ETV Bharat / state

ಎಸಿ ನೇತೃತ್ವದಲ್ಲಿ ಅಕ್ರಮ ಕ್ಯಾಟ್ ಫಿಶ್ ಸಾಕಣೆ ಅಡ್ಡೆಗಳ ಮೇಲೆ ದಾಳಿ..

ಕಡಿಮೆ ಬೆಲೆ ನಿಗದಿ ಆಗಿರುವ ಕಾರಣ ಗ್ರಾಹಕರು ತಿಳಿಯದೇ ಈ ಮೀನನ್ನು ಖರೀದಿ ಮಾಡುತ್ತಾರೆ. ಈ ಮೀನುಗಳಲ್ಲಿ ಪಾದರಸ ಅಂಶವಿದ್ದು, ಮನುಷ್ಯನ ನರವ್ಯೂಹಕ್ಕೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಕ್ಯಾನ್ಸರ್ ಕಾರಕ ಅಂಶವಿದ್ದು, ಗರ್ಭಿಣಿಯರು ತಿಂದರೆ ಹುಟ್ಟುವ ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗುತ್ತಿದೆ.

author img

By

Published : Apr 11, 2020, 4:18 PM IST

Attack on illegal catfish farms in Davanagere
ಅಕ್ರಮ ಕ್ಯಾಟ್ ಫಿಶ್ ಸಾಕಣೆ ಅಡ್ಡೆಗಳ ಮೇಲೆ ದಾಳಿ

ದಾವಣಗೆರೆ : ಹೊಂಡಗಳಲ್ಲಿ ಅಕ್ರಮವಾಗಿ ಆಫ್ರಿಕನ್ ಕ್ಯಾಟ್ ಫಿಶ್‌ಗಳ ಸಾಕಣೆ ಮಾಡುತ್ತಿದ್ದ ಸ್ಥಳಗಳ ಮೇಲೆ ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ನೇತೃತ್ವದ ತಂಡ ದಾಳಿ ನಡೆಸಿದೆ.‌

ಅಕ್ರಮ ಕ್ಯಾಟ್‌ ಫಿಶ್ ಸಾಕಣೆ ಅಡ್ಡೆಗಳ ಮೇಲೆ ದಾಳಿ..

ದೇಶಾದ್ಯಂತ ಆಫ್ರಿಕನ್ ಕ್ಯಾಟ್‌ ಫಿಶ್‌ಗಳ ಸಾಕಣೆ ನಿಷೇಧಿಸಲಾಗಿತ್ತು. ಆದರೂ ಹರಿಹರ ತಾಲೂಕಿನ ಎಳೆಹೊಳೆ ಗ್ರಾಮ ಪಂಚಾಯತ್‌ನ ಮಳಲಿಹಳ್ಳಿ ಗ್ರಾಮದ ಹೊರವಲಯದಲ್ಲಿ ಗೌರಮ್ಮ ಮತ್ತು ರಾಮನಗೌಡ ಅವರಿಗೆ ಸೇರಿದ ಸುಮಾರು ಹತ್ತು ಎಕರೆ ಜಮೀನಿನ 8 ಕೊಳಗಳಲ್ಲಿ ಯಾರಿಗೂ ತಿಳಿಯದಂತೆ ಕ್ಯಾಟ್‌ ಫಿಶ್ ಸಾಕಲಾಗಿತ್ತು. ಊರ ಹೊರವಲಯದಲ್ಲಿ ಈ ಕೊಳ ಇದ್ದ ಕಾರಣ ಕ್ಯಾಟ್‌ಫಿಶ್ ಸಾಕಣೆ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೂ ಮಾಹಿತಿ ಪಡೆದುಕೊಂಡ ಮೀನುಗಾರಿಕೆ ಇಲಾಖೆ ಎಸಿ ಮಮತಾ ಹೊಸಗೌಡರ ದಾಳಿ ನಡೆಸಿದ್ದಾರೆ.

ಕ್ಯಾಟ್ ಫಿಶ್ ಹೊಂಡಗಳ ತೆರವು ಕಾರ್ಯಾಚರಣೆ ಮಾಡಲಾಗಿದ್ದು, ಅಧಿಕಾರಿಗಳ ತಂಡ ಅವುಗಳನ್ನು ನಾಶ ಮಾಡಿದೆ. ಈ ಕೊಳದಲ್ಲಿ 10 ರಿಂದ 15 ಟನ್ ಫಿಶ್ ಸಾಕಣೆ ಮಾಡಲಾಗುತ್ತಿದೆ. ಇಲ್ಲಿನ ಕ್ಯಾಟ್‌ಫಿಶ್ ಮೀನುಗಳು ಉತ್ತರಪ್ರದೇಶ, ಬಿಹಾರ ರಾಜ್ಯಕ್ಕೆ ಸರಬರಾಜು ಮಾಡಲಾಗುತಿತ್ತು. ಒಂದು ಮೀನು ₹100 ದಿಂದ 200 ರೂ.ಗೆ ಮಾರಾಟ ಮಾಡಲಾಗ್ತಾಯಿತ್ತು. ಕ್ಯಾಟ್ ಫಿಶ್‌ಗಳನ್ನು ಹಕ್ಕಿಗಳು ತಿನ್ನಬಾರದೆಂದು ಬಲೆ ಹಾಕಲಾಗಿತ್ತು. ಮೀನುಗಳನ್ನು ತಿನ್ನಲು ಬರುತ್ತಿದ್ದ ಹಕ್ಕಿಗಳು ಬಲೆಗೆ ಸಿಲುಕಿ ಸಾಯುತ್ತಿದ್ದವು. ಮೀನುಗಳಿಗೆ ಕೋಳಿ ಮಾಂಸ ಹಾಕುತ್ತಿದ್ದ ಕಾರಣ ನಾಯಿಗಳು ಕೂಡ ಇಲ್ಲಿಗೆ ಬರುತ್ತಿದ್ದವು. ಈ ನಾಯಿಗಳು ಅಕ್ಕಪಕ್ಕದಲ್ಲಿನ ಕೋಳಿ ಫಾರಂನ ಕೋಳಿಗಳನ್ನು ತಿನ್ನುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಕ್ಯಾಟ್ ಫಿಶ್ ಅಪಾಯವೇಕೆ? : ಕ್ಯಾಟ್ ಫಿಶ್‌ಗಳನ್ನು ಕೊಳೆತ ಕೊಳದೊಳಗೆ ಸಾಕಲಾಗುತ್ತದೆ. ಈ ಮೀನಿಗೆ ಆಹಾರವಾಗಿ ಸತ್ತ ಪ್ರಾಣಿಗಳು, ಸತ್ತ ದನ ಮತ್ತು ನಾಯಿಯ ಶವ ಹಾಕಲಾಗುತ್ತದೆ. ಅದನ್ನೇ ತಿಂದ ಕ್ಯಾಟ್ ಫಿಶ್‌ಗಳು ದಷ್ಟ ಪುಷ್ಟವಾಗಿ ಬೆಳೆಯುತ್ತವೆ. ಕಡಿಮೆ ಬೆಲೆ ನಿಗದಿ ಆಗಿರುವ ಕಾರಣ ಗ್ರಾಹಕರು ತಿಳಿಯದೇ ಈ ಮೀನನ್ನು ಖರೀದಿ ಮಾಡುತ್ತಾರೆ. ಈ ಮೀನುಗಳಲ್ಲಿ ಪಾದರಸ ಅಂಶವಿದ್ದು, ಮನುಷ್ಯನ ನರವ್ಯೂಹಕ್ಕೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಕ್ಯಾನ್ಸರ್ ಕಾರಕ ಅಂಶವಿದ್ದು, ಗರ್ಭಿಣಿಯರು ತಿಂದರೆ ಹುಟ್ಟುವ ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗುತ್ತಿದೆ.

ಎಂಟು ಕೊಳಗಳಲ್ಲಿ ಸಾಕಲಾಗುತ್ತಿದ್ದ ಮೀನುಗಳನ್ನು ಗುಂಡಿಯಲ್ಲಿ ಹಾಕಿ ನಾಶ ಮಾಡಲಾಗಿದೆ. ಕೊಳದ ನೀರನ್ನು ಇನ್ನೊಂದು ಕೊಳದಲ್ಲಿ ಹರಿಬಿಡಲಾಗುತ್ತಿದೆ. ಬೇರೆಯವರ ಜಮೀನಿನನಲ್ಲಿ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಲಾಗಿತ್ತು. ಇದು ನಿಷೇಧಿತವಾಗಿದ್ದರಿಂದ ಅದನ್ನು ನಾಶ ಮಾಡುತ್ತಿದ್ದೇವೆ. ಇನ್ನೊಮ್ಮೆ ಹೀಗೆ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಸಿ ಮಮತಾ ಹೊಸಗೌಡರ್ ಎಚ್ಚರಿಕೆ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.