ETV Bharat / state

ಸತತ ಆರನೇ ಬಾರಿ ಆಯ್ಕೆಯಾದ ಅಭ್ಯರ್ಥಿ! - Gram Panchayat Result

ಅಭ್ಯರ್ಥಿಯೊಬ್ಬ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಕಂಡು ಕ್ಷೇತ್ರದ ಜನ ಸತತವಾಗಿ 6ನೇ ಬಾರಿ ಆರಿಸಿ ತಂದಿದ್ದಾರೆ. ಈ ಬಾರಿಯ ಗೆಲುವನ್ನು ಅಭ್ಯರ್ಥಿ ತಮ್ಮ ಕ್ಷೇತ್ರದ ಜನರಿಗೆ ಅರ್ಪಿಸಿದರು.

A candidate won six times in Kadlebalulu Gram Panchayat
ಸತತವಾಗಿ ಆರು ಬಾರಿ ಆಯ್ಕೆಯಾದ ಅಭ್ಯರ್ಥಿ
author img

By

Published : Dec 30, 2020, 9:08 PM IST

ದಾವಣಗೆರೆ: ತಾಲೂಕಿನ ಕಡ್ಲೆಬಾಳ್ಲು ಗ್ರಾಮ ಪಂಚಾಯಿತಿಯ ಮಾಳಗೊಂಡನ ಹಳ್ಳಿ(ಮಾಗನಹಳ್ಳಿ) ಕ್ಷೇತ್ರದಿಂದ ಅಭ್ಯರ್ಥಿಯೊಬ್ಬರು ಆರನೇ ಬಾರಿ ಗೆಲುವಿನ ನಗೆ‌ ಬೀರಿದರು. ಪರಶುರಾಮ್ ಆರನೇ ಬಾರಿ ಗೆಲುವು ಸಾಧಿಸಿದ್ದು, ಈ ಗೆಲುವನ್ನು ತಮ್ಮ ಕ್ಷೇತ್ರದ ಜನರಿಗೆ ಅರ್ಪಿಸಿದರು.

ಪರಶುರಾಮ್ ಕಾಂಗ್ರೆಸ್ ಬೆಂಬಲಿತ‌ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ಇವರು ಮಾಡಿದ ಅಭಿವೃದ್ಧಿ ಕೆಲಸ ಕಂಡು ಇಷ್ಟು ಬಾರಿ ಆರಿಸಿ ತಂದಿದ್ದಾರಂತೆ.

ಇದನ್ನೂ ಓದಿ : ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ದಂಪತಿ

ಗೆಲುವಿನ ಬಳಿಕ ಮಾತನಾಡಿದ ಅವರು, ಮಾಜಿ ಸಚಿವ ಎಸ್.ಎಸ್​.ಮಲ್ಲಿಕಾರ್ಜುನ್ ಅವರು ನೀಡಿದ ಅನುದಾನ ಹಾಗೂ ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಕಂಡು ಜನ ಇಷ್ಟು ಬಾರಿ ಆರಿಸಿ ತಂದಿದ್ದಾರೆ. ನೀಡಿದ ಭರವಸೆಗಳನ್ನು ಈಡೇರಿಸವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಪರಶುರಾಮ್ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.