರೆ ಅಕ್ಟೋಬರ್ನಿಂದ ಮತ್ತೆ ಧರಣಿ: ಬಸವ ಜಯಮೃತ್ಯುಂಜಯ ಶ್ರೀ
ಭಕ್ತರ ಮೇಲೆ ಅನುಮಾನವೊಂದು ಹುಟ್ಟಿಕೊಂಡಿತ್ತು. ಸಮಾಜದ ಪರ ಇರುವ ಶ್ರೀಗೆ ಗೌರವ ಕೊಡ್ತಾರೋ? ಅಥವಾ ಬಣ್ಣದ ಮಾತುಗಳನ್ನಾಡುವವರಿಗೆ ಗೌರವ ಕೊಡ್ತಾರೋ? ಎಂದು ಅಗ್ನಿ ಪರೀಕ್ಷೆ ಶುರುವಾದಾಗ ನಾನು ಪಾದಯಾತ್ರೆ ಆರಂಭಿಸಿದೆ. ನೀವು ನಿಜವಾದ ಚೆನ್ನಮ್ಮಳ ಮಕ್ಕಳು. ನೀವು ಬಣ್ಣದ ಮಾತುಗಳಿಗೆ ಬೆಲೆ ಕೊಡಲಿಲ್ಲ. ಬದಲಾಗಿ ನಿಜವಾದ ಹೋರಾಟಗಾರರಿಗೆ, ಸ್ವಾವಲಂಬಿಗಳಿಗೆ ಬೆಲೆ ನೀಡಿದ್ದೀರಿ ಎಂದು ಹರಿಹರಿದ ವಚನಾನಂದ ಶ್ರೀಗೆ ಟಾಂಗ್ ನೀಡಿದರು.